ಪಾಣಾಜೆ ಸುನ್ನೀ ಸಂಘಟನೆಗಳಿಂದ ಶಿಕ್ಷಕರ ದಿನಾಚರಣೆ ಶಿಕ್ಷಕರಾದ ಅಬ್ದುಲ್ ಬಶೀರ್ ಮದನಿ , ನಿರ್ಮಲ ಕೆ , ಸುನೀತಿ ಪಿ , ವಿಶಾಲಾಕ್ಷಿ ಪಿ ಇವರಿಗೆ ಶಿಕ್ಷಕರ ದಿನಾಚರಣೆಯ ಗೌರವ ಸನ್ಮಾನ
ಪುತ್ತೂರು: ಸುನ್ನೀ ಕೊಆರ್ಡಿನೇಷನ್ ಸಮಿತಿ ಪಾಣಾಜೆ, ಕೆಎಂಜೆ, ಎಸ್ ವೈ ಎಸ್, ಎಸ್ ಎಸ್ ಎಫ್ ಪಾಣಾಜೆ ಹಾಗೂ ಕೆ ಸಿ ಎಫ್ ಇದರ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆ ಮತ್ತು ಸಾಧನೆ ಮಾಡಿದ ಶಿಕ್ಷಕರಿಗೆ ಗೌರವ ಸನ್ಮಾನ ಕಾರ್ಯಕ್ರಮವು ಸೆ 6 ರಂದು ಪಾಣಾಜೆ ವಿವೇಕ್ ಹಿರಿಯ ಪ್ರಾಥಮಿಕ ಶಾಲೆ ಯ ಸಭಾಂಗಣದಲ್ಲಿ ಸುನ್ನೀ ಕೋ ಆರ್ಡಿನೇಷನ್ ಸಮಿತಿಯ ಅಧ್ಯಕ್ಷರಾದ ಡಾ.ಹಾಜಿ.ಯಸ್.ಅಬೂಬಕ್ಕರ್ ಆರ್ಲಪದವು ಇವರ ಅಧ್ಯಕ್ಷತೆಯಲ್ಲಿ ಜರಗಿತು.
ಈ ಸಂದರ್ಭದಲ್ಲಿ ಪ್ರಾಣಾಜೆ ಅಫ್ರಾ ಮಸ್ಜಿದ್ ಖತೀಬರು ಸುಲ್ತಾನಿಯ್ಯ ಮದರಸದ ಮುಖ್ಯ ಗುರುಗಳಾದ ಅಬ್ದುಲ್ ಬಶೀರ್ ಮದನಿ, ಪಾಣಾಜೆ ಸುಬೋಧ ಪ್ರೌಢಶಾಲೆಯ ಮುಖ್ಯಗುರು ನಿರ್ಮಲ ಕೆ, ವಿವೇಕ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಗುರು ಸುನೀತಿ ಪಿ , ಪಾಣಾಜೆ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ವಿಶಾಲಾಕ್ಷಿ ಇವರನ್ನು ಶಿಕ್ಷಕರ ದಿನಾಚರಣೆಯ ಅಂಗವಾಗಿ ಗೌರವಿಸಿ ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮೈಮೂನತುಲ್ ಮೆಹ್ರಾ, ಸದಸ್ಯರಾದ ನಾರಾಯಣ ನಾಯಕ್ ಪಾಣಾಜೆ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷರಾದ ಪಿ ಜಿ ಶಂಕರ ನಾರಾಯಣ ಭಟ್ ಉದ್ಯಮಿಗಳಾದ ಮೂಸೆ ಕುಂಞ ಹಾಜಿ ಕಂಚಿಲ್ಕುಂಜ, ಪಾಣಾಜೆ ಸರಕಾರಿ ಪ್ರಾಥಮಿಕ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಉಮ್ಮರ್ ಜನಪ್ರಿಯ ಪಾಣಾಜೆ ವಿವೇಕ್ ಆಂಗ್ಲ ಮಾಧ್ಯಮ ಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಬೂಬಕ್ಕರ್ ಇಬ್ರಾಹಿಂ ಭಾಗವಹಿಸಿ ಸಂದರ್ಭೋಚಿತವಾಗಿ ಮಾತನಾಡಿದರು.
ವಿವೇಕ್ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕರಾದ ಸುಧಾ ಬಿ, ರವಿ ಶೋಭ, ಶ್ರುತಿ, ರುಫಾ, ಜಯಶ್ರೀ, ಜ್ಯೋತಿ ಕೆ, ರಂಸೀನಾ, ಅಶ್ವಿನಿ, ನವ್ಯ, ಸೌಮ್ಯ, ಇವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು ವೇದಿಕೆಯಲ್ಲಿ ಹಸನ್ ಶಾಫಿ ಕಂಚಿಲ್ಕುಂಜ, ಸುನ್ನಿ ಕೋ ಆರ್ಡಿನೇಷನ್ ಸಮಿತಿ ಪಾಣಾಜೆ ಇದರ ಪ್ರಧಾನ ಕಾರ್ಯದರ್ಶಿ ಜೆ ಎಸ್ ಶಿಹಾಬುದ್ಧೀನ್, ಕೋಶಾಧಿಕಾರಿ ಎ ಎಸ್ ಅಬೂಬಕರ್ ಉಪಾಧ್ಯಕ್ಷರಾದ ಮೂಸಾ ಆರ್ಲಪದವು, ಜತೆಕಾರ್ಯದರ್ಶಿ ಗಳಾದ ಸಿದ್ದೀಖ್ ಕಲ್ಲಪದವು, ಇಹ್ಸಾನ್ ಕಾನ, ಶಾನಿದ್ ಆರ್ಲಪದವು , ಎಸ್ ಎಸ್ ಎಫ್ ಪಾಣಾಜೆ ಯೂನಿಟ್ ಅಧ್ಯಕ್ಷರಾದ ಸಿಂಸಾರುಲ್ ಹಖ್ ಆರ್ಲಪದವು, ಪುತ್ತುಚ್ಚ ಕೀಲಂಪಾಡಿ, ಅಲ್ತಾಫ್ , ಎ ಕೆ ಜಿಹಾದ್, ಸೈಫುದ್ಧೀನ್ ಮತ್ತಿತರರು ಉಪಸ್ಥಿತರಿದ್ದರು.
ಅಧ್ಯಕ್ಷರು ಪ್ರಾಸ್ತಾವಿಕ ದೊಂದಿಗೆ ಸ್ವಾಗತಿಸಿದರು ಎಸ್ ವೈ ಎಸ್ ಪಾಣಾಜೆ ಯೂನಿಟ್ ಪ್ರಧಾನ ಕಾರ್ಯದರ್ಶಿ ತಾಜರ್ಖಾನ್ ವಂದಿಸಿದರು. ಕೆ ಎಂ ಜೆ ಪಾಣಾಜೆ ಯೂನಿಟ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶರೀಫ್ ಕಡಮಾಜೆ ಕಾರ್ಯಕ್ರಮ ನಿರೂಪಿಸಿದರು
ಪಾಣಾಜೆ ವಿವೇಕ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.