BREAKING ಪುತ್ತೂರು : ನಾಪತ್ತೆಯಾಗಿದ್ದ ಯುವಕ ಬದ್ರುದ್ದೀನ್ ಶವವಾಗಿ ಪತ್ತೆ..!


ಪುತ್ತೂರು: ನಾಪತ್ತೆಯಾಗಿದ್ದ ಬದ್ರುದ್ದೀನ್ ಡಿಕೆ (27) ಮೃತದೇಹ ನೇಡಿಯಾವು ಸಮೀಪದ ಹನುಮಾಜೆಯ ಗುಡ್ಡದಲ್ಲಿ ಪತ್ತೆಯಾಗಿದೆ.


ಬದ್ರುದ್ದೀನ್ ಸುಮಾರು 8 ವರ್ಷಗಳಿಂದ ಅಬ್ದುಲ್ ರಹಿಮಾನ್ ಮಾಲಕತ್ವದ ಝಿಂದಗೀ ಚಿಕನ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದ. ನ.29ರಂದು ಎಂದಿನಂತೆ ಬೆಳಗ್ಗೆ 8.45ಕ್ಕೆ ಕೆಲಸಕ್ಕೆ ಹಾಜರಾಗಿದ್ದು, 



ಬಳಿಕ ಮಾಲಕರಿಗೆ ತಿಳಿಸಿ ಅಂಗಡಿಯಿಂದ ತೆರಳಿದವರು ಕೆಲಸದ ಸ್ಥಳಕ್ಕೂ ಹೋಗದೇ, ಮನೆಗೂ ಬಾರದೆ ಕಾಣೆಯಾಗಿರುವುದಾಗಿ ದೂರು ನೀಡಲಾಗಿದ್ದು, ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಿನ್ನೆ ಸಾಮಾಜಿಕ ಜಾಲತಾಣಗಳಲ್ಲಿ ಯುವಕನ ಫೋಟೋ ಮತ್ತು ಇವರಗಳೊಂದಿಗೆ ನಾಪತ್ತೆಯಾದ ಪೋಸ್ಟರ್ಗಳು ರವಾನೆಗೊಂಡಿತ್ತು.

ಇದೀಗ ಯುವಕನ ಮೃತದೇಹ ಸೇಡಿಯಾಪು ಸಮೀಪದ ಹನುಮಾಜೆಯ ಗುಡ್ಡದಲ್ಲಿ ಪತ್ತೆಯಾಗಿದೆ.
ಪೊಲೀಸರು ಸ್ಥಳಕ್ಕೆ ತೆರಳಿ ಮಹಜರು ನಡೆಸಿದ್ದು ತನಿಖೆ ಆರಂಭಿಸಿದ್ದಾರೆ.
Next Post Previous Post