ಪಾಣಾಜೆ ಸುಬೋಧ ಶಾಲಾ ವಿದ್ಯಾರ್ಥಿನಿಯ ಮನೆ ಆಕಸ್ಮಿಕ ಬೆಂಕಿಗಾಹುತಿ, ಶಾಲಾ ವತಿಯಿಂದ ಆರ್ಥಿಕ ನೆರವು


ಪಾಣಾಜೆ: ಸುಬೋಧ ಪ್ರೌಢಶಾಲೆಯ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಕು. ಪ್ರಾರ್ಥನ ಮತ್ತು ಎಸ್ ಎಸ್ ಎಲ್ ಸಿ 2022-23 ನೇ ಸಾಲಿನ ಹಿರಿಯ ವಿದ್ಯಾರ್ಥಿನಿ ಕು. ಕೀರ್ತನ (ತಂದೆ: ಉದಯ ಕುಮಾರ್, ತಾಯಿ: ಲಲಿತ) ಸೂರಂಬೈಲು ಮನೆ, ಅಂಚೆ: ಪಾಣಾಜೆ, ಅವರ ಅಜ್ಜಿ ಶ್ರೀಮತಿ ಜಯಲಕ್ಷ್ಮಿ ಅವರ ವಾಸದ ಮನೆ ಎರಡು ದಿವಸಗಳ ಹಿಂದೆ ಆಕಸ್ಮಿಕ ಬೆಂಕಿಗೆ ಅಹುತಿಯಾಗಿ ಸಂಪೂರ್ಣವಾಗಿ ನಾಶವಾಗಿದೆ ಎಂದು ತಿಳಿಸಲು ವಿಷಾದಿಸುತ್ತೇನೆ. ಮನೆಯಲ್ಲಿರುವ ಎಲ್ಲಾ ವಸ್ತುಗಳು ನಾಶವಾಗಿವೆ. ಕಷ್ಟದಲ್ಲಿರುವವರಿಗೆ ಸಹಕರಿಸುವುದು ಮಾನವ ಧರ್ಮ

ಆದುದರಿಂದ ಇಂದು ಶಾಲಾ ಸಂಚಾಲಕರಾದ ಗಿಳಿಯಾಲು ಮಹಾಬಲೇಶ್ವರ ಭಟ್ಟರ ನೇತೃತ್ವದಲ್ಲಿ ರೂ 25000=00(ಇಪ್ಪತ್ತೈದು ಸಾವಿರ) ಹಣವನ್ನು ಸಂಗ್ರಹಿಸಿ ಅವರ ಮನೆಗೆ ಭೇಟಿ ನೀಡಿ ಕುಟುಂಬದ ಯಜಮಾನಿನಿ ಶ್ರೀಮತಿ ಜಯಲಕ್ಷ್ಮಿ ಅವರಿಗೆ ಶಾಲಾ ವತಿಯಿಂದ ನೀಡಲಾಯಿತು. 

ಈ ಸಂದರ್ಭದಲ್ಲಿ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಡಾ. ಹಾಜಿ ಎಸ್ ಅಬೂಬಕ್ಕರ್ ಅರ್ಲಪದವು, ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ಸುಧೀರ್ ಎಸ್ ಪಿ, ಆಡಳಿತ ಮಂಡಳಿಯ ಖಜಾಂಜಿಯವರಾದ ಎ ಎನ್ ಕೊಳಂಬೆ, ಪಾಣಾಜೆ ಪಂಚಾಯತಿನ ಸದಸ್ಯರಾದ ಮೋಹನ ನಾಯ್ಕ ಹಾಗೂ ಮನೆಯವರು ಹಾಜರಿದ್ದರು
Previous Post