BREAKING : ಟಿ- 20 ವಿಶ್ವಕಪ್ ಗೆ 'ಟೀಂ ಇಂಡಿಯಾ' ತಂಡ ಪ್ರಕಟ, ಶುಭಮನ್'ಗಿಲ್ ಔಟ್ |India T20 World Cup
ಟಿ20 ವಿಶ್ವಕಪ್ನಲ್ಲಿ ಭಾರತ ತಂಡವು ಫೆಬ್ರವರಿ 7 ರಿಂದ ಅಭಿಯಾನ ಆರಂಭಿಸಲಿದ್ದು, ಮೊದಲ ಪಂದ್ಯದಲ್ಲಿ ಯುಎಸ್ಎ ತಂಡವನ್ನು ಎದುರಿಸಲಿದೆ. ಅಷ್ಟೇ ಅಲ್ಲದೆ ಟೀಮ್ ಇಂಡಿಯಾ ಫೆಬ್ರವರಿ 15 ರಂದು ತನ್ನ ಬದ್ಧ ವೈರಿ ಪಾಕಿಸ್ತಾನ್ ವಿರುದ್ಧ ಕಣಕ್ಕಿಳಿಯಲಿದೆ. ಈ ಪಂದ್ಯಕ್ಕೆ ಕೊಲೊಂಬೊದ ಆರ್. ಪ್ರೇಮದಾಸ ಸ್ಟೇಡಿಯಂ ಆತಿಥ್ಯವಹಿಸಲಿದೆ. ಅದರಂತೆ ಟಿ20 ವಿಶ್ವಕಪ್ಗೆ ಭಾರತ ತಂಡ ಹಾಗೂ ಟೀಮ್ ಇಂಡಿಯಾದ ವೇಳಾಪಟ್ಟಿ ಈ ಕೆಳಗಿನಂತಿದೆ…
ಟಿ20 ವಿಶ್ವಕಪ್ಗೆ ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಕ್ಷರ್ ಪಟೇಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ರಿಂಕು ಸಿಂಗ್.
ಟಿ20 ವಿಶ್ವಕಪ್ 2026 ಭಾರತದ ವೇಳಾಪಟ್ಟಿ:
- ಫೆಬ್ರವರಿ 7: ಭಾರತ vs ಯುಎಸ್ಎ- (ಮುಂಬೈ)
- ಫೆಬ್ರವರಿ 12: ಭಾರತ vs ನಮೀಬಿಯಾ- (ದೆಹಲಿ)
- ಫೆಬ್ರವರಿ 15: ಭಾರತ vs ಪಾಕಿಸ್ತಾನ್- (ಕೊಲಂಬೊ)
- ಫೆಬ್ರವರಿ 18: ಭಾರತ vs ನೆದರ್ಲೆಂಡ್ಸ್- (ಅಹಮದಾಬಾದ್)
ಈ ನಾಲ್ಕು ಪಂದ್ಯಗಳ ಬಳಿಕ ಟೀಮ್ ಇಂಡಿಯಾ ಸೂಪರ್-8 ಸುತ್ತಿನಲ್ಲಿ ಕಣಕ್ಕಿಳಿಯಲಿದೆ. ಅಂದರೆ 4 ಗ್ರೂಪ್ಗಳ ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸುವ ತಂಡಗಳು ಮುಂದಿನ ಹಂತಕ್ಕೆ ಅರ್ಹತೆ ಪಡೆಯಲಿದೆ. ಅದರಂತೆ ಮೊದಲ ಸುತ್ತಿನ ಬಳಿಕ ಸೂಪರ್-8 ಹಂತದ ಮುಖಾಮುಖಿ ಶುರುವಾಗಲಿದೆ. ಸೂಪರ್-8 ಅಂಕ ಪಟ್ಟಿಯಲ್ಲಿ ಟಾಪ್-4 ನಲ್ಲಿ ಕಾಣಿಸಿಕೊಳ್ಳುವ ನಾಲ್ಕು ತಂಡಗಳು ಸೆಮಿಫೈನಲ್ಗೆ ಅರ್ಹತೆ ಪಡೆಯಲಿದೆ.
ಟಿ20 ವಿಶ್ವಕಪ್ನ ತಂಡಗಳ 4 ಗ್ರೂಪ್ಗಳು:
- ಗ್ರೂಪ್- 1
- ಭಾರತ
- ಪಾಕಿಸ್ತಾನ್
- ಯುಎಸ್ಎ
- ನಮೀಬಿಯಾ
- ನೆದರ್ಲೆಂಡ್ಸ್
___________________
- ಗ್ರೂಪ್-2
- ಆಸ್ಟ್ರೇಲಿಯಾ
- ಶ್ರೀಲಂಕಾ
- ಝಿಂಬಾಬ್ವೆ
- ಐರ್ಲೆಂಡ್
- ಒಮಾನ್
___________________
- ಗ್ರೂಪ್-3
- ಇಂಗ್ಲೆಂಡ್
- ವೆಸ್ಟ್ ಇಂಡೀಸ್
- ಇಟಲಿ
- ಬಾಂಗ್ಲಾದೇಶ್
- ನೇಪಾಳ
___________________
- ಗ್ರೂಪ್-4
- ಸೌತ್ ಆಫ್ರಿಕಾ
- ನ್ಯೂಝಿಲೆಂಡ್
- ಅಫ್ಘಾನಿಸ್ತಾನ್
- ಯುಎಇ
- ಕೆನಡಾ
___________________