ಪಾಣಾಜೆ ಹಾಲು ಉತ್ಪಾದಕರ ಸಹಕಾರಿ ಸಂಘದ ವತಿಯಿಂದ ಮನ್ಸೂರ್ ಜೆ.ಎಸ್ ಹಾಗೂ ಪುತ್ರ ರಿಮಾಝ್ ಜೆ.ಎಸ್ ಅವರಿಗೆ ಸನ್ಮಾನ


ಪುತ್ತೂರು: ಪಾಣಾಜೆ ಹಾಲು ಉತ್ಪಾದಕರ ಸಹಕಾರಿ ಸಂಘ ನಿಯಮಿತ ವತಿಯಿಂದ ಡಿಸೆಂಬರ್ 28, 2025ರಂದು ಸಂಘದ ಸಭಾಭವನದಲ್ಲಿ ‘ಅಟಲ್‌ಜಿ ಜನ್ಮಶತಾಬ್ದಿ ಪ್ರಯುಕ್ತ ಗೌರವಾನ್ವಿತ ನೂತನ ಸಭಾ ಕಟ್ಟಡ ಉದ್ಘಾಟನೆ ಮತ್ತು ಧ್ವನಿವರ್ಧಕ ಲೋಕಾರ್ಪಣೆ’ ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕರಾದ ಶ್ರೀ ಮನ್ಸೂರ್ ಜೆ.ಎಸ್ ಮತ್ತು ಅವರ ಪುತ್ರ ರಿಮಾಜ್ ಜೆ.ಎಸ್ ತಂದೆಯ ಹಾಗೆಯೇ ಪಶುಪಾಲನೆಯಲ್ಲಿ ಆಸಕ್ತಿ ಹೊಂದಿರುವ ಅವರನ್ನು ಪಾಣಾಜೆ ಹಾಲು ಉತ್ಪಾದಕರ ಸಹಕಾರಿ  ಸಂಘದ ವತಿಯಿಂದ ಸನ್ಮಾನಿಸಲಾಯಿತು. 

ಮನ್ಸೂರ್ ಜೆ.ಎಸ್ ಅವರು ವಿವಿಧ ಪ್ರಭೇದದ ಧನಕರುಗಳನ್ನು ಪೋಷಿಸುತ್ತಿದ್ದು, ವಿಶೇಷವಾಗಿ, ಒಂದು ಕರುವಿಗೆ ತರಬೇತಿ ನೀಡಿ ಸಂವೇದನೆ ಮತ್ತು ಪ್ರಜ್ಞೆ ಅಭಿವೃದ್ಧಿಪಡಿಸಿದ್ದನ್ನು ಗಮನಿಸಿ, ಸಂಘವು ಈ ಸಾಧನೆಯನ್ನು ಗುರುತಿಸಿ ಸನ್ಮಾನಿಸಲಾಯಿತು. 

ಈ ಸಂದರ್ಭದಲ್ಲಿ ಮಾತನಾಡಿದ ಡಾ. ಅಖಿಲೇಶ್ ಅರ್ಧಮೂಲೆ ಅವರು ಕರುವಿಗೆ ತರಬೇತಿ ನೀಡಿ ಬುದ್ಧಿ ಕಲಿಸಿ ವಿಶೇಷ ಸಾಧನೆಯನ್ನು ಮಾಡಿದ್ದಾರೆ ಎಂದು ಹೇಳಿದರು ಈ ಸಂದರ್ಭದಲ್ಲಿ ಹಲವರು ಗಣ್ಯರು ಉಪಸ್ತಿತರಿದ್ದರು.



Previous Post