ಬಡ ಕಾರ್ಮಿಕರ ಮಕ್ಕಳು ಉನ್ನತ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಸರ್ಕಾರವು ₹6,000 ದಿಂದ ₹20,000 ದವರೆಗೆ (ವೈದ್ಯಕೀಯ/ಇಂಜಿನಿಯರಿಂಗ್) ಧನಸಹಾಯ ನೀಡುತ್ತಿದೆ. ಆದರೆ, ಈ ಹಣ ಪಡೆಯಲು ನಿಮ್ಮ ಲೇಬರ್ ಕಾರ್ಡ್ ಚಾಲ್ತಿಯಲ್ಲಿರಬೇಕು ಮತ್ತು ಸರಿಯಾದ ವಿಧಾನದಲ್ಲಿ ಅರ್ಜಿ ಸಲ್ಲಿಸಬೇಕು. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ.
ಯಾರಿಗೆ ಸಿಗುತ್ತದೆ ಈ ಸ್ಕಾಲರ್‌ಶಿಪ್? (Eligibility Criteria)
ಈ ಕೆಳಗಿನ ಅರ್ಹತೆಗಳು ಕಡ್ಡಾಯ:
ನೋಂದಾಯಿತ ಕಾರ್ಮಿಕರು: ವಿದ್ಯಾರ್ಥಿಯ ತಂದೆ ಅಥವಾ ತಾಯಿ ‘ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ’ಯಲ್ಲಿ ನೋಂದಾಯಿತರಾಗಿರಬೇಕು.
ಚಾಲ್ತಿಯಲ್ಲಿರಬೇಕು (Active Card): ಅರ್ಜಿ ಸಲ್ಲಿಸುವ ಸಮಯದಲ್ಲಿ ಲೇಬರ್ ಕಾರ್ಡ್ ರಿನೀವಲ್ (Renewal) ಆಗಿರಬೇಕು. ಲ್ಯಾಪ್ಸ್ ಆಗಿದ್ದರೆ ಹಣ ಬರುವುದಿಲ್ಲ.
ವಿದ್ಯಾರ್ಥಿಗಳು: ಮಗುವು 1ನೇ ತರಗತಿಯಿಂದ ಹಿಡಿದು ಪಿಜಿ (PG) ವರೆಗೆ ಯಾವುದೇ ಮಾನ್ಯತೆ ಪಡೆದ ಸಂಸ್ಥೆಯಲ್ಲಿ ಓದುತ್ತಿರಬೇಕು.
ಆದಾಯ ಮಿತಿ: ಕುಟುಂಬದ ವಾರ್ಷಿಕ ಆದಾಯ ಸರ್ಕಾರದ ನಿಯಮದಂತೆ ಇರಬೇಕು (ಸಾಮಾನ್ಯವಾಗಿ ₹35,000 ಮಿತಿ ಇರುತ್ತದೆ, ಆದರೆ ಕಾರ್ಮಿಕರಿಗೆ ಇದು ಸಡಿಲಿಕೆ ಇರುತ್ತದೆ).
ತರಗತಿವಾರು ಎಷ್ಟು ಹಣ ಸಿಗುತ್ತದೆ? (Scholarship Amount List)
ಸರ್ಕಾರವು ಈ ಬಾರಿ ಸಹಾಯಧನದ ಮೊತ್ತವನ್ನು ಹೆಚ್ಚಿಸಿದ್ದು, ವಿವರ ಈ ಕೆಳಗಿನಂತಿದೆ:
ತರಗತಿ / ಕೋರ್ಸ್ (Class) ವಿದ್ಯಾರ್ಥಿವೇತನ (Scholarship)
1 ರಿಂದ 4ನೇ ತರಗತಿ ₹2,000 – ₹3,000
5 ರಿಂದ 10ನೇ ತರಗತಿ ₹6,000
PUC / ITI / Diploma ₹8,000 – ₹10,000
ಪದವಿ (Degree/B.Sc/B.Com,ext) ₹10,000 – ₹12,000
ಮೆಡಿಕಲ್ / ಇಂಜಿನಿಯರಿಂಗ್ ₹20,000 ವರೆಗೆ
ಬೇಕಾಗುವ ಪ್ರಮುಖ ದಾಖಲೆಗಳು (Documents Checklist)
ಅರ್ಜಿ ಹಾಕಲು ಕುಳಿತುಕೊಳ್ಳುವ ಮುನ್ನ ಅಥವಾ ಸೈಬರ್ ಸೆಂಟರ್‌ಗೆ ಹೋಗುವ ಮುನ್ನ ಈ 6 ದಾಖಲೆಗಳನ್ನು ಮರೆಯದೇ ತೆಗೆದುಕೊಂಡು ಹೋಗಿ:
ಪೋಷಕರ ಲೇಬರ್ ಕಾರ್ಡ್ (ಒರಿಜಿನಲ್ ಮತ್ತು ಜೆರಾಕ್ಸ್).
ವಿದ್ಯಾರ್ಥಿಯ ಆಧಾರ್ ಕಾರ್ಡ್ (ಪೋಷಕರ ಆಧಾರ್ ಕೂಡ ಬೇಕು).
ಬ್ಯಾಂಕ್ ಪಾಸ್ ಬುಕ್ (ವಿದ್ಯಾರ್ಥಿಯ ಖಾತೆ ಅಥವಾ ಜಾಯಿಂಟ್ ಅಕೌಂಟ್).
ಪ್ರಸ್ತುತ ಓದುತ್ತಿರುವ ಶಾಲಾ/ಕಾಲೇಜಿನ ವ್ಯಾಸಂಗ ದೃಢೀಕರಣ ಪತ್ರ (Study Certificate).
ಹಿಂದಿನ ವರ್ಷದ ಅಂಕಪಟ್ಟಿ (Marks Card) – ಪಾಸ್ ಆಗಿರುವುದು ಕಡ್ಡಾಯ.
ರೇಷನ್ ಕಾರ್ಡ್ (Ration Card).
ಅರ್ಜಿ ಸಲ್ಲಿಸುವುದು ಹೇಗೆ? (Step-by-Step Application)
ನಿಮ್ಮ ಹತ್ತಿರದ ಕರ್ನಾಟಕ ಒನ್, ಗ್ರಾಮ ಒನ್, ಬೆಂಗಳೂರು ಒನ್ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಆದರೆ ಇದು ಕಡ್ಡಾಯವಾಗಿ ಕಟ್ಟಡ ಕಾರ್ಮಿಕ ಕಾರ್ಟೂನ್ ದರದ ಮಕ್ಕಳಿಗೆ ಮಾತ್ರವಾಗಿರುತ್ತದೆ
ಅರ್ಜಿ ಸಲ್ಲಿಸುವ ವಿಧಾನದ ಸಂಪೂರ್ಣ ಕೈಪಿಡಿ (Manual):
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31 ಡಿಸೆಂಬರ್ 2025 (ಸರ್ಕಾರದ ಮುಂದಿನ ಆದೇಶದವರೆಗೆ).
ನಿಮ್ಮ ಅರ್ಜಿ ರಿಜೆಕ್ಟ್ ಆಗಬಾರದು ಎಂದರೆ ಹೀಗೆ ಮಾಡಿ
ಲೇಬರ್ ಕಾರ್ಡ್‌ಗೆ ಆಧಾರ್ ಲಿಂಕ್ ಆಗಿದೆಯಾ ಎಂದು ಮೊದಲೇ ಚೆಕ್ ಮಾಡಿ.
ಬ್ಯಾಂಕ್ ಖಾತೆಗೆ NPCI (ಆಧಾರ್ ಸೀಡಿಂಗ್) ಆಗಿರಲೇಬೇಕು. ಇಲ್ಲದಿದ್ದರೆ ಹಣ ಜಮಾ ಆಗುವುದಿಲ್ಲ.
ತಂದೆ ಮತ್ತು ತಾಯಿ ಇಬ್ಬರೂ ಕಾರ್ಮಿಕರಾಗಿದ್ದರೆ, ಒಬ್ಬರ ಕಾರ್ಡ್ ಮೂಲಕ ಮಾತ್ರ ಅರ್ಜಿ ಹಾಕಿ.