ಚಂದನ ಸಾಹಿತ್ಯ ವೇದಿಕೆ ವತಿಯಿಂದ ಬೆಳಕಿನ ಹಬ್ಬದ ದೀಪಾವಳಿ ಕವಿಗೋಷ್ಠಿ ಸಮಾರಂಭ
ಮಂಗಳೂರು: ಚಂದನ ಸಾಹಿತ್ಯ ವೇದಿಕೆಯ ನೂತನ ಅಧ್ಯಕ್ಷರಾದ ಸಂಧ್ಯಾ (ಸಾನು ) ಉಬರಡ್ಕ ಅವರ ನೇತೃತ್ವದಲ್ಲಿ ಸುಳ್ಯದ ಚಂದನ ಸಾಹಿತ್ಯ ವೇದಿಕೆ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ "ದೀಪಾವಳಿ ಕವಿಗೋಷ್ಠಿ-2025" ಕಾರ್ಯಕ್ರಮವು ಸುಳ್ಯದ ದೇವಮ್ಮ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ದಿನಾಂಕ 26-10-2025 ರಂದು ಭಾನುವಾರ ದಿನ ಜರುಗಿತು. ದೀಪಾವಳಿ ಕವಿಗೋಷ್ಠಿ ಕಾರ್ಯಕ್ರಮದ ಉದ್ಘಾಟನೆಯನ್ನು ಚಂದನ ಸಾಹಿತ್ಯ ವೇದಿಕೆ ಸುಳ್ಯ ಇದರ ಗೌರವಾಧ್ಯಕ್ಷರಾದ ಎಚ್. ಭೀಮರಾವ್ ವಾಷ್ಠರ್ ಅವರು ವಹಿಸಿದ್ದರು.
ಕವಿಗೋಷ್ಠಿ ಅಧ್ಯಕ್ಷತೆಯನ್ನು ಚಂದನ ಸಾಹಿತ್ಯ ವೇದಿಕೆ ಸುಳ್ಯ ಇದರ ಅಧ್ಯಕ್ಷರಾದ ಸಾನು ಉಬರಡ್ಕ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸುದ್ದಿ ಬಿಡುಗಡೆ ಪತ್ರಿಕೆಯ ಪ್ರಧಾನ ವ್ಯವಸ್ಥಾಪಕರಾದ ಯಶ್ವಿತ್ ಕಾಳಮ್ಮನೆ ಮತ್ತು ಮಹಿಳಾ ಸಾಹಿತಿ ರತ್ನಾ ಭಟ್ ಕೆ ತಳoಚೇರಿ ಅವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸಾಹಿತಿ ಎಚ್ ಭೀಮರಾವ್ ವಾಷ್ಠರ್ ಅವರು ನೂತನ ಅಧ್ಯಕ್ಷರಾದ ಸಂಧ್ಯಾ ಉಬರಡ್ಕ ಅವರನ್ನು ಸಮ್ಮನಿಸಿದರು.
ಮೈಯಲ್ಲಿ ಎಷ್ಟೇ ವಿದ್ಯುತ್ ಹರಿಸಿದರೂ ಮೈಯೊಳಗೆ ವಿದ್ಯುತ್ ಇದ್ದರೂ ಪ್ರಾಣಕ್ಕೆ ಅಪಾಯ ಆಗದ ಪವರ್ ಮ್ಯಾನ್ ಎಂದೇ ಖ್ಯಾತಾರಾದ ಕೃಷ್ಣ ಅಚ್ರಪ್ಪಾಡಿ ಅವರು ವಿಶೇಷ ಆಹ್ವಾನಿತರಾಗಿ ಆಗಮಸಿದ್ದರು.. ಅವರನ್ನು ವಿಶೇಷವಾಗಿ ಗೌರವಿಸಿ ಅಭಿನಂದಿಸಲಾಯಿತು.
ಸಂದೀಪ್ ಸುಳ್ಯ ಅವರು ಭಾವಗೀತೆಗಳನ್ನು ಹಾಡಿದರು.ಪ್ರಾರ್ಥನಾ ಗೀತೆಯನ್ನು ಅಜ್ಜಾವರ ಪ್ರೌಢಶಾಲೆಯ ವಿದ್ಯಾರ್ಥಿ
ಶ್ರವಿತ್ ಹಾಡಿದರು. ಸಾಹಿತಿ ವಿಜಯಕುಮಾರ್ ಕಾಣಿಚ್ಚಾರ್ ಅವರು ಸ್ವಾಗತಿಸಿದರು. ಯಶುಭ ರೈ ಅವರು ವಂದಿಸಿದರು. ಅನುರಾಧಾ ಶಿವಪ್ರಕಾಶ್ ಸುಳ್ಯ ಅವರು ಕಾರ್ಯಕ್ರಮ ನಿರೂಪಿಸಿದರು. ದೀಪಾವಳಿ ಕವಿಗೋಷ್ಠಿ' ಕಾರ್ಯಕ್ರಮದಲ್ಲಿ ವಿಜಯ ಕುಮಾರ್ ಕಾಣಿಚ್ಚಾರ್ ಸುಳ್ಯ, ಎಂ ಎ ಮುಸ್ತಫಾ ಬೆಳ್ಳಾರೆ, ಬಾಲಕೃಷ್ಣ ಬಿ ಕಡಬ, ಅನುರಾಧ ಶಿವಪ್ರಕಾಶ್ ಸುಳ್ಯ, ಶ್ರೀಹರಿ ಭಟ್ ಪೆಲ್ತಾಜೆ ಕಾಸರಗೋಡು, ಕೃಷ್ಣ ಅಚ್ರಪ್ಪಾಡಿ, ಯಶುಭ ರೈ ಪುತ್ತೂರು, ಶ್ರೀಮತಿ ರತ್ನಾ ಕೆ ಭಟ್ ತಲಂಚೆರಿ,
ಸುರೇಶ್ ಜಿ ಚಾರ್ವಾಕ, ವಿದ್ಯಾಶಂಕರಿ ಕೆ. ಶಿಕ್ಷಕರು ಸರಕಾರಿ ಪ್ರೌಢಶಾಲೆ ಅಜ್ಜಾವರ, ತೇಜಸ್ವಿನಿ ಕೆ ಸುಳ್ಯ, ಸರಕಾರಿ ಪ್ರೌಢಶಾಲೆ ಅಜ್ಜಾವರ 10 ನೇ ತರಗತಿಯ ವಿದ್ಯರ್ಥಿಗಳಾದ ಶ್ರವಿತ್, ಶ್ರೇಯಸ್ ಭಾಗವಹಿಸಿದ್ದರು. ಎಲ್ಲಾ ಕವಿಗಳಿಗೂ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು