ಡಾ| ಹೆಚ್.ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆಯವರಿಗೆ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯ ಗರಿ
ಮಂಗಳೂರು: ಸೇವೆಗಳ ಮೂಲಕ ನಿಸ್ವಾರ್ಥ ನಾಯಕರಾಗಿ ಮೂಡಿಬಂದು ನಾಡಿನಲ್ಲಿ ಶೈಕ್ಷಣಿಕ ಕ್ರಾಂತಿಯ ಕಹಳೆಯೂದಿದ ಕರಾವಳಿಯ ಕಾವಲಾಳು ಗೌರವ ಡಾಕ್ಟರೇಟ್ ಪದವಿ ಪುರಸ್ಕೃತ ಹೆಚ್.ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ ಯವರಿಗೆ ಈ ಬಾರಿಯ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿರುವುದು ತುಂಬಾ ಖುಷಿ ತಂದಿದೆ.
ಬಡವರ ಬಂಧು ಹಾಗೂ ಆಶಾಕಿರಣವಾಗಿ ಸಮಾಜದ ಕಟ್ಟ ಕಡೆಯಲ್ಲಿರುವ ಸಾವಿರಾರು ಮಂದಿಯ ಕಣ್ಣೀರೊರೆಸಿ ಅವರ ಬದುಕಿನಲ್ಲಿ ಭರವಸೆ ಮೂಡಿಸಿದ ಸಾಮಾಜಿಕ, ರಾಜಕೀಯ ರಂಗದ ಅಪೂರ್ವ ಪ್ರತಿಭೆ ಹೆಚ್. ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ ಅವರು ಹಲವಾರು ವರ್ಷಗಳಿಂದ ಸಾಮಾಜಿಕ, ರಾಜಕೀಯ ರಂಗದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಬಂಧುತ್ವ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಿ ಇದೀಗ ಆ ಮೂಲಕ ತನ್ನ ಸೇವೆಯನ್ನು ಮುಂದುವರಿಸಿದ್ದಾರೆ.
ಕೊರೋಣ ಸಂದರ್ಭದಲ್ಲಿ
ಬಡವರ ಹೊಟ್ಟೆ ತಣಿಸುವ ಕಾಯಕ ಮೂಲಕ ಜನ ಹೃದಯದಲ್ಲಿ ಚಿರಸ್ಥಾಯಿಯಾಗಿ ಸ್ಥಾನ ಹಿಡಿದ ಕಾರುಣ್ಯದ ಪ್ರತೀಕವಾದ ಹೆಚ್.ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ ಛಲದಂಕ ಮಲ್ಲ ಎಂದರೆ ಅತಿಶಯೋಕ್ತಿಯಾಗಲ್ಲ.
ಕನ್ನಡದ ಪರ ಸಂಘಟನೆ, ಭ್ರಷ್ಟಾಚಾರ ವಿರೋಧಿ ಸಂಘಟನೆ, ಇಂಡಿಯನ್ ರೆಡ್ ಕ್ರಾಸ್ ಸಹಿತ ಎಲ್ಲಾ ಸಂಘ,ಸಂಸ್ಥೆಗಳಲ್ಲಿ ಕಾರ್ಯಾಚರಣೆ ಮಾಡುವ ಇವರು ಅಪ್ಪಟ ಕನ್ನಡ ಪ್ರೇಮಿ ಕೂಡ ಹೌದು !
ಪ್ರಪಂಚದ ಸೃಷ್ಟಿಕರ್ತ ಅಲ್ಲಾಹು ಹೆಚ್. ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ ಹಾಗೂ ಅವರ ಮನೆಮಂದಿಗೆ ಇನ್ನಷ್ಟು ಐಶ್ವರ್ಯ, ಸುಖ ಸಂಪತ್ತುಗಳನ್ನು ದಯಪಾಲಿಸಲಿ ಹಾಗೂ ದೀರ್ಘಾಯುಷ್ಯ, ಆಯುರಾರೋಗ್ಯ ಸಹಿತ ಸಕಲೈಶ್ವರ್ಯಗಳನ್ನು ನೀಡಿ ಅನುಗ್ರಹಿಸಲಿ ಎಂದು ಪ್ರಾರ್ಥಿಸುವುದರೊಂದಿಗೆ ಇನ್ನಷ್ಟು ಪದವಿಗಳು ಹುಡುಕಿ ಬರಲಿ ಎಂದು ಹಾರೈಸುತ್ತಿದ್ದೇನೆ.
✍️ *ಕೆ.ಎ.ಅಬ್ದುಲ್ ಅಝೀಝ್ ಪುಣಚ*