ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ತಡವಾಗಿ ಬಂದು ವಿದ್ಯಾರ್ಥಿಗಳನ್ನು ಬಿಸಿಲಿನಲ್ಲಿ ನಿಲ್ಲುವಂತೆ ಮಾಡಿದ ಶಾಸಕರ ನಡೆ ಖಂಡನೀಯ: ಶಾಕಿರ್ ನೆಕ್ಕರೆ,


ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ತಡವಾಗಿ ಬಂದು ವಿದ್ಯಾರ್ಥಿಗಳನ್ನು ಬಿಸಿಲಿನಲ್ಲಿ ನಿಲ್ಲುವಂತೆ ಮಾಡಿದ ಶಾಸಕರ ನಡೆ ಖಂಡನೀಯ:

ಸುಳ್ಯ: ಕನ್ನಡ ರಾಜ್ಯೋತ್ಸವವನ್ನು ಆಚರಿಸುವುದು ಕನ್ನಡಿಗರಾಗಿ ನಮ್ಮೆಲ್ಲರ ಕರ್ತವ್ಯ. ಸುಳ್ಯದ ಶಾಸಕರಾದ ಕು. ಭಾಗೀರಥಿ ಮುರುಳ್ಯರವರು ಇಂದು ಸಮಯಕ್ಕೆ ಸರಿಯಾಗಿ ಬಾರದೆ ಮಕ್ಕಳನ್ನು ಮತ್ತು ಅಧಿಕಾರಿಗಳನ್ನು ಕಾಯಿಸುವುದರ ಮೂಲಕ ಜವಾಬ್ಧಾರಿ ಇಲ್ಲದವರಂತೆ ವರ್ತಿಸಿದ್ದಾರೆ. 


ಸಮಯಕ್ಕೆ ಸರಿಯಾಗಿ ಧ್ವಜಾರೋಹಣ ನೆರವೇರಿಸದೆ, ತಡವಾಗಿ ಕಾರ್ಯಕ್ರಮಕ್ಕೆ ಬರುವುದರ ಮೂಲಕ ಮಕ್ಕಳನ್ನು ಸುಡು ಬಿಸಿಲಿನಲ್ಲಿ ನಿಲ್ಲುವಂತೆ ಮಾಡಿರುವುದು ಖಂಡನೀಯ. ಈ ರೀತಿಯ ವ್ಯವಸ್ಥೆಯನ್ನು ಎನ್.ಎಸ್.ಯು.ಐ. ಸುಳ್ಯ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದು ಎನ್.ಎಸ್.ಯು.ಐ ಸುಳ್ಯ ಸಮಿತಿ ಕಾರ್ಯದರ್ಶಿ ಶಾಕಿರ್ ನೆಕ್ಕರೆ ಹೇಳಿದ್ದಾರೆ
Next Post Previous Post