ಖಿದ್ಮಾ ಕನ್ನಡದೊಂದಿಗೆ ಮುಖಾ-ಮುಖಿ ಕಾರ್ಯಕ್ರಮ
ಮಂಗಳೂರು: ಖಿದ್ಮಾ ಫೌಂಡೇಶನ್ ಕರ್ನಾಟಕ ಹಾಗೂ ಅನ್ನದಾತ ಪ್ರಕಾಶನ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಆಯೋಜಿಸಲಾಗಿರುವ ಖಿದ್ಮಾ ಕನ್ನಡದೊಂದಿಗೆ ಮುಖಾ-ಮುಖಿ ಕಾರ್ಯಕ್ರಮ ನಾಳೆ ಆರಂಭಗೊಳ್ಳಲಿದೆ. ಒಂದು ತಿಂಗಳು ಕಾಲ ನಡೆಯುವ ಕಾರ್ಯಕ್ರಮದಲ್ಲಿ ನಾಡಿನ ಹಲವು ಹಿರಿಯ ಮತ್ತು ಕಿರಿಯ ಬರಹಗಾರರು ಕನ್ನಡ ಭಾಷೆ, ಸಾಹಿತ್ಯ ಮತ್ತು ಇತಿಹಾಸದ ಬಗ್ಗೆ ಚರ್ಚಿಸಲಿದ್ದಾರೆ.
ಪ್ರಸ್ತುತ ಕಾರ್ಯಕ್ರಮವನ್ನು ಸೋಶಿಯಲ್ ಮೀಡಿಯಾ ಮೂಲಕ ನಡೆಸಲಾಗುವುದು ಎಂದು ಖಿದ್ಮಾ ಫೌಂಡೇಶನ್ ಕರ್ನಾಟಕ ಅಧ್ಯಕ್ಷ ಆಮಿರ್ ಅಶ್ಅರೀ ಬನ್ನೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.