ಕನ್ನಡ ರಾಜ್ಯೋತ್ಸವ ಅಂಚೆ ಚೀಟಿ ಕವನ ಸ್ಪರ್ಧೆ |ಕವನಗಳ ಆಹ್ವಾನ


ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು
ನೇತೃತ್ವದಲ್ಲಿ
ದ್ವಾರಕಾ ಪ್ರತಿಷ್ಠಾನ(ರಿ) ಪುತ್ತೂರು
ಪ್ರಾಯೋಜಕತ್ವದಲ್ಲಿ  
ಸಾಹಿತ್ಯದ ಚಿತ್ತ ವಿದ್ಯಾರ್ಥಿಗಳತ್ತ ಘೋಷವಾಕ್ಯದೊಂದಿಗೆ
 ವಿದ್ಯಾರ್ಥಿಗಳಿಗಾಗಿ..
"ಕನ್ನಡ ರಾಜ್ಯೋತ್ಸವ ಅಂಚೆ ಕಾರ್ಡ್ ಕವನ ಸ್ಪರ್ಧೆ -೨0೨೫"


 ನಿಯಮಾವಳಿ

1. ಪುತ್ತೂರು ತಾಲೂಕಿನಲ್ಲಿ ವಾಸವಾಗಿರುವ ಅಥವಾ ಅಧ್ಯಯನ ಮಾಡುತ್ತಿರುವ ಪ್ರಾಥಮಿಕ -ಪ್ರೌಢ -ಪಿಯು ಹಾಗೂ ಕಾಲೇಜು- ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮಾತ್ರ 
2. ಕವನದ ವಿಷಯ ಕನ್ನಡ ನಾಡು -ನುಡಿ- ಸಂಸ್ಕೃತಿ - ನೆಲ ಜಲಕ್ಕೆ ಸಂಬಂಧಿತ ವಾಗಿರತಕ್ಕದ್ದು.
3. ಕವನದ ಗರಿಷ್ಠ ಸಾಲುಗಳು 12 ಮಿತಿಯಲ್ಲಿ ಇರತಕ್ಕದ್ದು.


4. ನಿಮ್ಮ ಹೆಸರು, ತರಗತಿ, ವಿಳಾಸ, ವಾಟ್ಸಪ್ ಸಂಖ್ಯೆ ಕಡ್ಡಾಯವಾಗಿ ನಮೂದಿಸಿ ಇರತಕ್ಕದ್ದು.
5. ಆಯ್ಕೆಯಾದ ಕವನಗಳಿಗೆ ಪ್ರಥಮ -ದ್ವಿತೀಯ- ತೃತೀಯ ಹಾಗೂ ಪ್ರೋತ್ಸಾಹಕರ ಬಹುಮಾನವನ್ನು ನೀಡಲಾಗುವುದು.
6. ಆಯ್ಕೆಯಾದ ಕವನಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಕವನ ವಾಚನಕ್ಕೆ ಅವಕಾಶವಿರುವುದು.( ಸಮಯದ ಹೊಂದಾಣಿಕೆ ನೋಡಿ ಕೊಂಡು)
7. ಕವನಗಳನ್ನು ಅಕ್ಟೋಬರ್ 10ರ ಒಳಗಾಗಿ , ಕಾರ್ಯಕ್ರಮದ ಸಂಯೋಜಕರಾದ ಶ್ರೀ ನಾರಾಯಣ ಕುಂಬ್ರ, ಸಂಚಾಲಕರು ಗ್ರಾಮ ಸಾಹಿತ್ಯ ಸಂಭ್ರಮ,ವಿವೇಕಾನಂದ ಕಾಲೇಜು ನೆಹರು ನಗರ ಪುತ್ತೂರು. ದಕ್ಷಿಣ ಕನ್ನಡ 574203ಈ ವಿಳಾಸಕ್ಕೆ ಕಳುಹಿಸತಕ್ಕದ್ದು.
8. ವಿಜೇತರಿಗೆ ದಿನಾಂಕ:01.11.2025ರಂದು ನಂದಗೋಕುಲ ವೇದಿಕೆ ಗೋಕುಲ ಬಡಾವಣೆ,
 ಮುಕ್ರಂಪಾಡಿ ಇಲ್ಲಿ ಮಧ್ಯಾಹ್ನ 2.30 ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದೆಂದು ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Post Previous Post