ಯೋಗ ಪಟು ಗೌರಿತಾಳಿಗೆ ಕರುನಾಡ ತಾರೆ ರಾಜ್ಯ ಪ್ರಶಸ್ತಿ q
ಮಂಗಳೂರು: ಶ್ರೀ ಸರ್ವೇಜನಾ. ಆರ್ಟ್ ಮತ್ತು ಕಲ್ಚರಲ್ ಟ್ರಸ್ಟ್ ( ರಿ)ನಾಗರ ಬಾವಿ ಬೆಂಗಳೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದರ ಸಹಭಾಗಿತ್ವದಲ್ಲಿ ದಿನಾಂಕ 31 ಆಗಸ್ಟ್ 2025 ರಂದು ಸವಾಯಿ ಗಂಧರ್ವ ಕಲಾಮಂದಿರ ಹುಬ್ಬಳ್ಳಿಯಲ್ಲಿ ಯೋಗ ಪಟು ಗೌರಿತಾ ಕೆಜಿ ಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಗೌರಿತಾ ಇದುವರೆಗೆ ಯೋಗದಲ್ಲಿ ಮಾಡಿದ 15 ದಾಖಲೆಗಳನ್ನು ಪರಿಶೀಲಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಶ್ರೀ ಡಾ ಶಿವಕುಮಾರ ಮಹಾಸ್ವಾಮಿಗಳು ನಿರಂತರ ದಾಸೋಹ ಮಠ ಮತ್ತು ಕಲಾ ಪೋಷಕರ ಮಠ ಧರ್ಮ ಅಧಿಕಾರಿಗಳು ಸುಕ್ಷೇತ್ರ ಸಿದ್ದನ ಕೊಳ್ಳ, ಪರಮಪೂಜ್ಯ ಡಾ ಮೋಹನ್ ಗುರು ಸ್ವಾಮಿಗಳು ಹುಬ್ಬಳ್ಳಿ, ಶ್ರೀ ವಿಜಯಕುಮಾರ್ ಕರ್ನಾಟಕ ಬಲಂ ಕೆಚ್ಚೆದೆಯ ಕನ್ನಡಿಗರ ಸೇವೆ ರಾಜ್ಯಾಧ್ಯಕ್ಷರು ಬೆಂಗಳೂರು, ಶ್ರೀಮತಿ ಮಾಲತಿ ಸುಧೀರ್ ಅಧ್ಯಕ್ಷರು (ಮಾಜಿ) ಕರ್ನಾಟಕ ನಾಟಕ ಅಕಾಡೆಮಿ ರಂಗಭೂಮಿ, ಚಲನಚಿತ್ರ ಕಿರುತೆರೆ ನಟಿ ನಿರ್ದೇಶಕಿ ನಿರ್ಮಾಪಕಿ , ಶ್ರೀ ಶಿವಕುಮಾರ್ ಆರಾಧ್ಯ ಉಪಾಧ್ಯಕ್ಷರು ಚಲನಚಿತ್ರ ಹಾಗೂ ಕಿರುತೆರೆ ಕಲಾವಿದರು ಡಾ ಕೆಂಚನೂರು ಶಂಕರ ಗೌರವಾಧ್ಯಕ್ಷರು ಪತ್ರಕರ್ತ ಸಾಹಿತಿ ಲೇಖಕ ನಟ ನಿರ್ದೇಶಕರು, ಲಕ್ಷಿತಾ ಗಂಗಾವತಿ ಸಂಸ್ಥಾಪಕರು ಚಲನ ಚಿತ್ರ ಕಿರುತರೆ ನಟಿ ಹಾಗೂ ಇನ್ನಿತರ ಅನೇಕ ಗಣ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಗೌರಿತಾ ಯೋಗ ನೃತ್ಯ ಪ್ರದರ್ಶ ನ ನೀಡಿದರು. ಕುಮಾರಸ್ವಾಮಿಯ 5ನೇ ತರಗತಿಯಲ್ಲಿ ಓದುತ್ತಿರುವ ಗೌರಿತಾ ಕೆ ಜಿ ಹಾಗೂ ಡಾ. ಗೌತಮ್ ಹಾಗೂ ಡಾ. ರಾಜೇಶ್ವರಿ ದಂಪತಿ ಪುತ್ರಿ