SSF ರೆಂಜ ಸೆಕ್ಟರ್ ನಲ್ಲಿ ಮೇಳೈಸಿದ ಸಾಹಿತ್ಯೋತ್ಸವ |ಯೋಧ ಚಿಂತನ್ ಕೆ ಇವರಿಗೆ ಸನ್ಮಾನ | ಸತತ 2ನೇ ಬಾರಿಗೆ ಚಾಂಪಿಯನ್ ಪ್ರಶಸ್ತಿಯನ್ನು ಪಡೆದುಕೊಂಡ ಎಸ್ ಎಸ್ ಎಫ್ ಪಾಣಾಜೆ ಯೂನಿಟ್ ಹಾಗೂ 2ನೇ ಬಾರಿಗೆ ರನ್ನರ್ ಅಪ್ ಆಗಿ ಎಸ್ ಎಸ್ ಎಫ್ ರೆಂಜ ಯೂನಿಟ್ |ಮಕ್ಕಳಲ್ಲಿ ದೇಶಾಭಿಮಾನ ಮೂಡಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ - ಡಾ.ಹಾಜಿ.ಯಸ್ ಅಬೂಬಕ್ಕರ್ ಆರ್ಲಪದವು
ಪುತ್ತೂರು: SSF ರೆಂಜ ಸೆಕ್ಟರ್ ಸಾಹಿತ್ಯೋತ್ಸವ -2025 ಫಾರೂಕ್ ಜುಮಾ ಮಸೀದಿ ರೆಂಜ ವಠಾರದಲ್ಲಿ ಆಗಸ್ಟ್ 31 ರಂದು ಯಶಸ್ವಿಯಾಗಿ ನಡೆಯಿತು. ಈ ಸಂದರ್ಭದಲ್ಲಿ ಪೇರಲ್ತಡ್ಕದಿಂದ ಭಾರತೀಯ ಯೋಧನಾಗಿ ನೇಮಕಗೊಂಡು ಕಾರ್ಯ ನಿರ್ವಹಿಸುತ್ತಿರುವ ಚಿಂತನ್ ಗೌಡ ಇವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸುನ್ನೀ ಕೋ ಆರ್ಡಿನೇಷನ್ ಸಮಿತಿಯ ಛಯರ್ಮ್ಯಾನ್ ಡಾ.ಹಾಜಿ.ಯಸ್.ಅಬೂಬಕ್ಕರ್ ಆರ್ಲಪದವು ಮಾತನಾಡುತ್ತಾ ಯೋಧರು ದೇಶದ ಗಡಿಗಳನ್ನು ಕಾಯುವ ರಾಷ್ಟ್ರದ ಸಾರ್ವಭೌಮತ್ವವನ್ನು ರಕ್ಷಿಸುವ ವರಾಗಿರುತ್ತಾರೆ ಯೋಧರ ತ್ಯಾಗ ಮತ್ತು ದೇಶ ಭಕ್ತಿಯನ್ನು ಗೌರವಿಸುವುದು ಮತ್ತು ಮಕ್ಕಳಲ್ಲಿ ದೇಶಾಭಿಮಾನ ಮೂಡಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಈ ಹಿನ್ನೆಲೆಯಲ್ಲಿ ಚಿಂತನ್ ಗೌಡ ಇವರನ್ನು ಎಸ್ ಎಸ್ ಎಫ್ ರೆಂಜ ಸೆಕ್ಟರ್ ಸಾಹಿತ್ಯೋತ್ಸವದಲ್ಲಿ ಸನ್ಮಾಸಿರುತ್ತೇವೆ ಎಂದು ಹೇಳಿ ಶುಭ ಹಾರೈಸಿದರು ಸನ್ಮಾನ ಸ್ವೀಕರಿಸಿದ ಚಿಂತನ್ ಗೌಡ ಮಾತನಾಡುತ್ತಾ ಯುವಕರು ಹೆಚ್ಚಾಗಿ ಭಾರತೀಯ ಸೇನೆಗೆ ಸೇರಿ ಕರ್ತವ್ಯ ನಿರ್ವಹಿಸುವಂತಾಗಬೇಕು ಎಂದು ಹೇಳಿದರು.
ರಾಜ್ಯ ಮಟ್ಟದ ತರಬೇತುದಾರ ರಫೀಕ್ ಮಾಸ್ಟರ್ ಮಾತನಾಡುತ್ತಾ ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನು ಬೆಳಗಿಸುವ ರೀತಿ ರಿವಾಜುಗಳನ್ನು ಹೇಳಿ ಶುಭ ಹಾರೈಸಿದರು. ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಮುಹಮ್ಮದ್ ಹಾಜಿ ಕುಕ್ಕುವಳ್ಳಿ ಮಾತನಾಡುತ್ತಾ ಎಸ್ ಎಸ್ ಎಫ್ ರೆಂಜ ಸೆಕ್ಟರ್ ವಿವಿಧ ಯಶಸ್ವೀ ಕಾರ್ಯಕ್ರಮ ಗಳನ್ನು ಮಾಡುತ್ತಾ ಯಶಸ್ವಿಯನ್ನು ಗಳಿಸಿದೆ ಮುಂದೆಯೂ ಯಶಸ್ವಿಯತ್ತ ಸಾಗಿರಿ ಎಂದು ಹೇಳಿ ಶುಭ ಹಾರೈಸಿದರು.
ರೆಂಜ ಎಫ್ ಜೆ ಎಂ ಮುದರ್ರಿಸ್ ಖಲಂದರ್ ಸಹದಿ ಮುಖ್ಯ ಪ್ರಭಾಷಣ ಮಾಡಿದರು. ಸ್ವಾಗತ ಸಮಿತಿ ಛಯರ್ಮ್ಯಾನ್ ಕಾಸಿಂ ಪಿ ಎ ಪೇರಲ್ತಡ್ಕ ಅಧ್ಯಕ್ಷತೆಯಲ್ಲಿ ಮುಹಮ್ಮದ್ ಮುಸ್ಲಿಯಾರ್ ಮಣ್ಣಾಪು ಸಮಾರಂಭವನ್ನು ಉದ್ಘಾಟಿಸಿದರು. ಸ್ವಾಗತ ಸಮಿತಿ ಸಲಹೆಗಾರರಾದ ಅಬ್ಬಾಸ್ ಮದನಿ ದುಆ ನೇತೃತ್ವ ವಹಿಸಿದರು.
ಈ ಸಮಾರಂಭದಲ್ಲಿ ಎಫ್ ಜೆ ಎಂ ರೆಂಜ ಅಧ್ಯಕ್ಷ ಅಬ್ಬಾಸ್ ಹಾಜಿ ಮಣ್ಣಾಪು, ಮಾಜಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಮಣ್ಣಾಪು, ಪೇರಲ್ತಡ್ಕ ಬಿಜೆಎಂ ಅಧ್ಯಕ್ಷ ಮುಹಮ್ಮದ್ ಹಾಜಿ ನವಾಜ್ ಪಾಣಾಜೆ ಅಫ್ರಾ ಮಸೀದಿ ಅಧ್ಯಕ್ಷ ಅಬೂಬಕ್ಕರ್ ಶಾಫಿ ಕಾನ ಬೆಟ್ಟಂಪಾಡಿ ಗ್ರಾಮ ಪಂಚಾಯಿತಿ ಸದಸ್ಯ ಮೊಯಿದು ಕುಂಞ, ಉದ್ಯಮಿ ಅಬ್ದುಲ್ಲ ಕುಂಞ ಕಾವು ಎಫ್ ಜೆ ಎಂ ಕಾರ್ಯದರ್ಶಿ ಮೂಸ ಕುಂಞ ಚೆಲ್ಯಡ್ಕ ಜಿಎಂಕೆ ಮುಹಮ್ಮದ್ ಕುಂಞ, ಮೂಸ ಮದನಿ , ಅಬ್ದುಲ್ಲ ಮದನಿ, ಮುಹಮ್ಮದ್ ಮದನಿ, ಅಬ್ದುಲ್ ರಹಿಮಾನ್ ಸಖಾಫಿ ತಿಂಗಳಾಡಿ, ಅಮೀರ್ ಹಾಜಿ , ಅಬ್ದುಲ್ ರಹಿಮಾನ್ ಕೈಕಾರ, ಮೂಸೆಕುಂಞ ಕೀಲಂಪಾಡಿ,
ಉಮ್ಮರ್ ಜನಪ್ರಿಯ, ಅಹ್ಮದ್ ಸಾಹೇಬ್, ಹಸೈನಾರ್ ಬಾರ್ತಕುಮೇರ್, ಅಶ್ರಫ್ ಸಖಾಫಿ ರೆಂಜ, ಬಶೀರ್ ಮುಸ್ಲಿಯಾರ್ ಕಂಚಿಲ್ಕುಂಜ, ತಾಜರ್ ಖಾನ್ ಕೀಲಂಪಾಡಿ, ಕಲಂದರ್ ಹಿಮಮಿ ಸಖಾಫಿ , ಹಾಮಿದ್ ಅಲಿ ಹಿಮಮಿ ಸಖಾಫಿ, ಹನೀಫ್ ಸಖಾಫಿ, ಶಂಸುದ್ದೀನ್ ಎಂ ಕೆ, ಸಿಂಸಾರುಲ್ ಹಖ್ ಆರ್ಲಪದವು, ಮುಹಮ್ಮದ್ ಮುಸ್ಲಿಯಾರ್ ನೆಕ್ಕರೆ, ಅಬ್ದುಲ್ ರಝಾಕ್ ನೂಜಿ, ಮುಸ್ತಾಕ್ ಇರ್ದೆ ,
ಇಬ್ರಾಹಿಂ ನಿಡ್ಪಳ್ಳಿ, ಅಶ್ರಫ್ ಆನಡ್ಕ, ಸಲೀಲ್ , ಅಬ್ದುಲ್ಲ ಮಾಸ್ಟರ್, ರಿಫಾಹಿ ಹಾಶಿಮಿ ಕಾಟುಕುಕ್ಕೆ,
ಇರ್ಫಾನ್ ಹಿಮಮಿ, ಅಶ್ರಫ್ ಅಜ್ಜಿಕಲ್ಲು, ಇಬ್ರಾಹಿಂ ಸಿ ಎಂ, ಖಲಂದರ್ ಅಜ್ಜಿಕಲ್ಲು, ಅಬ್ದುಲ್ ರಹಿಮಾನ್ ಮಣ್ಣಾಪು, ಖಲಂದರ್ ರೆಂಜ, ಜವಾದ್ ಅಜ್ಜಿಕಲ್ಲು ಮತ್ತಿತರರು ಉಪಸ್ಥಿತರಿದ್ದರು. ಎಸ್ ವೈ ಎಸ್ ರೆಂಜ ಸರ್ಕಲ್ ಅಧ್ಯಕ್ಷ ಅಬ್ದುಲ್ ರಜಾಕ್ ಹಿಮಮಿ ಪೇರಲ್ತಡ್ಕ ಸ್ವಾಗತಿಸಿ, ಉಪಾಧ್ಯಕ್ಷ ಅಬ್ದುಲ್ ಕರೀಂ ಬಾಅಹಸನಿ ವಂದಿಸಿದರು.
ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ 5 ಶಾಖೆಗಳಾದ ಪಾಣಾಜೆ, ರೆಂಜ, ಡೆಮ್ಮಂಗರ, ತಂಬುತ್ತಡ್ಕ ಹಾಗೂ ಪೇರಳ್ತಡ್ಕ ಯೂನಿಟುಗಳ ನಡುವೆ ತೀವ್ರ ಪೈಪೋಟಿಯೊಂದಿಗೆ ಸ್ಪರ್ಧಿಸಿ ಚಾಂಪಿಯನ್ ಪಟ್ಟವನ್ನು ಸತತ 2ನೇ ಬಾರಿಗೆ ಪಾಣಾಜೆ ಯೂನಿಟ್ ಹಾಗೂ ರನ್ನರ್ ಅಪ್ ಆಗಿ ರೆಂಜ ಯೂನಿಟ್ ಪಡೆದರು.
ಒಟ್ಟು ಐದು ವಿಭಾಗಗಳಲ್ಲಿ 128 ಸ್ಪರ್ಧೆಗಳಿದ್ದವು ಮತ್ತು ಇದರಲ್ಲಿ 150ಕ್ಕೂ ಹೆಚ್ಚಿನ ಸ್ಪರ್ಧಾರ್ಥಿಗಳು ಭಾಗವಹಿಸಿದ್ದರು. ಮತ್ತು ಪ್ರಥಮ ಸ್ಥಾನವನ್ನು ಪಡೆದ ವಿದ್ಯಾರ್ಥಿಗಳು ಮಾಣಿಯಲ್ಲಿ ನಡೆಯುವ ಡಿವಿಜನ್ ಮಟ್ಟದ ಸಾಹಿತ್ಯೋತ್ಸವದಲ್ಲಿ ಭಾಗವಹಿಸಲಿದ್ದಾರೆ. ಮತ್ತು ಈ ಕಾರ್ಯಕ್ರಮದಲ್ಲಿ ಹಲವಾರು ಗಣ್ಯ ಅತಿಥಿ ಹಾಗೂ ಉಮಾರ ನಾಯಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು. 2026 ನೇ ಸಾಹಿತ್ಯೋತ್ಸವವನ್ನು ಎಸ್ ಎಸ್ ಎಫ್ ರೆಂಜ ಸೆಕ್ಟರ್ ನ ಪಾಣಾಜೆ ಎಸ್ ಎಸ್ ಎಫ್ ಯೂನಿಟ್ ನಲ್ಲಿ ನಡೆಸಲು ಯೂನಿಟ್ ನಾಯಕರಿಗೆ ಧ್ವಜ ನೀಡುವುದರ ಮೂಲಕ ಜವಾಬ್ದಾರಿಯನ್ನು ನೀಡಲಾಯಿತು.