ಪಾಣಾಜೆ ವಿದ್ಯಾವರ್ಧಕ ಸಂಘದ ಮಹಾಸಭೆ ಅಧ್ಯಕ್ಷರಾಗಿ ಉಪೇಂದ್ರ ಬಲ್ಯಾಯ ದೇವಸ್ಯ ಪುನರಾಯ್ಕೆ


ಪಾಣಾಜೆ: ಪಾಣಾಜೆ ವಿದ್ಯಾವರ್ಧಕ ಸಂಘದ ಮಹಾಸಭೆಯು ಸಂಘದ ಅಧ್ಯಕ್ಷ ಉಪೇಂದ್ರ ಬಲ್ಯಾಯ ದೇವಸ್ಯ ಅವರ ಅಧ್ಯಕ್ಷತೆಯಲ್ಲಿ ಅ 30 ರಂದು ಸುಬೋಧ ಪ್ರೌಢಶಾಲೆಯಲ್ಲಿ ಜರಗಿತು.
  ಸಂಘದ ಕಾರ್ಯದರ್ಶಿ ಗಿಳಿಯಾಲು ಮಹಾಬಲೇಶ್ವರ ಭಟ್ಟರು ಗತ ವರ್ಷದ ವರದಿಯನ್ನು ಮಂಡಿಸಿದರು. ಖಜಾಂಜಿ ಪಿ ಎಂ ಬಾಲಕೃಷ್ಣ ಭಟ್ಟರು ಲೆಕ್ಕಪತ್ರ ಮಂಡಿಸಿದರು.

ಮುಂದಿನ ಮೂರು ವರ್ಷಗಳಿಗೆ ಆಡಳಿತ ಮಂಡಳಿಯನ್ನು ಸರ್ವಾನುಮತದಿಂದ ಆರಿಸಲಾಯಿತು. ಅಧ್ಯಕ್ಷರಾಗಿ ಉದ್ಯಮಿ ಉಪೇಂದ್ರ ಬಲ್ಯಾಯ ದೇವಸ್ಯ,ಉಪಾಧ್ಯಕ್ಷರಾಗಿ ಕಡ0ದೇಲು ಈಶ್ವರ ಭಟ್, ಕಾರ್ಯದರ್ಶಿ ಮತ್ತು ಶಾಲಾ ಸಂಚಾಲಕರಾಗಿ ಗಿಳಿಯಾಲು ಮಹಾಬಲೇಶ್ವರ ಭಟ್ ಹಾಗೂ ಖಜಾಂಜಿಯಾಗಿ ಎ ಎನ್ ಕೊಳಂಬೆ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಸದಸ್ಯರಾಗಿ ಸದಾಶಿವ ಎಸ್ ವಿ,ಪಾಲ್ತಮೂಲೆ, ಪಿಲಿಂಗಲ್ಲು ಕೃಷ್ಣ ಭಟ್, ವಿನೋಭಾ ಶೆಟ್ಟಿ ದಂಬೆಕಾನ, ಜಿ ಕೆ ಅವಿನಾಶ್ ಗಿಳಿಯಾಲು, ಕೃಷ್ಣ ಮೋಹನ ಪಿ ಎಸ್ ಪುತ್ತೂರು, ಕೃಪಾ ಶಂಕರ ಅರ್ಧಮೂಲೆ, ಶ್ರೀಮತಿ ವಿದ್ಯಾನಾರಾಯಣ ಮಣ್ಣ0ಗಳ,ಉಮೇಶ ಮಿತ್ತಡ್ಕ, ಡಾ ಹರಿಕೃಷ್ಣ ಪಾಣಾಜೆ, ಸಿ. ಸುಬ್ರಹ್ಮಣ್ಯ ಶಾಸ್ತ್ರಿ ಪುತ್ತೂರು, ಡಾ ತಿಮ್ಮಪ್ಪ ರೈ ಕೆದಂಬಾಡಿ ಅವರನ್ನು ಆಯ್ಕೆ ಮಾಡಲಾಯಿತು.
 ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ನಿರ್ಮಲ ಕೆ ಅವರನ್ನು ಪದನಿಮಿತ್ತ ಸದಸ್ಯರನ್ನಾಗಿ ಹಾಗೂ ಶ್ರೀಮತಿ ವಿನುತಾ ಕುಮಾರಿ ಬಿ ಅವರನ್ನು ಶಿಕ್ಷಕರ ಪ್ರತಿನಿಧಿಯನ್ನಾಗಿ ನೇಮಿಸಲಾಯಿತು.
 ಅಧ್ಯಕ್ಷರು ತನ್ನ ಭಾಷಣದಲ್ಲಿ ಸರ್ವ ಸದಸ್ಯರ ಸಹಕಾರವನ್ನು ಕೋರಿದರು. ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿ ಮುಖ್ಯ ಶಿಕ್ಷಕಿ ಶ್ರೀಮತಿ ನಿರ್ಮಲ ಕೆ ಅವರು ಸ್ವಾಗತಿಸಿ ವಂದಿಸಿದರು.
Next Post Previous Post