ಪಾಣಾಜೆ ವಲಯ ಹಿರಿಯ ಕಾಂಗ್ರೆಸ್ ಮುಖಂಡ ಎ ಆರ್ ಅಬ್ದುಲ್ ರಹಿಮಾನ್ ಹಾಜಿ ನಿಧನ
ಪುತ್ತೂರು: ಪಾಣಾಜೆ ಗ್ರಾಮದ ಹಿರಿಯ ಕಾಂಗ್ರೆಸ್ ಮುಖಂಡ ಎ ಆರ್ ಅಬ್ದುಲ್ ರಹಿಮಾನ್ ಹಾಜಿ ಅವರು ಆಗಸ್ಟ್ 5ರಂದು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿರುವರು ಯಾವುದೇ ಪ್ರತಿಫಲ ಬಯಸದೆ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿಯುತ್ತಾ ಹಲವಾರು ವರ್ಷಗಳಿಂದ ಸದಾ ವಲಯ ಕಾಂಗ್ರೆಸ್ ಸಭೆ ನಡೆಸಲು ಸ್ಥಳಾವಕಾಶ ಒದಗಿಸಿ ಕಾಂಗ್ರೆಸ್ಸಿನ ಯಶಸ್ಸಿಗೆ ಕಾಣಕರ್ತರಾಗಿದ್ದರು.
ಬೀಡಿ ಉದ್ದಿಮೆಯನ್ನು ನಡೆಸುತ್ತಿದ್ದ ಇವರು ಪಾಣಾಜೆ ಸಿ ಎ ಬ್ಯಾಂಕಿನ ನಿರ್ದೇಶಕರಾಗಿ, ಪ್ರತಿಷ್ಠಿತ ಆರ್ಲಪದವು ಬದ್ರಿಯಾ ಜುಮ್ಮಾ ಮಸೀದಿಯ ಪ್ರಧಾನ ಕಾರ್ಯದರ್ಶಿಯಾಗಿ ಹಲವಾರು ವರ್ಷಗಳ ಕಾಲ ವಲಯ ಕಾಂಗ್ರೆಸ್ಸಿನ ಕಾರ್ಯದರ್ಶಿಯಾಗಿ ಸೇವಾ ಸಲ್ಲಿರುವ ಮುಂಚೂಣಿ ನಾಯಕರಾಗಿದ್ದರು ಪ್ರಸಕ್ತ ಆರ್ಲಪದವು ಬದ್ರಿಯಾ ಜುಮ್ಮಾ ಮಸೀದಿಯ ಉಪಾಧ್ಯಕ್ಷರಾಗಿರುವ ಇವರು ಧರ್ಮಪತ್ನಿ ಖದೀಜಮ್ಮ ಹಜ್ಜುಮ್ಮ ಮಕ್ಕಳಾದ ಎ ಆರ್ ಅಬ್ದುಲ್ ಕುಂಞ, ಎ ಆರ್ ಮುಹಮ್ಮದ್ ಎ ಆರ್ ಇಬ್ರಾಹಿಂ ಎ ಆರ್ ಮೂಸ ಕುಂಞ, ಬೀಫಾತುಮ್ಮ , ಜಮೀಲ ಹಾಗೂ ಸೊಸೆಯಂದಿರು ಅಳಿಯಂದಿರು ಮತ್ತು ಮೊಮ್ಮಕ್ಕಳನ್ನು, ಅಭಿಮಾನಿಗಳನ್ನು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ
ಮೃತರ ಮನೆಗೆ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪ್ರಸಾದ ಆಳ್ವ ಭೇಟಿ ನೀಡಿ ಇವರ ಅಗಲಿಕೆ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿ ತೀವ್ರ ಸಂತಾಪ ವ್ಯಕ್ತಪಡಿಸಿದರು ಈ ಸಂದರ್ಭದಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ನಾಯಕರುಗಳು, ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಶ್ರೀಪ್ರಸಾದ್ ಪಾಣಾಜೆ ಪುತ್ತೂರು ವಲಯ ಕಾಂಗ್ರೆಸ್ ಉಪಾಧ್ಯಕ್ಷ ಡಾ.ಹಾಜಿ.ಯಸ್ ಅಬೂಬಕ್ಕರ್ ಆರ್ಲಪದವು, ಪಾಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಮೈಮೂನತುಲ್ ಮೆಹ್ರಾ, ಸದಸ್ಯರಾದ ನಾರಾಯಣ ನಾಯಕ್ ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಸದಸ್ಯ ಮೊಯಿದು ಕುಂಞ, ಪಾಣಾಜೆ ಸಿ ಎ ಬ್ಯಾಂಕ್ ಉಪಾಧ್ಯಕ್ಷ ಉಮೇಶ್ ರೈ ಗಿಳಿಯಾಲು ನಿರ್ದೇಶಕರಾದ ಸದಾಶಿವ ರೈ ಸೂರಂಬೈಲು, ಮಾಜಿ ನಿರ್ದೇಶಕರಾದ ರವೀಂದ್ರ ಭಂಡಾರಿ ಭೈಂಕ್ರೋಡು
,ಅಬ್ದುಲ್ಲ ಕುಂಞ ಜಾಲಗದ್ದೆ, ಮೂಸೆಕುಂಞ ಹಾಜಿ ಕಂಚಿಲ್ಕುಂಜ, ಬೆಟ್ಟಂಪಾಡಿ ಸಿ ಎ ಬ್ಯಾಂಕ್ ಮಾಜಿ ನಿರ್ದೇಶಕ ಮುಹಮ್ಮದ್ ಕುಂಞ ಕೊರಿಂಗಿಲ ಪಾಣಾಜೆ ಪ್ರಾಥಮಿಕ ಶಾಲೆ ದೈಹಿಕ ಶಿಕ್ಷಣ ಶಿಕ್ಷಕ ಸುಧಾಕರ ರೈ ಗಿಳಿಯಲು, ಪಾಣಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ ಸದಾನಂದ ನಾಯ್ಕ ಭರಣ್ಯ ಬೂತ್ ಅಧ್ಯಕ್ಷರಾದ ಗಿರೀಶ್ ಗೋಲ್ವಾಲ್ಕರ್ ಕಡಂದೇಲು, ಶ್ರೀನಿವಾಸ ಭರಣ್ಯ ಪಾಣಾಜೆ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಉಮ್ಮರ್ ಜನಪ್ರಿಯ,
ಬದ್ರಿಯಾ ಜುಮ್ಮಾ ಮಸೀದಿ ಕಾರ್ಯಾಧ್ಯಕ್ಷ ಎನ್ ಎಸ್ ಯುಸುಫ್ , ಕಾರ್ಯದರ್ಶಿ ಪಿ ಕೆ ಅಬೂಬಕರ್ ಮುಖಂಡರಾದ ವಿಶ್ವನಾಥ ರೈ ಕಡಮಾಜೆ ಬಾಲಕೃಷ್ಣ ರೈ ಸೂರಂಬೈಲು , ಚನಿಯ ನಾಯ್ಕ , ಅಬೂಬಕರ್ ಕೊರಿಂಗಿಲ, ಜಗನ್ಮೋಹನ್ ರೈ ಕೆದಂಬಾಡಿ, ಕೆ ಆಲಿ ಮತ್ತಿತರ ಅಪಾರ ಅಭಿಮಾನಿಗಳು ಉಪಸ್ಥಿತರಿದ್ದರು