ಮಂಗಳೂರು: ಶಾಫಿ ಜುಮ್ಮಾ ಮಸೀದಿ (ರಿ) ಕೆ.ಎಸ್.ರಾವ್ ನಗರ ಮೂಲ್ಕಿ ಮಕಾಶಿಫುಲ್ ಉಲೂಮ್ ಮದರಸದ ನೂತನ ಕಟ್ಟಡದ ಶಂಕು ಸ್ಥಾಪನೆ


ಮಂಗಳೂರು: ಶಾಫಿ ಜುಮ್ಮಾ ಮಸೀದಿ (ರಿ) ಕೆ.ಎಸ್.ರಾವ್ ನಗರ ಮೂಲ್ಕಿ ಮಕಾಶಿಫುಲ್ ಉಲೂಮ್ ಮದರಸದ ನೂತನ ಕಟ್ಟಡದ ಶಂಕು ಸ್ಥಾಪನೆಯು ಇಂದು ಜುಮ್ಮಾ ನಮಝಿನ ಬಳಿಕ ನಡೆಯಿತು

 ದ.ಕ ಜಿಲ್ಲಾ ಸಂಯುಕ್ತ ಖಾಝಿಗಳಾಗಿರುವ ಬಹುಮಾನ್ಯ ತ್ವಾಖಾ ಅಹ್ಮದ್ ಮುಸ್ಲಿಯಾರ್ ಶಂಕು ಸ್ಥಾಪನೆಯನ್ನು *ನೆರವೇರಿಸಿದರು* 

ಬಹು ಶೈಖುನ ಬೊಳ್ಳೂರು ಉಸ್ತಾದ್ ದುಅ ಆಶಿರ್ವಚನ ನೀಡಿದರು ಶಾಫಿ ಜುಮ್ಮಾ ಮಸೀದಿ ಇದರ ಖತೀಬರಾಗಿರುವ ಬಹು ಶರೀಫ್ ದಾರಿಮಿ ಅಲ್ ಹೈತಮಿ ಪ್ರಸ್ತಾವಿಕ ಮಾತುಗಳನ್ನಾಡಿದರು

 ಅಧ್ಯಕ್ಷರಾಗಿರುವ ಬಶೀರ್ ಅಹ್ಮದ್ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಲ್ ಅಖ್ದೂದ್ ಕಂಪೆನಿ ಸೌದಿ ಅರಬಿಯ ಇದರ ಪಾಲುದಾರರಾದ ಉಮ್ಮರ್ ಫಾರೂಕ್,ಉದ್ಯಮಿ ಅಬ್ಬಾಸ್ ಮಂಗಳೂರು ದ.ಕ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷರಾಗಿರುವ ಜನಾಬ್ ಫಕೀರಬ್ಬ ಮಾಸ್ಟರ್ ಸೇರಿದಂತೆ ಮಸೀದಿಯ ಮಾಜಿ ಅಧ್ಯಕ್ಷರುಗಳಾದ ಅಹಮ್ಮದ್ ಭಾವ, MK.ಮುಸ್ತಫಾ, AH ರಫೀಕ್, ME ಹನೀಫ್, ಸೇರಿದಂತೆ ಊರಿನ ಗಣ್ಯರು ಜಮಾಅತ್ ಭಾಂದವರು ಉಪಸ್ಥಿತರಿದ್ದರು

 *ಮೂಲ್ಕಿ* *ನಗರ* *ಪಂಚಾಯತ್* *ಮಾಜಿ* *ಅಧ್ಯಕ್ಷರಾದ* *BM* *ಆಸೀಫ್* *ಅತಿಥಿಗಳಿಗೆ* *ಸ್ವಾಗತಿಸಿ* *ಕಾರ್ಯಕ್ರಮ* *ನಿರೂಪಿಸಿದರು* 
 *ಪ್ರಧಾನ* *ಕಾರ್ಯದರ್ಶಿ* *M* *ಇಸ್ಮಾಯಿಲ್* *ಕೊಲ್ನಾಡು* *ಧನ್ಯವಾದ* *ಸಮರ್ಪಿಸಿದರು*
Next Post Previous Post