ಐದು ವರ್ಷ ಬಿದಿರು ತೋಟವನ್ನು ನೋಡಿ 60 ವರ್ಷ ನಿಮ್ಮನ್ನು ಬಿದಿರು ತೋಟ ನೋಡುತ್ತದೆ - ಎಂ ಜಿ ಸತ್ಯನಾರಾಯಣ
ಪುತ್ತೂರು: ಕಡಿಮೆ ಖರ್ಚಿನಲ್ಲಿ ಉತ್ತಮ ಆದಾಯ ಬರುವ ಬಿದಿರು ಕೃಷಿಯನ್ನು ಪ್ರತಿಯೊಬ್ಬ ರೈತನು ಮಾಡಿದಲ್ಲಿ ಯಶಸ್ವಿಯನ್ನು ಕಾಣಬಹುದು ಐದು ವರ್ಷ ಬಿದಿರು ತೋಟವನ್ನು ನಾವು ನೋಡಿದರೆ 60 ವರ್ಷ ನಿಮ್ಮನ್ನು ಬಿದಿರು ತೋಟ ನೋಡುತ್ತದೆ ಎಂದು ಭಾರತೀಯ ಕಿಸಾನ್ ಸಂಘ ಮಂಗಳೂರು ವಿಭಾಗದ ಅಧ್ಯಕ್ಷರಾದ ಎಂ ಜಿ ಸತ್ಯನಾರಾಯಣ ರೈತರಿಗೆ ಕಿವಿಮಾತು ಹೇಳಿದರು.
ಗ್ರಾಮಜನ್ಯ ರೈತ ಉತ್ಪಾದಕ ಸಂಸ್ಥೆ ಗ್ರಾಮಜನ್ಯ ರೈತ ಸೇವಾ ಟ್ರಸ್ಟ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಇದರ ಆಶ್ರಯದಲ್ಲಿ ಜುಲೈ 12ರಂದು ಪಾಣಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ನಡೆದ ಬಿದಿರು ಕೃಷಿಯ ಬಗ್ಗೆ ಮಾಹಿತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಮುಂದೆ ಮಾತನಾಡುತ್ತಾ ಬಿದಿರು ಕೃಷಿಯ ಆರ್ಥಿಕ ಪರಿಸರ ಸ್ನೇಹಿ ಅವಕಾಶಗಳ ಬಗ್ಗೆ ಹಾಗೂ ವೈಜ್ಞಾನಿಕ ಮಾಹಿತಿಗಳನ್ನು ನೀಡಿದರು ಪುತ್ತೂರು ಗ್ರಾಮ ಜನ್ಯ ಇದರ ಅಧ್ಯಕ್ಷರಾದ ಮೂಲ ಚಂದ್ರ ಕೆ ಇವರು ಮಾತನಾಡುತ್ತಾ ಸುಸ್ಥಿರ ಭವಿಷ್ಯಕ್ಕಾಗಿ ಗ್ರಾಮ ಜನ್ಯದ ಸಹಭಾಗಿಗಳಾಗಿ ಎಂದು ರೈತರಿಗೆ ಕರೆ ನೀಡಿದರು. ಪಾಣಾಜೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಪದ್ಮನಾಭ ಬೋರ್ಕರ್ ಮಾತನಾಡುತ್ತಾ ಇದು ಒಂದು ಉತ್ತಮ ಕಾರ್ಯಗಾರ ಆಗಿದೆ ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಡಾ.ಹಾಜಿ .ಎಸ್ .ಅಬೂಬಕ್ಕರ್ ಆರ್ಲಪದವು ಪ್ರಾಸ್ತಾವಿಕದೊಂದಿಗೆ ಸ್ವಾಗತವನ್ನು ಮಾಡುತ್ತಾ ಖಾಲಿ ಜಾಗದಲ್ಲಿ ಬಿದಿರು ಬೆಳೆಸಿ ಚಿನ್ನ ಪಡೆಯಿರಿ. ಬಿದಿರು ಯಾವುದೇ ಆರೈಕೆ ಇಲ್ಲದೆ ತಾನಾಗಿಯೇ ಬೆಳೆಯುತ್ತದೆ ಅದರಿಂದ ನೂರಾರು ಉಪಯೋಗಗಳಿವೆ ಎಂದು ಹೇಳುತ್ತಾ ಸರ್ವರನ್ನು ಸ್ವಾಗತಿಸಿದರು .
ಪುತ್ತೂರು ಗ್ರಾಮಜನ್ಯದ ನಿರ್ದೇಶಕರಾದ ರಾಮ್ ಪ್ರತೀಕ್ ಕರಿಯಾಲ ರೈತರೊಂದಿಗೆ ಸಂವಾದ ನಡೆಸಿದರು. ಕಾರ್ಯಕ್ರಮ ಆಯೋಜಕರಾದ ಉಕ್ಕಿನಡ್ಕ ವಷಿಷ್ಠಾಶ್ರಮ ಟ್ರಸ್ಟ್ ಮತ್ತು ಶಾಲೆ ಇದರ ಅಧ್ಯಕ್ಷರಾದ ಪಿ ಜಿ ಶಂಕರ ನಾರಾಯಣ ಭಟ್ ಆರ್ಥಿಕ ಸಬಲೀಕರಣಕ್ಕೆ ಬಿದಿರು ಬೆಳೆಸಿರಿ ಎಂಬ ಮಾಹಿತಿಯನ್ನು ನೀಡುವುದರೊಂದಿಗೆ ಧನ್ಯವಾದ ಸಮರ್ಪಿಸಿದರು.
ಕಾರ್ಯಗಾರದಲ್ಲಿ ನ್ಯಾಯವಾದಿ ಕೃಪಾಶಂಕರ್ ಅರ್ಧ ಮೂಲೆ , ಪಾಣಾಜೆ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಹರೀಶ್ ಪೂಜಾರಿ , ಮುಹಮ್ಮದ್ ಶೇಖಮಲೆ ಅರವಿಂದ ಭರಣ್ಯ ಅಹಮದ್ ಕುಟ್ಟಿ ಮಾಡನ್ನೂರು ಚಂದ್ರಶೇಖರ ಭಟ್ ನಿಡ್ಪಳ್ಳಿ ಮುಹಮ್ಮದ್ ಬಶೀರ್ ಉಪ್ಪಳ ಚನಿಯ ನಾಯ್ಕ ತೂಂಬಡ್ಕ ತಮ್ಮಣ್ಣ ನಾಯ್ಕ ಸುಡ್ಕುಳಿ ನಾಗರಾಜ ಭಟ್ ನಿಡ್ಪಳ್ಳಿ ಪುಷ್ಪರಾಜ್ ಶೆಟ್ಟಿ ಕೋಟೆ ಮನಿಷ್ ಗಾಂಭೀರ್ ಕಾಟುಕುಕ್ಕೆ, ಗಿರೀಶ್ ಗೋಲ್ವಾಲ್ಕರ್ ಕಡಂದೇಲು, ಮತ್ತಿತರರು ಉಪಸ್ಥಿತರಿದ್ದರು ಪುತ್ತೂರು ಗ್ರಾಮ ಜನ್ಯದ ಸಿಬ್ಬಂದಿಗಳಾದ ಮಮತಾ ಮತ್ತು ಸೌಮ್ಯ ಸಹಕರಿಸಿದರು