ಕಾಸರಗೋಡು ನಗರಸಭೆ; ಮತ್ತೆ ಯುಡಿಎಫ್’ಗೆ ತೆಕ್ಕೆಗೆ | ಕೇರಳದಲ್ಲಿ ಯುಡಿಎಫ್ ಭರ್ಜರಿ ಗೆಲುವು


ಕಾಸರಗೋಡು: ಕೇರಳ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಶನಿವಾರ (ಡಿ.13) ಬೆಳಗ್ಗೆ 8ಗಂಟೆಗೆ ಆರಂಭಗೊಂಡಿದ್ದು, ಕಾಸರಗೋಡು ನಗರಸಭೆಯಲ್ಲಿ ಯುಡಿಎಫ್ ಮತ್ತೆ ಅಧಿಕಾರದ ಗದ್ದುಗೆ ಏರಿದೆ.

ನಗರಸಭೆಯಲ್ಲಿ ಕಳೆದ ಬಾರಿಯ ಫಲಿತಾಂಶ ಪುನರಾವರ್ತನೆ ಆಗಿದ್ದು, 39 ವಾರ್ಡ್ ಗಳಲ್ಲಿ ಯುಡಿಎಫ್ 24ರಲ್ಲಿ ಗೆಲುವು ಸಾಧಿಸಿದ್ದರೆ, ಎನ್.ಡಿ.ಎ. 12ರಲ್ಲಿ ಜಯ ಗಳಿಸಿದೆ. ಎಲ್ ಡಿ ಎಫ್ ಒಂದು ವಾರ್ಡ್ ನಲ್ಲಿ ಜಯಿಸಿದೆ. ಪಕ್ಷೇತರರು ಎರಡು ವಾರ್ಡ್ ಗಳಲ್ಲಿ ಗೆಲುವು ಸಾಧಿಸಿದ್ದಾರೆ. ಮತ ಎಣಿಕೆ ಮುಂದುವರಿದಿದೆ.
Next Post Previous Post