ಲೇಖನ: ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ದ್ವೇಷ ಭಾಷಣ ~ ಆಶಿಕ್ ಕೊಡಗು
ಲೇಖನ: ಇತ್ತೀಚಿಗೆ ಭಾರತವು ಯಾವ ಕಡೆಗೆ ಸಾಗುತ್ತಿದೆ ಎಂದುದರ ಕುರಿತು ದೇಶ - ವಿದೇಶದ ಹಲವಾರು ಸಂಶೋಧನ ಸಂಸ್ಥೆಗಳು ತಮ್ಮ ವರದಿಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಇದರಲ್ಲಿ ಇತ್ತೀಚಿಗೆ ಬಿಡುಗಡೆ ಮಾಡಿದ Center for the study and organised hate ನ ಆಧೀನದಲ್ಲಿ ಇರುವ India hate lab ಬಿಡುಗಡೆ ಮಾಡಿದ ವರದಿಯು ಇಡೀ ವಿಶ್ವವೇ ಭಾರತದತ್ತ ನೋಡುವ ಹಾಗೆ ಮಾಡಿದೆ.
ವರದಿಯು 2025ರ ಅತೀ ಹೆಚ್ಚು ದ್ವೇಷ ಭಾಷಣ ಮಾಡಿರುವುದರಲ್ಲಿ ಭಾರತದಲ್ಲಿನ ಸ್ಥಿತಿಗತಿಗಳ ಕುರಿತು ಸಂಕ್ಷಿಪ್ತವಾಗಿ ವಿವರಿಸಿದೆ.
ಈ ವರದಿಯು ದೇಶದ ಸಾಮಾಜಿಕ - ಸಾಮರಸ್ಯ, ಆಂತರಿಕ ಭದ್ರತೆ ,ಪ್ರಜಾಪ್ರಭುತ್ವದ ಮೂಲ ಮೌಲ್ಯಗಳ ಭವಿಷ್ಯದ ಕುರಿತು ಗಂಭೀರ ಪ್ರಶ್ನೆಯನ್ನು ಎತ್ತಿ ಹಾಕಿದೆ.
ವರದಿಯ ಪ್ರಕಾರ 2025 ರಲ್ಲಿ ಸುಮಾರು 1318 ದ್ವೇಷ ಭಾಷಣಯ ಪ್ರಕರಣ ದಾಖಲಾಗಿದೆ. ಕಳೆದ ಎರಡು ವರ್ಷಕ್ಕೆ ನೋಡುವುದಾದರೆ ಸುಮಾರು ಶೇಕಡಾ 97 ರಷ್ಟು ಪ್ರಕರಣಗಳು ಹೆಚ್ಚಾಗಿದೆ.
ಅದರಲ್ಲಿಯೂ 1289 ಪ್ರಕರಣಗಳು ಅಲ್ಪಸಂಖ್ಯಾತ ಮುಸ್ಲಿಮರ ವಿರುದ್ಧವಾಗಿದ್ದರೆ, 41 ಶೇಕಡ ಅಂದರೆ 162 ಪ್ರಕರಣಗಳು ಕ್ರೈಸ್ತರ ಕುರಿತಾಗಿದೆ.ಅದರಲ್ಲಿ ಅತಿ ಹೆಚ್ಚು ಭಾಷಣ ಮಾಡಿದ್ದು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಮತ್ತು ಎನ್ ಡಿ ಎ ಮೈತ್ರಿಕೂಟದ ಸರ್ಕಾರವಿರುವ ರಾಜ್ಯಗಳಲ್ಲಾಗಿದೆ ಎಂದು ಬಿಡುಗಡೆ ಮಾಡಿದ ವರದಿಯು ಹೇಳಿದೆ.ಅವುಗಳಲ್ಲಿ 656 ಪ್ರಕರಣಗಳು ಲವ್ ಜಿಹಾದ್ ಮುಂತಾದ ಪ್ರಕರಣಗಳ ಮೂಲಕ ಜನರಲ್ಲಿ ಭಯವನ್ನು ಬಿತ್ತಿಸಲು ಬೇಕಾಗಿ ಉದ್ದೇಶಪೂರ್ವಕವಾಗಿ ,
308 ಪ್ರಕರಣಗಳು ಹಿಂಸಾಚಾರದ ಕರೆ ನೀಡಿದೆರೆ, 136 ಪ್ರಕರಣಗಳು ಸಾರ್ವಜನಿಕರಿಗೆ ಶಸ್ತ್ರಾಸ್ತ್ರ ಹಿಡಿಯಲು ಪ್ರಚೋದನೆ ನೀಡಿದರೆ,141 ಪ್ರಕರಣಗಳು ಅಲ್ಪಸಂಖ್ಯಾತರ ಮಾನವೀಯ ಮೌಲ್ಯಗಳನ್ನು ಕುಗ್ಗಿಸಲು, 120 ಮುಸ್ಲಿಮರ ವ್ಯಾಪಾರ ವಹಿವಾಟುಗಳನ್ನು ಬಹಿಷ್ಕರಿಸಲು ಬಹಿಷ್ಕರಿಸಲು ಬೇಕಾಗಿ ಹೀಗೆ ಹಲವಾರು ರೀತಿಯಲ್ಲಿ ಸಮಾಜದಲ್ಲಿ ತನ್ನ ರೌದ್ರ ಮುಖವನ್ನು ಪ್ರದರ್ಶಿಸುತ್ತಿದೆ.ಇದರಿಂದಾಗಿ ಹಲವಾರು ಗುಂಪು ಹತ್ಯೆಗಳು,ಗುಂಪು ಥಳಿತಗಳು, ನರಮೇಧ ವ್ಯಾಪಕವಾಗಿ ನಡೆಯುತ್ತಿದೆ. ಅತಿ ಹೆಚ್ಚು ದೇಶ ಭಾಷಣ ಮಾಡಿದರಲ್ಲೇ ಪ್ರಥಮ ಸ್ಥಾನವನ್ನು ಪುಷ್ಕರ್ ಸಿಂಗ್ ದಾಮಿ ಪಡೆದುಕೊಂಡಿದ್ದಾರೆ.ಅವರ ಮೇಲೆ ಸುಮಾರು 71 ಪ್ರಕರಣಗಳು ದಾಖಲಾಗಿವೆ.
ದ್ವೇಷ ಭಾಷಣವನ್ನು ಸಮಾಜದಲ್ಲಿ ಪಸರಿಸುವಲ್ಲಿ ಸಾಮಾಜಿಕ ಮಾಧ್ಯಮಗಳು ದೊಡ್ಡಮಟ್ಟದಲ್ಲಿ ಪ್ರಚಾರಕರಂತೆ ಕಾರ್ಯ ನಿರ್ವಹಿಸುತ್ತಿವೆ.
ಅಂದರೆಸುಮಾರು 948 ಪ್ರಕರಣಗಳು ಫೇಸ್ಬುಕ್ ಮುಖಾಂತರ,246 ಯೂಟ್ಯೂಬ್ ಮುಖಾಂತರ ,67 ಪ್ರಕರಣಗಳು ಇನ್ಸ್ಟಾಗ್ರಾಮ್ ಮೂಲಕ ನಡೆದಿದೆ.
ಇದೆಲ್ಲವೂ ಕೂಡ ವ್ಯಾಪಕವಾಗಿ ಜನರು ಅದನ್ನು ಸ್ವೀಕರಿಸುತ್ತಾ ಇದ್ದಾರೆ.
ಯಾವುದೋ ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ನಡೆಸುವ ಈ ರೀತಿಯ ದ್ವೇಷಭಾಷಣಗಳು ಭಾರತದ ಸಂವಿಧಾನದ 14 ಮತ್ತು 15 ನೇ ವಿಧಿಗಳಾದ ಸಮಾನತೆ ಮತ್ತು ತಾರತಮ್ಯ ರಹಿತ ಬದುಕುವ ಹಕ್ಕುಗಳನ್ನು ಹತ್ತಿಕ್ಕುವುದಾಗಿದೆ.
ಅಮೆರಿಕದ ಒಂದು ವರದಿಯ ಪ್ರಕಾರ,ಮುಂದಿನ ಎರಡು ವರ್ಷಗಳಲ್ಲಿ ನಾಗರಿಕ ವಿರುದ್ಧ ಸಾಮೂಹಿಕ ಹಿಂಸಾಚಾರ ಮತ್ತು ಜನಾಂಗೀಯ ದೌರ್ಜನ್ಯಗಳ ಗಂಭೀರ ಅಪಾಯಕ್ಕೆ ಸಿಲುಕುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವು ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ.
ಏತನ್ಮಧ್ಯೆ ,ಕರ್ನಾಟಕ ಸರ್ಕಾರ ದ್ವೇಷ ಭಾಷಣದ ಮಾಡುವವರ ವಿರುದ್ಧ ಒಂದು ಹೊಸ ಮಸೂದೆಯನ್ನು ಮಂಡಿಸಿದ್ದು,ಬಾಯಿ ಮುಚ್ಚಲು ಆಗದ ಕೆಲವರಿಗೆ ಈಗ ಕಾನೂನಿನ ಭಯ ಸೃಷ್ಟಿಯಾಗಿದೆ.ಅದನ್ನು ಜಾರಿ ಬರದ ರೀತಿಯಲ್ಲಿ ಸರ್ಕಾರದ ವಿರುದ್ಧ ನಿರಂತರವಾಗಿ ಟೀಕೆಯ ಪ್ರಹಾರ ನಡೆಸುತ್ತಿದೆ.
ಕೊನೆಯದಾಗಿ,ದ್ವೇಷ ಭಾಷಣವು ಸಮಾಜದಲ್ಲಿ ಅಸಹಿಷ್ಣುತೆ, ವೈಷಮ್ಯ ಮತ್ತು ಹಿಂಸೆಗೆ ದಾರಿ ಮಾಡಿಕೊಡುವ ಅಪಾಯಕಾರಿ ಪ್ರವೃತ್ತಿಯಾಗಿದೆ. ಇದು ವ್ಯಕ್ತಿಗಳ ನಡುವೆ ಬಿರುಕು ಮೂಡಿಸಿ, ಸಮಾಜದ ಏಕತೆಯನ್ನು ಕುಗ್ಗಿಸುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಮಾತುಗಳ ಬಗ್ಗೆ ಜವಾಬ್ದಾರಿಯುತವಾಗಿ ವರ್ತಿಸಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಇತರರ ಗೌರವ ಮತ್ತು ಮಾನವೀಯತೆಯನ್ನು ಹಾನಿಗೊಳಿಸಬಾರದು. ದ್ವೇಷದ ಬದಲು ಸಹಬಾಳ್ವೆ, ಸಹಾನುಭೂತಿ ಮತ್ತು ಶಾಂತಿಯ ಸಂದೇಶವನ್ನು ಹರಡಿದಾಗ ಮಾತ್ರ ಸಮಾನತೆ ಹಾಗೂ ಸುಸ್ಥಿರ ಸಮಾಜವನ್ನು ನಿರ್ಮಿಸಲು ಸಾಧ್ಯವಾಗುತ್ತದೆ.
ಆಶಿಕ್ ಕೊಡಗು