51ನೇ ಜೂನಿಯರ್ ರಾಷ್ಟ್ರೀಯ ಕಬಡ್ಡಿ ಪಂದ್ಯಾಟಕ್ಕೆ ಕರ್ನಾಟಕ ತಂಡದಲ್ಲಿ ಸಲಾಹುದ್ದೀನ್ ಇರಾ ಆಯ್ಕೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕು ಇರ ಗ್ರಾಮದ ಕುರಿಯಾಡಿ ನಿವಾಸಿ ಹಾಗೂ ಭಾರತ್ ಫ್ರೆಂಡ್ಸ್ ಕ್ಲಬ್ ಇರಾ ಇದರ ಸದಸ್ಯರು ಮತ್ತು ಯುವ ಕಬಡ್ಡಿಪಟು ಸಲಾಹುದ್ದೀನ್ ಅವರು 51ನೇ ಜೂನಿಯರ್ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಕರ್ನಾಟಕ ತಂಡಕ್ಕೆ ಆಯ್ಕೆಯಾಗಿದ್ದಾರೆ.
ತೀವ್ರ ಪರಿಶ್ರಮ, ಶಿಸ್ತು ಮತ್ತು ನಿರಂತರ ಅಭ್ಯಾಸದ ಮೂಲಕ ಸಲಾಹುದ್ದೀನ್ ಹಲವಾರು ಕಬಡ್ಡಿ ಪಂದ್ಯಾಟಗಳಲ್ಲಿ ಉತ್ತಮ ಪ್ರದರ್ಶನ ನೀಡಿ, ಅನೇಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಅವರ ಈ ಸಾಧನೆ ಇರೆ ಗ್ರಾಮ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ಹೆಮ್ಮೆ ತಂದಿದೆ.
ಸಲಾಹುದ್ದೀನ್ ಅವರು ಮಂಗಳೂರು ಮಿಲಾಗ್ರಿಸ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಕಾಲೇಜು ತಂಡದಲ್ಲಿ ಹಲವರು ಪಂದ್ಯಾಟಗಳಲ್ಲಿ ಗೆಲುವಿನ ರೂವಾರಿಗಳು ಮತ್ತು ಉತ್ತಮ ಪ್ರದರ್ಶನವನ್ನು ನೀಡಿರುತ್ತಾರೆ, ಪ್ರಾರ್ಥಮಿಕ ಮಟ್ಟದಿಂದಲೇ ಕಬಡ್ಡಿ ಪಂದ್ಯಾಟವನ್ನು ಆಡುವುದರೊಂದಿಗೆ ಉತ್ತಮ ಸಾಧನೆಯನ್ನು ಮಾಡಿರುತ್ತಾರೆ ಸ್ಥಳೀಯ ಮಟ್ಟದಿಂದ ರಾಜ್ಯ ಮಟ್ಟದವರೆಗೆ ತಮ್ಮ ಪ್ರತಿಭೆಯಿಂದ ಗಮನ ಸೆಳೆದಿದ್ದಾರೆ.
ಗ್ರಾಮಸ್ಥರು, ಕ್ಲಬ್ ಸದಸ್ಯರು ಹಾಗೂ ಕಾಲೇಜಿನ ಸಿಬ್ಬಂದಿ, ಸ್ನೇಹಿತರಿಂದ ಅಭಿನಂದನೆಗಳ ಮಳೆ ಸುರಿಯಲಾಗಿದ್ದು, ಅವರು ರಾಷ್ಟ್ರಮಟ್ಟದಲ್ಲಿ ಕರ್ನಾಟಕದ ಪರ ಕಣಕ್ಕಿಳಿದು ಉತ್ತಮ ಪ್ರದರ್ಶನವನ್ನು ನೀಡಲಿ ಎಂದು ಶುಭ ಹಾರೈಸಿದ್ದಾರೆ
ರಾಷ್ಟ್ರಮಟ್ಟದ ಕ್ರೀಡಾಪಟು ಕಬಡ್ಡಿ ತರಬೇತುದಾರರಾದ ಆಕಾಶ್ ಶೆಟ್ಟಿ ಅವರ ಗರಡಿಯಲ್ಲಿ ಸಲಾಹುದ್ದೀನ್ ತರಬೇತಿ ಪಡೆಯುತ್ತಿದ್ದಾರೆ.
ಇವರು ಇರ ಗ್ರಾಮದ ಕುರಿಯಾಡಿ ನಿವಾಸಿಯಾದ ಮಹಮ್ಮದ್ ಮತ್ತು ಸಲ್ಮಾ ದಂಪತಿಗಳ ಸುಪುತ್ರ