ಇರ್ದೆ-ಬೈಲಾಡಿಯ ಬೆಂದ್ರ್ ತೀರ್ಥ ಕೆರೆಯಲ್ಲಿ ತೀರ್ಥ ಉಕ್ಕಿಸಿದ ಇರ್ದೆ ಶಿವಾಜಿ ಯುವಸೇನೆಯ ಯುವಕರ ಸಂಕಲ್ಪ ಶಕ್ತಿ ✍️ ನಾರಾಯಣ ರೈ ಕುಕ್ಕುವಳ್ಳಿ


ಪುತ್ತೂರು: ದಕ್ಷಿಣ ಭಾರತದ ಏಕೈಕ ಬಿಸಿ ನೀರಿನ ಕೆರೆ ಇರ್ದೆ-ಬೈಲಾಡಿಯ ಬೆಂದ್ರ್ ತೀರ್ಥ ತೀರ್ಥದ ಅಡಿ ಭಾಗದ ಕಲ್ಲನ್ನು ಸುಮಾರು ಏಳು ಫೀಟ್ ಅಷ್ಟು ಒಡೆದು ತೆಗೆದು ,ಅದನ್ನು ಸಮತಲ ಮಾಡಬೇಕೆಂದು ಯೋಚಿಸಿ, ಆ ಕಾರ್ಯವನ್ನು ಶಿವಾಜಿ ಯುವ ಸೇನೆಯ ಉತ್ಸಾಹಿ ಯುವಕರು ಕೈಗೆತ್ತಿಕೊಂಡಿದ್ದಾರೆ. 

       
ಈ ಕಾರ್ಯಾರಂಭಕ್ಕೆ ಶ್ರೀ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿ, ಇದೀಗ ಕೆಲಸವು ಸುವ್ಯವಸ್ಥಿತವಾಗಿ ನಡೆಯುತ್ತಿದೆ.
ಮೊದಲಿಗೆ ಕಲ್ಲನ್ನು ಒಡೆದಿದ್ದು, ನಂತರ ಸಣ್ಣ JCB ಯಂತ್ರದ ಸಹಾಯದಿಂದ ಅದನ್ನು ಹೊರತೆಗೆಯುವ ಕಾರ್ಯ ನಡೆಯುತ್ತಿದೆ.

ಬೆಂದ್ರುತೀರ್ಥದ ಪರಿಸರವನ್ನು ಸದಾ ಸ್ವಚ್ಛವಾಗಿ, ಸುಂದರವಾಗಿ ಕಾಪಾಡಿ, ಅದನ್ನು ಒಂದು ಆಕರ್ಷಕ ಪುಣ್ಯಕ್ಷೇತ್ರವನ್ನಾಗಿ ರೂಪಿಸಬೇಕೆಂಬ ಆತ್ಮೀಯರೇ,
ಬೆಂದ್ರುತೀರ್ಥದ ಅಡಿಯ ಕಲ್ಲನ್ನು ಸುಮಾರು 7ಫೀಟ್ ಅಷ್ಟು ಒಡೆದು ತೆಗೆದು ಅದನ್ನು ಸಮತಲ ಮಾಡಬೇಕೆಂದು ಯೋಚಿಸಿ, ಆ ಕಾರ್ಯವನ್ನು ಶಿವಾಜಿ ಯುವ ಸೇನೆಯ ಉತ್ಸಾಹೀ ಯುವಕರು ಕೈಗೆತ್ತಿಕೊಂಡಿದ್ದಾರೆ.

ಬೆಂದ್ರುತೀರ್ಥದ ಪರಿಸರವನ್ನು ಸದಾ ಸ್ವಚ್ಛವಾಗಿ, ಸುಂದರವಾಗಿ ಕಾಪಾಡಿ, ಅದನ್ನು ಮುಂದಿನ ದಿನಗಳಲ್ಲಿ ಒಂದು ಆಕರ್ಷಕ ಪುಣ್ಯಕ್ಷೇತ್ರವನ್ನಾಗಿ ರೂಪಿಸಬೇಕೆಂಬ ಉದ್ದೇಶದಿಂದ ಶ್ರಮಿಸುತ್ತಿರುವ ಶಿವಾಜಿ ಯುವ ಸೇನೆಯ ಎಲ್ಲಾ ಸದಸ್ಯರ ಸಮಾಜ ಧಾರ್ಮಿಕ ಮುಖಿ ಯೋಚನೆಯೊಂದಿಗೆ ಸುಮಾರು 80,000ರೂ‌. ಅಂದಾಜಿನ ಕಾರ್ಯ ನಡೆದಿದೆ.ಎಲ್ಲರ ಸಹಕಾರ ಹಸ್ತ ಇದೆ ಹಾಗೂ ಸರಕಾರವೂ ಈ ಕಡೆಗೆ ಗಮನ ಹರಿಸಬೇಕೆಂಬ ಮನವಿಯೂ ಇದೆ.



ಇದೀಗ ಕೆಲದಿನಗಳ ಕೆಲಸ ಕಾರ್ಯಗಳಿಂದ ಕೆರೆಯಾಳದಿಂದ ಈ ಸಮಯಕ್ಕೆ ಎರಡು-ಎರಡೂವರೆ ಅಡಿ ನೀರು ಮೇಲೇರಿದೆ.ಇದುವರೆಗೆ ಈ ಸಮಯಕ್ಕಾಗುವಾಗ ನೀರು ನೆಲ ಕಚ್ಚಿತ್ತು. ಜಾತ್ರೋತ್ಸವದ ಸಂದರ್ಭ,ಈ ಕೆರೆಯ ಪವಿತ್ರ ಜಲದಿಂದಲೇ ಶ್ರೀ ಬೈಲಾಡಿ ಶ್ರೀ ವಿಷ್ಣುಮೂರ್ತಿ ದೇವರ ಬಿಂಬಕ್ಕೆ ಜಲಾಭಿಷೇಕ ಮಾಡಿ ಮುಂದಿನ ಧಾರ್ಮಿಕ ವಿಧಿವಿಧಾನ ಗಳಿಗೆ ಮುಂದಾಗುವುದು.ಶಿವಾಜಿ ಯುವ ಸೇನೆ (ರಿ) ಬೆಂದ್ರ್ ತೀರ್ಥ ಇರ್ದೆ ಇಲ್ಲಿನ ಸರ್ವರೂ ಕಳೆದ ಒಂಬತ್ತು ವರ್ಷಗಳಿಂದ ಈ ಕೆರೆಯ ಸ್ವಚ್ಛತೆ ಕಾರ್ಯಕ್ರಮಗಳ ಕೈಗೊಂಡು ಇದೀಗ ಹತ್ತನೇ ವರ್ಷದ ಸಂದರ್ಭ ದೈವ ದೇವರ ಸಂಕಲ್ಪದಂತೆ, 

ಊರ ಹಿರಿಯರ ಅನುಗ್ರಹದಂತೆ ಮುಂದಿನ ಹೆಜ್ಜೆ ಗಳನ್ನಿಡಲಾಗಿದೆ ಎಂದು ಶಿವಾಜಿ ಯುವ ಸೇನೆಯ ಅಧ್ಯಕ್ಷರು,ಇರ್ದೆ ಬಾಳೆ ಹಿತ್ತಿಲು ಧನ್ಯರಾಜ್ ಮುಂದಿನ ಯೋಚನೆ ಯೋಜನೆಗಳ ಬಗ್ಗೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ಶಿವಾಜಿ ಸೇನೆಯ ಎಲ್ಲಾ ಪದಾಧಿಕಾರಿಗಳಿಗೆ,ಬೈಲಾಡಿ ಶ್ರೀ ವಿಷ್ಣುಮೂರ್ತಿ ದೇವಾಲಯದ ಆಡಳಿತ ಅಧ್ಯಕ್ಷರು, ಸದಸ್ಯರು, ಅರ್ಚಕರಿಗೆ  ಅಭಿನಂದನೆಗಳು ಹಾಗೂ ಶುಭವಾಗಲಿ.

✍️ ನಾರಾಯಣ ರೈ ಕುಕ್ಕುವಳ್ಳಿ
Next Post Previous Post