ಗೋವಾದಲ್ಲಿ ನಡೆದ ರಾಷ್ಟ್ರ ಮಟ್ಟದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಯೋಗ ನೃತ್ಯ ಪ್ರದರ್ಶನ ನೀಡಿದ ಗೌರಿತಾ ಕೆ. ಜಿ



ಬೆಂಗಳೂರು: ದಿನಾಂಕ 14ರಂದು ರವೀಂದ್ರ ಭವನ ಮಡ್ಗಾವ್ ಗೋವಾ ದಲ್ಲಿ ಚಿರಾಯು ಕನ್ನಡ ಟಿವಿ ಮತ್ತು ನೆನಪು ಫೌಂಡೇಶನ್ (ರಿ) ಕರ್ನಾಟಕ ಆಯೋಜಿಸಿದ ರಾಷ್ಟ್ರ ಮಟ್ಟದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಯೋಗ ಪಟು ಗೌರಿತಾ ಕೆ ಜಿ ಗೆ ನಡೆದಾಡುವ ದೇವರು ಪರಮ ಪೂಜ್ಯ ಶ್ರೀ ಮಲ್ಲಿಕಾರ್ಜುನ ಅಪ್ಪಾಜಿಯವರು ರಾಷ್ಟ್ರೀಯ ಯೋಗ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ಚಿರಾಯು ಕನ್ನಡ ವಾಹಿನಿ ಸಂಸ್ಥಾಪಕರು ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು 


ಈ ಸಂದರ್ಭದಲ್ಲಿ ಗೌರಿತಾ ಯೋಗ ನೃತ್ಯ ಪ್ರದರ್ಶನ ನೀಡಿದಳು. ಕುಮಾರಸ್ವಾಮಿ ವಿದ್ಯಾಲಯದಲ್ಲಿ 5 ನೇ ತರಗತಿಯಲ್ಲಿ ಓದುತ್ತಿರುವ ಗೌರಿತಾ ಡಾ. ಗೌತಮ್ ಹಾಗೂ ಡಾಬ.ರಾಜೇಶ್ವರಿ ಪುತ್ರಿ. ಯೋಗ ಗುರು ಶರತ್ ಮರ್ಗಿಲಡ್ಕ ರವರ ಶಿಷ್ಯೆ
Next Post Previous Post