ಪ್ರಾಮಾಣಿಕ ನಾಯಕತ್ವದ ಮೇಲಿನ ರಾಜಕೀಯ ಆರೋಪ —ಸತ್ಯದ ಬೆಳಕಿನಲ್ಲಿ ನಿಂತ ಯುಟಿ ಖಾದರ್
ಮಂಗಳೂರು: ಯು.ಟಿ.ಖಾದರ್ ಕರ್ನಾಟಕ ವಿಧಾನಸಭೆಯ ಗೌರವಾನ್ವಿತ ಎಲ್ಲರೊಂದಿಗೆ ಬೆರೆತು ಮುನ್ನಡೆಯುವವರು. ಜಾತಿ, ಧರ್ಮ, ಪಂತ, ಪಕ್ಷ, ಬಡವ, ಶ್ರೀಮಂತ, ಹಿರಿಯ ಕಿರಿಯ ಎಂಬ ಭೇಧವಿಲ್ಲದೆ ನಿಸ್ವಾರ್ಥ ಸೇವೆಗೈಯ್ಯುವವರು. ಯಾವ ಹುದ್ದೆ ನೀಡಿದರೂ ಸಮರ್ಥವಾಗಿ ನಿಭಾಯಿಸಬಲ್ಲ ಚಾಕಚಕ್ಯತೆ ಹೊಂದಿದವರು.
ಆರೋಗ್ಯ ಸಚಿವರಾಗಿ ರಾಜ್ಯದಲ್ಲಿ ಗುಟ್ಕಾ ನಿಷೇಧ, ಬೈಕ್ ಅಂಬ್ಯುಲೆನ್ಸ್, 108, ಆರೋಗ್ ಯಶ್ರೀ, ದಂತ ಭಾಗ್ಯ, ಸರಕಾರೀ ತಾಲೂಕು ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಘಟಕ, ಹರೀಶ್ ಸಾಂತ್ವನ ಯೋಜನೆ ಮುಂತಾದ ಕ್ರಾಂತಿಕಾರಿ ಯೋಜನೆಗಳನ್ನು ಜಾರಿಗೆ ತಂದು ಕೇಂದ್ರ ಸರ್ಕಾರ ನೀಡುವ ಉತ್ತಮ ಆರೋಗ್ಯ ಸಚಿವ ಪ್ರಶಸ್ತಿ ಭಾಜನರಾಗಿದ್ದರು.
ನಂತರ 2016 ರಿಂದ 2018 ರ ತನಕ ಆಹಾರ ಸಚಿವರಾಗಿ ಅಧಿಕಾರ ಸ್ವೀಕರಿಸಿದಾಗ, ಬಡವರು ಪಡಿತರ ಚೀಟಿಗಾಗಿ ಸಲ್ಲಿಸಬೇಕಾಗಿದ್ದ 10 ರಿಂದ 13 ದಾಖಲೆಗಳನ್ನು ಕಡಿತಗೊಳಿಸಿ ಕೇವಲ ಆಧಾರ್ ಕಾರ್ಡ್ ಮೂಲಕ ಅರ್ಜಿ ಸಲ್ಲಿಸಿ ಮನೆ ಬಾಗಿಲಿಗೆ ರೇಷನ್ ಕಾರ್ಡ್ ತಲುಪಿಸುವ ಕ್ರಾಂತಿಕಾರಿ ಯೋಜನೆಗೆ ಚಾಲನೆ ನೀಡಿ ಇತಿಹಾಸ ಸೃಷ್ಟಿಸಿದ್ದರು. ಬಿಪಿಎಲ್ ಕಾರ್ಡು ಪಡೆಯಲು ನಿಗದಿಪಡಿಸಿದ್ದ ಆದಾಯ ಮಿತಿಯನ್ನು ಅವರು ಕಡಿತಗೊಳಿಸಿ ಬಿಪಿಎಲ್ ಕಾರ್ಡ್ ನಿಂದ ವಂಚಿತರಾಗಿದ್ದ ಲಕ್ಷಾಂತರ ಮಂದಿ ರೇಷನ್ ಕಾರ್ಡ್ ಪಡೆಯಲು ನೆರವಾಗಿದ್ದರು.
2018 ರ ಮೈತ್ರಿ ಸರಕಾರದಲ್ಲಿ ನಗರಾಭಿವೃದ್ದಿ ಮತ್ತು ವಸತಿ ಸಚಿವರಾಗಿ ಅಧಿಕಾರ ಸ್ವೀಕರಿಸಿ ಮಂಗಳೂರು ಸ್ಮಾರ್ಟ್ ಸಿಟಿ ಸಹಿತ ಅನೇಕ ಉತ್ತಮ ಯೋಜನೆಗಳನ್ನು ಪರಿಚಯಿಸಿ ಯಶಸ್ವಿಯಾಗಿದ್ದಾರೆ.
2021 ರಲ್ಲಿ ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ಉಪ ನಾಯಕರಾಗಿ ಆಯ್ಕೆಯಾಗಿ 2023 ರ ವರೆಗೆ ಕಾರ್ಯನಿರ್ವಹಿಸಿ ಪ್ರತೀ ಹಂತದಲ್ಲೂ ಸರ್ಕಾರ ನ್ಯೂನತೆಗಳನ್ನು ಸದನದಲ್ಲಿ ಪ್ರಸ್ತಾಪಿಸಿ ಸೈ ಎನಿಸಿ ಕೊಂಡಿದ್ದ ಖಾದರ್ ಕರ್ನಾಟಕದ ವಿಧಾನಸಭೆ ಸ್ಪೀಕರ್ ಆಯ್ಕೆಯಾಗಿ ಅವರ ಜನಪರ ಆಡಳಿತ, ಅಭಿವೃದ್ಧಿ ಮತ್ತು ಪಾರದರ್ಶಕ ಕಾರ್ಯಶೈಲಿಗೆ ಜನರು ಹಾಗೂ ಆಡಳಿತಪಕ್ಷ, ವಿರೋಧ ಪಕ್ಷದ ಶಾಸಕರಿಂದ ಹೆಚ್ಚಿನ ರೀತಿಯಲ್ಲಿ ಮೆಚ್ಚುಗೆಗೆ ಪಾತ್ರವಾಗಿತ್ತು.
ವಿಧಾನಸೌಧದಲ್ಲಿ ಇಂದು ಕಾಣುತ್ತಿರುವ ಸುಧಾರಣೆ, ನವೀಕರಣ, ಶಾಸಕರಿಗೆ ದೊರೆಯುತ್ತಿರುವ ಉತ್ತಮ ಸೌಲಭ್ಯಗಳು — ಇವೆಲ್ಲವೂ ಈಗಿನ ಸ್ಪೀಕರ್ ಯು.ಟಿ ಖಾದರ್ ಅವರ ದೃಢ ನಾಯಕತ್ವದ ಫಲವಾಗಿದೆ ,ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರತಿಯೊಂದು ಯೋಜನೆ ಜನಪ್ರತಿನಿಧಿಗಳ ಹಿತಕ್ಕಾಗಿ, ಕರ್ನಾಟಕದ ಹೆಮ್ಮೆಯ ವಿಧಾನ ಸಭೆಯ ಅಭಿವೃದ್ಧಿಗಾಗಿ ಶಾಸಕರ ಭವನದಲ್ಲಿ ಪಕ್ಷಬೇಧವಿಲ್ಲದೆ ಎಲ್ಲಾ
ಚುನಾಯಿತ ಶಾಸಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ನಡೆಸಿರುವ ಅಧುನಿಕ ಅಭಿವೃದ್ಧಿಯಲ್ಲಿ ಕಮಿಷನ್ ಪದ ಬಳಕೆ ಶೋಭೆತರುವ ವಿಷಯವೇ?
ಯು ಟಿ ಖಾದರ್ ಅಧಿಕಾರದ ಉತ್ತುಂಗ ಏರಿದ್ದು,ಇಲ್ಲಿಯವರೆಗೂ ಯಾಕೆ ಗುರಿ ಮಾಡಲಿಲ್ಲ ಎಂದರೆ ನಮ್ಮ ಖಾದರ್ ಶುದ್ಧ ಹಸ್ತದ ರಾಜಕಾರಣಿ,ಅವರು ಯಾವುದೇ ಹುದ್ದೆಯನ್ನು ಸಮರ್ಥವಾಗಿ ನಿಭಾಯಿಸಬಲ್ಲ,ಖಾತೆಗೆ ಅತ್ಯಂತ ಹೆಚ್ಚಿನ ರೀತಿಯಲ್ಲಿ ನ್ಯಾಯ ಕೊಡಬಲ್ಲ ಪ್ರಾಮಾಣಿಕ ಸಮರ್ಥ ರಾಜಕಾರಣಿಯಾಗಿದ್ದಾರೆ,ಟೀಕೆಗಳಿಗೆ ಎದೆಗುಂದದ ವ್ಯಕ್ತಿತ್ವ ಯು.ಟಿ.ಖಾದರ್ ಅವರದ್ದು,ಯಾವ ಸುಳ್ಳು ಪ್ರಚಾರವಾದರೂ,ಯಾವ ರಾಜಕೀಯ ಆರೋಪವಾದರೂ — ಸತ್ಯದ ಬೆಳಕನ್ನು ಮುಚ್ಚಲಾರದು ಎಂಬುವುದು ನನ್ನ ಅಭಿಪ್ರಾಯವಾಗಿದೆ.
-ಎಂ .ಎಸ್ ಅಶ್ಫಾಕ್ ಬೋಳಿಯಾರ್ (ವಕೀಲರು)