ರಾಜ್ಯಾದ್ಯಂತ ಮತ್ತೆ 4.09 ಲಕ್ಷ `BPL' ಕಾರ್ಡ್ ರದ್ದು : ಅನರ್ಹರಿಗೆ ದಂಡ ಫಿಕ್ಸ್.!


ಬೆಂಗಳೂರು : ರಾಜ್ಯಾದ್ಯಂತ ಸುಮಾರು 4.09 ಲಕ್ಷ ಬಿಪಿಎಲ್ ಕಾರ್ಡ್ ಗಳನ್ನು ರದ್ದುಗೊಳಿಸಲಾಗಿದ್ದು, ಎಪಿಎಲ್ ಗೆ ವರ್ಗಾವಣೆ ಮಾಡಲಾಗಿದೆ.
ಹೌದು, ಮಾನದಂಡ ಉಲ್ಲಂಘಿಸಿ ಅನರ್ಹರರು ಪಡೆದಿದ್ದ ಸುಮಾರು 4.09 ಲಕ್ಷ ಬಿಪಿಎಲ್ ಕಾರ್ಡ್ ಗಳನ್ನು ರದ್ದುಪಡಿಸಿ ಅವುಗಳನ್ನು ಎಪಿಎಲ್ ಆಗಿ ಪರಿವರ್ತಿಸಲಾಗಿದೆ.


ಜೊತೆಗೆ ಲಕ್ಷಾಂತರ ಸದಸ್ಯರ ಹೆಸರು ಡಿಲಿಟ್ ಮಾಡಲಾಗಿದೆ.ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆಯು ತೆರಿಗೆ ಪಾವತಿದಾರರು, ಹೆಚ್ಚುವರಿ ಕೃಷಿ ಭೂಮಿ ಹೊಂದಿರುವವರೂ ಸೇರಿದಂತೆ ಹಲವು ವರ್ಗದಲ್ಲಿ ನಾನಾ ಅನರ್ಹರನ್ನು ಗುರುತಿಸಿ, ಬಿಪಿಎಲ್ ಕಾರ್ಡ್ಗಳನ್ನು ರದ್ದುಗೊಳಿಸಿದೆ.

ಇನ್ನು ಅಕ್ರಮವಾಗಿ ಬಿಪಿಎಲ್ ಕಾರ್ಡ್ಗಳನ್ನು ಪಡೆದು ಸರಕಾರದ ಪಡಿತರ ಯೋಜನೆಯ ಲಾಭಪಡೆದುಕೊಂಡಿರುವ ಫಲಾನುಭವಿಗಳಿಗೆ ದಂಡ ವಿಧಿ ಸುವ ಬಗ್ಗೆ ಆಹಾರ ಇಲಾಖೆ ನಿಯಮಗಳನ್ನು ರೂಪಿಸಲು ಈಗಾಗಲೇ ಸಿದ್ದತೆ ನಡೆಸಲಾಗಿದೆ.

Next Post Previous Post