ನಾಳೆಯಿಂದ SSF ದ.ಕ ಈಸ್ಟ್ ಜಿಲ್ಲಾ ಸಾಹಿತ್ಯೋತ್ಸವ
ಪುತ್ತೂರು : ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಾಹಿತ್ಯೋತ್ಸವ ಸೆಪ್ಟೆಂಬರ್ 20,21 ರಂದು ಬೆಳ್ಳಾರೆ, ತಂಬಿನಮಕ್ಕಿಯಲ್ಲಿನ ದಾರುಲ್ ಹುದಾ ಸಂಸ್ಥೆಯಲ್ಲಿ ನಡೆಯಲಿದೆ.
ನಾಳೆ ಮಧ್ಯಾಹ್ನ 3.0ಗಂಟೆಗೆ ಸರಿಯಾಗಿ ಧ್ವಜಾರೋಹಣ ಹಾಗೂ ಪ್ರಧಾನ ವೇದಿಕೆ ಉದ್ಘಾಟನೆಗೊಳ್ಳಲಿದೆ. ಜ್ಯೂನಿಯರ್, ಸೀನಿಯರ್, ಜನರಲ್, ಕ್ಯಾಂಪಸ್ ಜ್ಯೂನಿಯರ್, ಕ್ಯಾಂಪಸ್ ಸೀನಿಯರ್ ಹಾಗೂ ಕ್ಯಾಂಪಸ್ ಜನರಲ್ ವಿಭಾಗಗಳ ಕಾರ್ಯಕ್ರಮ ಸುಮಾರು 6 ವೇದಿಕೆಗಳಲ್ಲಿ ನಡೆಯಲಿದೆ.
ಎರಡು ದಿವಸಗಳಲ್ಲಿ ನಡೆಯುವ ಜಿಲ್ಲಾ ಮಟ್ಟದ ಕಲಾ ಸಾಹಿತ್ಯ ಕಾರ್ಯಕ್ರಮದಲ್ಲಿ ಬೆಳ್ತಂಗಡಿ, ಉಪ್ಪಿನಂಗಡಿ, ವಿಟ್ಲ, ಕಡಬ, ಪುತ್ತೂರು, ಸುಳ್ಯ ಡಿವಿಷನ್ ವ್ಯಾಪ್ತಿಯ ಸುಮಾರು 800ರಷ್ಟು ಸ್ಪರ್ಧಾರ್ಥಿಗಳು, ಧಾರ್ಮಿಕ, ಸಾಮಾಜಿಕ, ರಾಜಕೀಯ ನಾಯಕರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.