ಧರ್ಮಸ್ಥಳಾ ಪೊಲೀಸ್ ಠಾಣೆ ಪ್ರಕರಣದಲ್ಲಿ ಧರ್ಮ ಧರ್ಮಗಳ ನಡುವೆ ದ್ವೇಷ ಪ್ರಕರಣ – ಅರ್ಜಿದಾರ ಖ್ಯಾತ ಯೂಟ್ಯೂಬರ್ ಸಮೀರ್ ಎಂಡಿಯವರಿಗೆ ನಿರೀಕ್ಷಣಾ ಜಾಮೀನು ಮಂಜೂರು Sameer MD
ಮಂಗಳೂರು: ಧರ್ಮಸ್ಥಳಾ ಪೊಲೀಸ್ ಠಾಣೆ Cr.42/2025 ಪ್ರಕರಣದಲ್ಲಿ ಧರ್ಮ ಧರ್ಮಗಳ ನಡುವೆ ದ್ವೇಷ ಪ್ರಕರಣ – ಅರ್ಜಿದಾರ ಖ್ಯಾತ ಯೂಟ್ಯೂಬರ್ ಸಮೀರ್ ಎಂಡಿಯವರಿಗೆ ನಿರೀಕ್ಷಣಾ ಜಾಮೀನು ಮಂಜೂರು.
ಧರ್ಮಸ್ಥಳಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ Cr.42/2025 ಪ್ರಕರಣದಲ್ಲಿ ಭಾರತೀಯ ನ್ಯಾಯ ಸಂಹಿತಾ (BNS) ಸೆಕ್ಷನ್‌ಗಳು 240, 192 ಹಾಗೂ 353(1)(b) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು,ಸಾರ್ವಜನಿಕ ಅಶಾಂತಿ ಮತ್ತು ಧರ್ಮಗಳ ನಡುವೆ ದ್ವೇಷ ಹರಡುವ ಪ್ರಯತ್ನ ನಡೆದಿದೆಯೆಂಬುದು ಪ್ರಕರಣದ ಮೂಲ ಆಕ್ಷೇಪಣೆ.
ಅರ್ಜಿದಾರ ಸಮೀರ್ ಎಂ.ಡಿ. ಪರವಾಗಿ ವಾದಿಸಿದ ವಕೀಲ ಸಿರಾಜುದ್ದೀನ್ ಜೋಗಿಬೆಟ್ಟು ಅವರು, “ಈ ಪ್ರಕರಣ ಸಂಪೂರ್ಣ ಸುಳ್ಳು ಮತ್ತು ಒತ್ತಡದಿಂದ ಪ್ರೇರಿತವಾಗಿದೆ, ಇದರಲ್ಲಿ ಸ್ಪಷ್ಟತೆ ಇಲ್ಲ, ಅರ್ಜಿದಾರರು ಯಾವ ತಪ್ಪು ಮಾಡಿದ್ದಾರೆ ಎಂಬ ಸ್ಪಷ್ಟತೆ ಇಲ್ಲ ಮತ್ತು ಇದು ಸ್ವಯಂಪ್ರೇರಿತ ಪ್ರಕರಣವಾಗಿದ್ದು, ಸಂವಿಧಾನ ಮೂಲಭೂತ ಸ್ವಾತಂತ್ರ್ಯದ ಹಕ್ಕಿನ ಸಂಪೂರ್ಣ (Article 19(1A) ಉಲ್ಲಂಘನೆ” ಎಂದು ನ್ಯಾಯಾಲಯದಲ್ಲಿ ವಾದ ಮಂಡಿಸಿದರು.
ವಾದ-ಪ್ರತಿವಾದಗಳನ್ನು ಆಲಿಸಿದ ಗೌರವಾನ್ವಿತ ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯದ ಪೀಠವು, ಅರ್ಜಿದಾರರಿಗೆ ನಿರೀಕ್ಷಣಾ ಜಾಮೀನು (Anticipatory Bail) ಮಂಜೂರು ಮಾಡಿದೆ.
ಈ ಪ್ರಕರಣದಲ್ಲಿ ಆರ್ಜಿದಾರ ಖ್ಯಾತ ಯೂಟ್ಯೂಬರ್ ಸಮೀರ್ ಎಂಡಿ ಪರವಾಗಿ ಬೆಳ್ತಂಗಡಿಯ ವಕೀಲರಾದ ಸಿರಾಜುದ್ದೀನ್ ಜೋಗಿಬೆಟ್ಟು ವಾದಿಸಿದ್ದರು.