ಪ್ರಧಾನಿ, ಸಿಎಂ,ರಾಜಕಾರಣಿಗಳು ಜೈಲಿಗೆ ಹೋದರೆ ಹುದ್ದೆಯಿಂದ ವಜಾ, 30 ದಿನ ಜೈಲಿನಲ್ಲಿದ್ದರೆ ಅಧಿಕಾರ ಕಳೆದುಕೊಳ್ತಾರೆ; ಲೋಕಸಭೆಯಲ್ಲಿ ಮಸೂದೆ ಮಂಡನೆ
ನವದೆಹಲಿ: ಗಂಭೀರ ಕ್ರಿಮಿನಲ್ ಆರೋಪದ ಮೇಲೆ ಸತತ 30 ದಿನಗಳ ಕಾಲ ಬಂಧನದಲ್ಲಿದ್ದರೆ, ಪ್ರಧಾನಿ, ಕೇಂದ್ರ ಸಚಿವರು, ಮುಖ್ಯಮಂತ್ರಿ ಅಥವಾ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದ ಸಚಿವರನ್ನು ಪದಚ್ಯುತಗೊಳಿಸಲು(depose) ಅವಕಾಶ ಕಲ್ಪಿಸಲಿದೆ. ಈ ಅಂಶ ಒಳಗೊಂಡ ಹೊಸ ಮಸೂದೆಯನ್ನು ಲೋಕಸಭೆಯಲ್ಲಿ ಕೇಂದ್ರ ಸರ್ಕಾರ(Central Govt) ಮಂಡಿಸಿದೆ.
ಪ್ರಸ್ತಾವಿತ ಕಾನೂನುಗಳು – ಕೇಂದ್ರ ಪ್ರದೇಶಗಳ ಸರ್ಕಾರ (ತಿದ್ದುಪಡಿ) ಮಸೂದೆ 2025, ಸಂವಿಧಾನ (ನೂರ ಮೂವತ್ತನೇ ತಿದ್ದುಪಡಿ) ಮಸೂದೆ 2025,
ಮತ್ತು ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ (ತಿದ್ದುಪಡಿ) ಮಸೂದೆ 2025 , ಇವುಗಳನ್ನು ಕೇಂದ್ರ ಗೃಹ ಸಚಿವರು ಮಂಡಿಸಿದರು.
ಕನಿಷ್ಠ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದಾದ ಅಪರಾಧಗಳಿಗಾಗಿ ಅಂತಹ ಯಾವುದೇ ನಾಯಕನನ್ನು ಬಂಧಿಸಿ ಸತತ 30 ದಿನಗಳ ಕಾಲ ಬಂಧನದಲ್ಲಿಟ್ಟರೆ,
ಅವರು 31 ನೇ ದಿನದಂದು ಸ್ವಯಂಚಾಲಿತವಾಗಿ ತಮ್ಮ ಸ್ಥಾನವನ್ನು ಕಳೆದುಕೊಳ್ಳುವರು.
ಪ್ರಧಾನಿ, ಮುಖ್ಯಮಂತ್ರಿ, ಸಚಿವರು ಅಪರಾಧ ಮಾಡಿದರೆ ಅಧಿಕಾರವನ್ನೂ ಕಳೆದುಕೊಳ್ಳದೆ ಆರಾಮಾಗಿ ಜೈಲಿನಲ್ಲಿರ್ತಾರೆ, ಅದೇ ಸಾಮಾನ್ಯ ಜನ ಇದೇ ತಪ್ಪು ಮಾಡಿದರೆ,
ಎಂದು ಹಲವರು ಹೇಳಿರುವುದನ್ನು ನೀವು ಕೇಳಿರಬಹುದು. ಗಂಭೀರ ಪ್ರಕರಣಗಳಲ್ಲಿ, ಭ್ರಷ್ಟಾಚಾರ ಕೇಸ್(Corruption case) ನಲ್ಲಿ ಬಂಧನಕ್ಕೊಳಗಾದ ನಂತರವೂ ಮುಖ್ಯಮಂತ್ರಿಗಳು,
ಸಚಿವರು ಹುದ್ದೆಯನ್ನು ಬಿಡದೆ ಅಂಟಿಕೊಂಡಿರುವುದನ್ನು ಹಾಗೂ ಸಿನಿಮೀಯ ರೀತಿಯಲ್ಲಿ ಜೈಲಿನಿಂದಲೇ ಕಾರ್ಯ ನಿರ್ವಹಿಸಿರುವುದನ್ನು ಇತ್ತೀಚಿನ ದಿನಗಳಲ್ಲಿ ಕಾಣಬಹುದಾಗಿದೆ.
ಆದರೆ ಈಗ ಅಂತಹ ಜನಪ್ರತಿನಿದಿಗಳಿಗಾಗಿ ಕೇಂದ್ರ ಸರ್ಕಾರ ಸಂವಿಧಾನದ 130ನೇ ತಿದ್ದುಪಡಿ ಮಸೂದೆಯನ್ನು ತರಲು ಸಜ್ಜಾಗಿದೆ.
ಬುಧವಾರದ ಲೋಕಸಭೆಯಲ್ಲಿ ಈ ಮಸೂದೆ ಮಂಡನೆಯಾಗಿದ್ದು. ಈ ಮಸೂದೆ ಮಂಡನೆಯಾಗಿ ಕಾನೂನಾದರೆ ಯಾವುದೇ ಗಂಭೀರ ಪ್ರಕರಣಗಳಲ್ಲಿ
30 ದಿನಗಳ ಕಾಲ ನಾಯಕರು ಜೈಲಿನಲ್ಲಿದ್ದರೆ ಅಂತವರನ್ನು ಕೂಡಲೇ ಅಧಿಕಾರದಿಂದ ಕೆಳಗಿಳಿಸಲಾಗುತ್ತದೆ. ಐದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಶಿಕ್ಷೆ ವಿಧಿಸಲಾದ ಪ್ರಕರಣಗಳಲ್ಲಿ ಹುದ್ದೆಯಿಂದ ತೆಗೆದುಹಾಕುವ
ನಿಯಮ ಅನ್ವಯವಾಗುತ್ತದೆ ಹಾಗು ಸಚಿವರು ಅಥವಾ ಸಿಎಂಗೆ 30 ದಿನಗಳ ಒಳಗೆ ಜಾಮೀನು ಸಿಗದಿದ್ದರೆ, ಅವರು ತಕ್ಷಣವೇ ರಾಜೀನಾಮೆ ನೀಡಬೇಕಾಗುತ್ತದೆ.
ಒಂದು ವೇಳೆ ಅವರು ಬಂಧನವಾದ 30 ದಿನಗಳ ಬಳಿಕವೂ ರಾಜೀನಾಮೆ ನೀಡದಿದ್ದರೆ, 31 ನೇ ದಿನದಂದು ಅವರನ್ನು ಹುದ್ದೆಯಿಂದ ತೆಗೆದುಹಾಕಲಾಗಿದೆ ಎಂದು ಪರಿಗಣಿಸಲಾಗುತ್ತದೆ.
ಈ ಮಸೂದೆ ಜಾರಿಯಾದರೆ, 30 ದಿನಗಳ ಕಾಲ ಬಂಧನಕ್ಕೊಳಗಾದ ಪ್ರಧಾನಿ, ಸಚಿವರು ಅಥವಾ ಮುಖ್ಯಮಂತ್ರಿ ಬಂಧನದ ನಂತರ ತಮ್ಮ ಹುದ್ದೆಯಲ್ಲಿ ಉಳಿಯಲು ಸಾಧ್ಯವಿಲ್ಲ.
ಸರ್ಕಾರದ ಸಚಿವರ ವಿರುದ್ಧ ಯಾವುದೇ ಆರೋಪ ಬಂದಾಗ, ವಿರೋಧ ಪಕ್ಷವು ಅವರು ರಾಜೀನಾಮೆ ಕೊಡಬೇಕೆಂದು ಒತ್ತಾಯಿಸುತ್ತಾರೆ,
ಆದರೆ ಈ ಮಸೂದೆ ಜಾರಿಯಾದರೆ ಅವರ ಈ ಕೆಲಸಕ್ಕೆ ಮುಕ್ತಿದೊರೆವುತ್ತದೆ. ಅಧಿಕಾರದಲ್ಲಿರುವ ಜನಪ್ರತಿನಿದಿಗಳು ಅಪರಾಧ ಮಾಡಿದ್ದರೆ ಮತ್ತು ಪೊಲೀಸರು ಅವರನ್ನು ಬಂಧಿಸಿದರೆ,
ಅವರ ಸ್ಥಾನಮಾನವನ್ನು ತಕ್ಷಣವೇ ರದ್ದುಗೊಳಿಸಲಾಗುತ್ತದೆ ಮತ್ತು ಈ ನಿಯಮವು ಪ್ರಧಾನಿ, ಕೇಂದ್ರ ಸಚಿವರು ಮತ್ತು ಮುಖ್ಯಮಂತ್ರಿ ಅಥವಾ ರಾಜ್ಯಗಳ ಸಚಿವರಿಗೆ ಅನ್ವಯ ವಾಗುತ್ತದೆ.
ಒಂದು ಮೇಳೆ ರಾಜಕೀಯ ಕಾರಣಗಳಿಂದ ಅಥವಾ ಸುಳ್ಳು ಆರೋಪಗಳಿಂದ ಸಚಿವರು ತೊಂದರೆಗೆ ಸಿಲುಕಿ ಜೈಲಿಗೆ ಹೋಗಿರುವಂತಹ ಪ್ರಕರಣಗಳಲ್ಲಿ,
ಅವರನ್ನು ಅವರ ಹುದ್ದೆಗಳಿಂದ ತೆಗೆದುಹಾಕುವುದು ಅನ್ಯಾಯವಾಗುತ್ತದೆ, ಆದರೆ ಈ ಮಸೂದೆಯಲ್ಲಿ ಬಂಧನದಿಂದ ಬಿಡುಗಡೆಯಾದ ನಂತರ ಅವ ಹುದ್ದೆಯನ್ನು ಮತ್ತೆ ಅವರು ಪಡೆಯಬಹುದಾಗಿದೆ.