ಮಂಗಳೂರು: ಪಂಪ್‌ವೆಲ್ ನಿಂದ ಕಂಕನಾಡಿ ವರೆಗಿನ ರಸ್ತೆ ಹದಗೆಟ್ಟಿದ್ದು ಶೀಘ್ರವೇ ದುರಸ್ತಿ ಮಾಡಲು ಪಾಲಿಕೆ ಆಯುಕ್ತರಲ್ಲಿ ಮನವಿ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪಂಪ್‌ವೆಲ್‌ನಿಂದ ಕಂಕನಾಡಿವರೆಗಿನ ರಸ್ತೆಯು ಗಂಭೀರವಾಗಿ ಹದಗೆಟ್ಟಿದ್ದು, ಇದರಿಂದ ಸ್ಥಳೀಯ ನಿವಾಸಿಗಳು, ವಾಹನ ಚಾಲಕರು ಮತ್ತು ಪಾದಾಚಾರಿಗಳಿಗೆ ದೈನಂದಿನ ಸಂಚಾರದಲ್ಲಿ ಗಣನೀಯ ತೊಂದರೆಯಾಗುತ್ತಿದೆ. ಈ ರಸ್ತೆಯ ಕಳಪೆ ಸ್ಥಿತಿಯಿಂದ ಜನಸಾಮಾನ್ಯರ ಜೀವನದ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತಿದೆ.
ಈ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸುವ ನಿಟ್ಟಿನಲ್ಲಿ, ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರಾದ *ಮೊಹಮ್ಮದ್ ಬಷೀರ್* ರವರ ನೇತೃತ್ವದಲ್ಲಿ, ಮಂಗಳೂರು ಮಹಾನಗರ ಪಾಲಿಕೆಯ ಮಾನ್ಯ ಆಯುಕ್ತರಾದ ಶ್ರೀ ರವಿಚಂದ್ರ ನಾಯಕ್ ರವರಿಗೆ ರಸ್ತೆ ದುರಸ್ತಿಗಾಗಿ ಮನವಿ ಪತ್ರವನ್ನು ಈಗಾಗಲೇ ಸಲ್ಲಿಸಲಾಯಿತು.
ಈ ರಸ್ತೆಯ ದುರಸ್ತಿಯನ್ನು ಆದ್ಯತೆಯ ಮೇಲೆ ಕೈಗೊಂಡು, ಗುಣಮಟ್ಟದ ರಸ್ತೆ ಸೌಲಭ್ಯವನ್ನು ಜನಸಾಮಾನ್ಯರಿಗೆ ಒದಗಿಸಲು ಸಂಬಂಧಪಟ್ಟ ಇಲಾಖೆಯನ್ನು ಒತ್ತಾಯಿಸಲಾಗಿದೆ. ಈ ಕಾಮಗಾರಿಯು ಶೀಘ್ರವಾಗಿ ಆರಂಭವಾಗಬೇಕೆಂದು ಮತ್ತು ದೀರ್ಘಕಾಲೀನ ಪರಿಹಾರವಾಗಿ ನಿರ್ಮಾಣವನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ