43ನೇ ವರ್ಷದ ಫಿಲೋಮಿನಾ ಗಣೇಶೋತ್ಸವದಲ್ಲಿ ಸಿಂಸಾರುಲ್ ಹಕ್ ಆರ್ಲಪದವು ರವರಿಗೆ ಸನ್ಮಾನ
ಪುತ್ತೂರು: ಸಂತ ಫಿಲೋಮಿನಾ ವಿದ್ಯಾ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳ ಶ್ರೀ ಗಣೇಶೋತ್ಸವ ಸೇವಾ ಟ್ರಸ್ಟ್ (ರಿ) ಹಾಗೂ ಸಂತ ಫಿಲೋಮಿನಾ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳ ಶ್ರೀ ಗಣೇಶೋತ್ಸವ ಸಮಿತಿ ಸಂಯುಕ್ತ ಆಶ್ರಯದಲ್ಲಿ ಪುತ್ತೂರು ದರ್ಬೆ ವಿನಾಯಕ ನಗರದಲ್ಲಿ ಆ 27 ರಂದು ನಡೆದ 43ನೇ ವರ್ಷದ ಶ್ರೀ ಗಣೇಶೋತ್ಸವದಲ್ಲಿ ಸಿಂಸಾರುಲ್ ಹಕ್ ಆರ್ಲಪದವು ಇವರ ಕ್ರೀಡಾ ಸಾಧನೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಸಂತ ಫಿಲೋಮಿನ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು ವೈಟ್ ಲಿಫ್ಟಿಂಗ್ ನಲ್ಲಿ ಕಾಲೇಜು ತಂಡವನ್ನು ರಾಜ್ಯಮಟ್ಟದಲ್ಲಿ ಪ್ರತಿನಿಧಿಸಿರುತ್ತಾರೆ.
ಅಲ್ಲದೆ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿದ ಶಬರೀಶ್ ರೈ, ರಂಜಿತ್ ಕುಮಾರ್, ಶಿವಾನಿ, ಸ್ಪಂದನ, ವರ್ಷ, ಚೈತ್ರಿಕ, ಅಭಿಜಿತ್, ಶಿಶಿಲ್ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಂತ ಫಿಲೋಮಿನ ಪದವಿ ಕಾಲೇಜು ಪ್ರಾಂಶುಪಾಲರಾದ ರೆ. ಡಾ. ಆಂಟನಿ ಪ್ರಕಾಶ್ ಮೊಂತೆರೊ, ಪದವಿ ಪೂರ್ವ ಕಾಲೇಜು, ಪ್ರಾಂಶುಪಾಲರಾದ ಫಾ. ಅಶೋಕ್ ರಾಯನ್ ಕ್ರಾಸ್ತಾ, ಶ್ರೀ ಗಣೇಶೋತ್ಸವ ಸೇವಾ ಟ್ರಸ್ಟ್ (ರಿ) ಅಧ್ಯಕ್ಷರಾದ ಪ್ರಕಾಶ್ ಮುಕ್ರಂಪಾಡಿ, ಕಾರ್ಯದರ್ಶಿ ಶಿವಪ್ರಸಾದ್, ಕೋಶಾಧಿಕಾರಿ ದುರ್ಗಾ ಪ್ರಸಾದ್ ಹಾಗೂ ಶ್ರೀ ಗಣೇಶೋತ್ಸವ ಸಮಿತಿ ವಿದ್ಯಾರ್ಥಿ ಘಟಕದ ಅಧ್ಯಕ್ಷರಾದ ಅನ್ವೇಶ್ ರೈ, ಕಾರ್ಯದರ್ಶಿ ಸೂರಜ್, ಜೊತೆ ಕಾರ್ಯದರ್ಶಿ ರಚಿತ ಹಾಗೂ ಮತ್ತಿತರರು ಉಪಸ್ಥಿತರಿದ್ದರು.