ಪಾಣಾಜೆ ಗ್ರಾಮ ಪಂಚಾಯತಿಯಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆ


ಪುತ್ತೂರು: ಪುತ್ತೂರು ತಾಲೂಕು ಪಾಣಾಜೆ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆಯು ಬಹಳ ಯಶಸ್ವಿಯಾಗಿ ಜರುಗಿತು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮೈಮೂನತುಲ್ ಮೆಹರ ಧ್ವಜಾರೋಹಣವನ್ನು ನೆರವೇರಿಸಿ ಸ್ವಾತಂತ್ರ್ಯೋತ್ಸವದ ಶುಭಾಶಯಗಳನ್ನು ಹೇಳಿದರು ಈ ಸಂದರ್ಭದಲ್ಲಿ ಪಂಚಾಯತ್ ಉಪಾಧ್ಯಕ್ಷರಾದ ಜಯಶ್ರೀ ದೇವಸ್ಯ ಸುಬೋಧ ಪ್ರೌಢಶಾಲಾ ಮುಖ್ಯಗುರು ನಿರ್ಮಲ, ಪ್ರಾಥಮಿಕ ಶಾಲಾ ಶಿಕ್ಷಕರಾದ ಮಾಂಕು ಮೂಲ್ಯ ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.



 ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಜಿಲ್ಲಾಧ್ಯಕ್ಷರಾದ ಡಾ.ಹಾಜಿ.ಯಸ್.ಅಬೂಬಕರ್ ಆರ್ಲಪದವು ಮಾತನಾಡುತ್ತಾ ಪಾಣಾಜೆ ಗ್ರಾಮ ಪಂಚಾಯತ್ ಆಡಳಿತ ಸಮಿತಿಯು ಜಾತ್ಯಾತೀತವಾಗಿ ಕಾರ್ಯಾಚರಿಸುತ್ತಿರುವುದು ಶ್ಲಾಘನೀಯ ಎಂದು ಹೇಳುವುದರೊಂದಿಗೆ ಸ್ವಾತಂತ್ರೋತ್ಸವಕ್ಕೆ ಶುಭಾಶಯಗಳನ್ನು ತಿಳಿಯಪಡಿಸಿದರು. 


ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರುಗಳಾದ ಸುಭಾಷ್ ರೈ ಚಂಬರಕಟ್ಟ, ವಿಮಲಾ, ನಾರಾಯಣ ನಾಯಕ್, ಅಬೂಬಕ್ಕರ್ ಇಬ್ರಾಹಿಂ, ಸುಲೋಚನ , ಮೋಹನ ನಾಯ್ಕ, ಕೃಷ್ಣಪ್ಪ ಪೂಜಾರಿ ಆರ್ಲಪದವು ಅಂಗನವಾಡಿ ಕಾರ್ಯಕರ್ತೆ ಗ್ರೇಸಿ ಡಿ ಸೋಜ ಗುರಿಕೇಲು ಅಂಗನವಾಡಿ ಕಾರ್ಯಕರ್ತೆ ಸುಮಿತ್ರ , ವಿಕಲಚೇತನ ಪುನರ್ವಸತಿ ಕೇಂದ್ರದ ಅಬ್ದುಲ್ ಅಜೀಜ್, ಪುಸ್ತಕ ಬರಹಗಾರರಾದ ನವಿತಾ , ಅರಿವು ಕೇಂದ್ರದ ಮೇಲ್ವಿಚಾರಕಿ ಭಾಗೀರಥಿ, ಹಿರಿಯರಾದ ಹಾಜಿ ಮುಹಮ್ಮದ್ ಕುಂಞ ಕಂಚಿಲ್ಕುಂಜ, ಸದಾನಂದ ನಾಯ್ಕ ಭರಣ್ಯ , ಖಾಲಿದು, ಸಂಜೀವಿನಿ ಒಕ್ಕೂಟದ ಸದಸ್ಯರು ಹಾಗೂ ಊರ ನಾಗರಿಕರು ಉಪಸ್ಥಿತರಿದ್ದರು. 



ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆಶಾ ಸ್ವಾಗತಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕರಾದ ವೆಂಕಟೇಶ್ ಧನ್ಯವಾದ ಸಮರ್ಪಿಸಿದರು ದೈಹಿಕ ಶಿಕ್ಷಣ ಶಿಕ್ಷಕರಾದ ಸುಧಾಕರ್ ರೈ ಜಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಸುಬೋಧ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಪಂಚಾಯತಿ ಸಿಬ್ಬಂದಿಗಳಾದ ವಿಶ್ವನಾಥ, ಅರುಣ , ಸೌಮ್ಯ , ರೂಪಾ ವಿವಿಧ ಕಾರ್ಯಕ್ರಮವನ್ನು ನಿರ್ವಹಿಸಿದರು.
Next Post Previous Post