ಪಾಣಾಜೆ ಅರಿವು ಕೇಂದ್ರ ಸಲಹಾ ಸಮಿತಿ ಸಭೆ ಸುಸಜ್ಜಿತ ಡಿಜಿಟಲ್ ಗ್ರಂಥಾಲಯ ನಿರ್ಮಾಣಕ್ಕೆ ಮನವಿ ಗ್ರಾಮ ಪಂಚಾಯತಿಯಿಂದ ಅರಿವು ಕೇಂದ್ರಕ್ಕೆ ಲ್ಯಾಪ್‌ಟಾಪ್ ಹಸ್ತಾಂತರ


ಪುತ್ತೂರು: ಪಾಣಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಅರಿವು ಕೇಂದ್ರದ ಸಲಹಾ ಸಮಿತಿ ಸಭೆಯು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಪಂಚಾಯತ್ ಅಧ್ಯಕ್ಷರಾದ ಮೈಮೂನತುಲ್ ಮೆಹ್ರಾ ಇವರ ಅಧ್ಯಕ್ಷತೆಯಲ್ಲಿ ಜರಗಿತು ಸಲಹಾಸಮಿತಿ ಸದಸ್ಯರಾದ ಡಾ.ಹಾಜಿ.ಯಸ್.ಅಬೂಬಕ್ಕರ್ ಆರ್ಲಪದವು ಮಾತನಾಡುತ್ತಾ ಗಡಿನಾಡ ಪ್ರದೇಶದಲ್ಲಿರುವ ಸದ್ರಿ ಅರಿವು ಕೇಂದ್ರಕ್ಕೆ ಸುಸಜ್ಜಿತವಾದ ಡಿಜಿಟಲ್ ಅರಿವು ಕೇಂದ್ರದ ಆಗಬೇಕಾಗಿದೆ. 

ಸದ್ರಿ ಅರಿವು ಕೇಂದ್ರಕ್ಕೆ ಸೂಕ್ತ ಕಟ್ಟಡ ನಿರ್ಮಾಣ ಮಾಡಲು ಸಂಬಂಧ ಪಟ್ಟವರಲ್ಲಿ ಮನವಿ ಮಾಡಬೇಕು ಎಂದು ವಿನಂತಿಸಿಕೊಂಡರು. ಇದರಂತೆ ಸಭೆಯಲ್ಲಿ ನಿರ್ಣಯ ಕೈಗೊಂಡು ಗ್ರಾಮ ಪಂಚಾಯತಿಗೆ ಮತ್ತು ಸಂಬಂಧಪಟ್ಟ ವರಿಗೆ ಮನವಿ ನೀಡುವುದು ಎಂದು ನಿರ್ಣಯಿಸಲಾಯಿತು ಈ ಸಂದರ್ಭದಲ್ಲಿ ಅರಿವು ಕೇಂದ್ರಕ್ಕೆ ಅಗತ್ಯವಾಗಿ ಬೇಕಾಗಿದ್ದ ಲ್ಯಾಪ್‌ಟಾಪ್ ನ್ನು ಪಾಣಾಜೆ ಗ್ರಾಮ ಪಂಚಾಯತ್ ವತಿಯಿಂದ ಅಧ್ಯಕ್ಷರು ಅರಿವು ಕೇಂದ್ರಕ್ಕೆ ಹಸ್ತಾಂತರಿಸಿದರು. 



 ಈ ಸಂದರ್ಭದಲ್ಲಿ ಪಾಣಾಜೆ ಗ್ರಾಮ ಪಂಚಾಯತ್ ಸದಸ್ಯರಾದ ಸುಭಾಷ್ ರೈ ಚಂಬರಕಟ್ಟ, ವಿಮಲಾ, ಸುಲೋಚನ ಹಾಗೂ ಸಲಹಾ ಸಮಿತಿ ಸದಸ್ಯರಾದ ಗೋಪಾಲಕೃಷ್ಣ ಓಕುಣ್ಣಾಯ, ಸವಿತಾ, ನವೀತ ಮತ್ತು ವಿಶೇಷ ಚೇತನರ ಪುನರ್ವಸತಿ ಕಾರ್ಯಕರ್ತ ಎಸ್ ಅಬ್ದುಲ್ ಅಝೀಝ್ ಇವರು ಉಪಸ್ಥಿತರಿದ್ದರು. ಪಾಣಾಜೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆಶಾ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅರಿವು ಕೇಂದ್ರದ ಮೇಲ್ವಿಚಾರಕಿ ಭಾಗೀರಥಿ ಪಿ ಬಿ ಸ್ವಾಗತಿಸಿ ವಂದಿಸಿದರು.
Next Post Previous Post