ಪುತ್ತೂರು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಡಾ.ಹಾಜಿ.ಯಸ್.ಅಬೂಬಕ್ಕರ್ ಆರ್ಲಪದವು ನೇಮಕ
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹರೀಶ್ ಕುಮಾರ್ ಇವರ ಆದೇಶದ ಮೇರೆಗೆ ಪುತ್ತೂರಿನ ಶಾಸಕರಾದ ಅಶೋಕ್ ಕುಮಾರ್ ರೈ ಇವರ ಶಿಫಾರಸ್ಸಿನಂತೆ ಡಾ.ಹಾಜಿ.ಯಸ್.ಅಬೂಬಕ್ಕರ್ ಆರ್ಲಪದವು ಇವರನ್ನು ಪುತ್ತೂರು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೃಷ್ಣ ಪ್ರಸಾದ್ ಆಳ್ವ ಇವರು ನೇಮಕಾತಿ ಮಾಡಿರುತ್ತಾರೆ.
ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಯವರ ನೇತೃತ್ವದಲ್ಲಿ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಮಾರ್ಗದರ್ಶನದಲ್ಲಿ ಪಕ್ಷವನ್ನು ರಾಜಕೀಯವಾಗಿ,ಸಾಮಾಜಿಕವಾಗಿ,
ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ದೇಶದ ಆಡಳಿತ ಮುಖ್ಯವಾಹಿನಿಗೆ ತರಲು ಹಾಗೂ ಪಕ್ಷದ ಸಂಘಟನೆ,ಬಲವರ್ಧನೆಗಾಗಿ ದುಡಿಯಲು ಜವಾಬ್ದಾರಿಯನ್ನು ನೀಡಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೃಷ್ಣ ಪ್ರಸಾದ್ ಆಳ್ವ ಈ ನೇಮಕಾತಿ ಆದೇಶ ಪತ್ರವನ್ನು ಡಾ.ಹಾಜಿ.ಯಸ್.ಅಬೂಬಕ್ಕರ್ ಆರ್ಲಪದವು ಇವರಿಗೆ ನೀಡಿರುತ್ತಾರೆ.ಈ ಸಂದರ್ಭದಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶರೂನ್ ಸಿಕ್ವೇರ, ಕಛೇರಿ ಕಾರ್ಯದರ್ಶಿ ಜೋನ್ ಸಿರಿಲ್ ರೋಡ್ರಿಗಸ್ ಉಪಸ್ಥಿತರಿದ್ದರು. ಅಬೂಬಕ್ಕರ್ ಆರ್ಲಪದವು ಹಲವಾರು ಸಂಘ ಸಂಸ್ಥೆಗಳಲ್ಲಿ ಪ್ರಮುಖ ಹುದ್ದೆಯಲ್ಲಿದ್ದು ಸಮಾಜದಲ್ಲಿ ಗುರುತಿಸಿಕೊಂಡವರಾಗಿರುತ್ತಾರೆ ಅಲ್ಲದೆ ಹಲವಾರು ಪ್ರಶಸ್ತಿ ವಿಜೇತರಾಗಿದ್ದು ಗಡಿನಾಡ ಹೋರಾಟಗಾರರೂ ಆಗಿರುತ್ತಾರೆ.