ENGLISH MEDIUM : ಕೈಕಾರ, ಪಾಣಾಜೆ, ನೆಟ್ಟಣಿಗೆ ಮುಡ್ನರು, ಸೇರಿದಂತೆ ಪುತ್ತೂರು ತಾಲೂಕಿನ 13 ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿ ಆರಂಭಿಸಲು ಸರಕಾರದಿಂದ ಆದೇಶ


ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 13 ವಿವಿಧ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿ ನಡೆಸಲು ಸರಕಾರದಿಂದ ಅನುಮತಿ ದೊರಕಿದ್ದು ಈ ಬಗ್ಗೆ ಆದೇಶ ಹೊರಡಿಸಲಾಗಿದೆ.

ಪುತ್ತೂರು ತಾಲೂಕಿನ ವಿವಿಧ ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿಗಳಿಲ್ಲದ ಕಾರಣಕ್ಕೆ ಬಹು ಕಡೆಗಳಿಂದ ತರಗತಿ ಆರಂಭಕ್ಕೆ ಬೇಡಿಕೆ ಬಂದಿತ್ತು. ಪೋಷಕರಿಂದ ಬಂದ ಬೇಡಿಕೆಯನುಸಾರವಾಗಿ ಶಾಸಕ ಅಶೋಕ್ ರೈ ಅವರು ಆಂಗ್ಲ ಮಾಧ್ಯಮ ತರಗತಿಗೆ ಅನುಮತಿ ನೀಡುವಂತೆ ಶೈಕ್ಷಣಿಕ ವರ್ಷ ಆರಂಭಕ್ಕೆ ಮೊದಲು ಮನವಿ ಮಾಡಿ ಸರಕಾರಕ್ಕೆ ಆಗ್ರಹಿಸಿದ್ದರು.

ಅದರಂತೆ ತಾಲೂಕಿನ ಈ ಕೆಳಗಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ:

ಕೈಕಾರ, 
ಪಾಣಾಜೆ
ನರಿಮೊಗರು, 
ಭಕ್ತಕೋಡಿ, 
ಕೆಮ್ಮಾಯಿ, 
ಪೆರ್ಲಂಪಾಡಿ, 
ನೆಟ್ಟಣಿಗೆ ಮುಡ್ನರು, 
ಪಾಪೆಮಜಲು, 
ಮುಂಡೂರು, 
ವಿಟ್ಲ ಚಂದಳಿಕೆ, 
ಕೆದಿಲ, 
ಪಾಟ್ರಕೋಡಿ ಹಾಗೂ 
ಬೊಳಂತಿಮೊಗ್ರು 

ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿಗೆ ಅನುಮತಿ ನೀಡಿ ಸರಕಾರ ಆದೇಶವನ್ನು ಹೊರಡಿಸಿದೆ.


ಒಂದನೆ ತರಗತಿ ಆರಂಭ

ಸರಕಾರದ ಆದೇಶದಂತೆ 13 ಶಾಲೆಗಳಲ್ಲಿ ಈ ಬಾರಿಯ ಶೈಕ್ಷಣಿಕ ವರ್ಷದಿಂದಲೇ ಒಂದನೇ ತರಗತಿ ಆಂಗ್ಲ ಮಾಧ್ಯಮದಲ್ಲಿ ಪ್ರಾರಂಭವಾಗಲಿದೆ. ಈಗಾಗಲೇ ಈ ಶಾಲೆಗಳಲ್ಲಿ ಎಲ್‌ಕೆಜಿ ಯುಕೆಜಿ ತರಗತಿಗಳು ನಡೆಯುತ್ತಿದ್ದವು. ಯುಕೆಜಿ ಮುಗಿಸಿದ ವಿದ್ಯಾರ್ಥಿಗಳನ್ನು ಒಂದನೇ ತರಗತಿಗೆ ದಾಖಲಾತಿ ಮಾಡಿದ್ದರೂ ಸರಕಾರದಿಂದ ಆದೇಶ ಬಂದಿರಲಿಲ್ಲ ಮತ್ತು ಇಲಾಖೆಯಿಂದ ಅನುಮತಿಯೂ ದೊರೆತಿರಲಿಲ್ಲ. ಈ ಬಗ್ಗೆ ಪೋಷಕರು ಶಾಸಕ ಅಶೋಕ್ ರೈ ಅವರಲ್ಲಿ ಮನವಿ ಮಾಡಿಕೊಂಡಿದ್ದರು.

ಸರಕಾರಿ ಶಾಲೆಗಳಲ್ಲೂ ಆಂಗ್ಲ ಮಾಧ್ಯಮ ಪ್ರಾರಂಭಿಸುವುದು ಇಂದಿನ ಅನಿವಾರ್ಯತೆಯಾಗಿದೆ. ಕನ್ನಡದ ಜೊತೆಗೆ ಇಂಗ್ಲೀಷ್ ಕಲಿಯುವುದು ಇಂದಿನ ಕಾಲದ ಬೇಡಿಕೆಯಾಗಿದೆ. ಸರಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮೀಡಿಯಂ ಇಲ್ಲ ಎಂಬ ಕಾರಣಕ್ಕೆ ಅನೇಕ ಮಂದಿ ತಮ್ಮ ಮಕ್ಕಳನ್ನು ಬೇರೆ ಶಾಲೆಗಳಿಗೆ ಕಳಿಹಿಸುವಂತಾಗಿತ್ತು. ನಮ್ಮ ಸರಕಾರಿ ಶಾಲೆಗಳಲ್ಲಿ ಈಗಾಗಲೇ ಎಲ್‌ಜಿ, ಯುಕೆಜಿ ತರಗತಿಗಳು ನಡೆಯುತ್ತಿದೆ. ಮೊದಲ ಹಂತದಲ್ಲಿ 13 ಶಾಲೆಗಳಿಗೆ ಅನುಮತಿ ಸಿಕ್ಕಿದೆ. ಶೀಘ್ರವೇ ಶಿಕ್ಷಕರ ನೇಮಕಾತಿಯೂ ನಡೆಯಲಿದೆ. ಬಡವರ ಮಕ್ಕಳೂ ಅದರಲ್ಲಿ ಸರಕಾರಿ ಶಾಲೆಯ ಮಕ್ಕಳು ಅಂಗ್ಲ ಮಾಧ್ಯಮದಿಂದ ವಂಚಿತರಾಗಬಾರದು. ಎಲ್ಲಾ ಮಕ್ಕಳೂ ಕನ್ನಡದ ಜೊತೆಗೆ ಇಂಗ್ಲೀಷ್ ಕಲಿಯಬೇಕು

ಅಶೋಕ್ ರೈ ಶಾಸಕರು, ಪುತ್ತೂರು


ಪುತ್ತೂರು ಕ್ಷೇತ್ರದ 13 ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ (English Medium) ತರಗತಿಗಳನ್ನು ಆರಂಭಿಸಲು ಕರ್ನಾಟಕ ಸರ್ಕಾರದಿಂದ ಅಧಿಕೃತ ಆದೇಶ ನೀಡಲಾಗಿದೆ. 


- ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ 13 ಸರ್ಕಾರಿ ಶಾಲೆಗಳು ಈ ಯೋಜನೆಯಡಿಯಲ್ಲಿ ಆಯ್ಕೆಯಾಗಿವೆ.

- ಈ ಶಾಲೆಗಳಲ್ಲಿ ಗಣಿತ ಮತ್ತು ಇಂಗ್ಲಿಷ್ ವಿಷಯಗಳನ್ನು NCERT ಪಠ್ಯಕ್ರಮದಂತೆ ಬೋಧಿಸಲಾಗುತ್ತದೆ, ಇನ್ನು ಪರಿಸರ ಅಧ್ಯಯನ ಮತ್ತು ಕನ್ನಡ ವಿಷಯಗಳು ಕರ್ನಾಟಕ ಪಠ್ಯಪುಸ್ತಕ ಪ್ರಾಧಿಕಾರದ ಪಠ್ಯಕ್ರಮದಂತೆ ಮುಂದುವರೆಯುತ್ತವೆ.


ಈ ಕ್ರಮವು ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ಒದಗಿಸಲು ಮತ್ತು ವಿದ್ಯಾರ್ಥಿಗಳ ಭವಿಷ್ಯವನ್ನು ಉತ್ತಮಗೊಳಿಸಲು ಸಹಾಯಕವಾಗಲಿದೆ.


Next Post Previous Post