ವಿದ್ಯಾರ್ಥಿನಿಯೊಂದಿಗೆ ಬಸ್ಸಿನಲ್ಲಿ ಅನುಚಿತ ವರ್ತನೆ ಆರೋಪಿ ಯುವಕನಿಗೆ ಜಾಮೀನು
ಬಂಟ್ವಾಳ : ದಿನಾಂಕ 22/07/2025 ರಂದು ಬಸ್ಸಿನಲ್ಲಿ ವಿದ್ಯಾರ್ಥಿನಿಯೊಬ್ಬಳಿಗೆ ಕಿರುಕುಳ ನೀಡಿದ ಆರೋಪದಲ್ಲಿ ಮಹಮ್ಮದ್ ತೌಹೀದ್ ಎಂಬವನ ಪುತ್ತೂರು ಮಹಿಳಾ ಠಾಣೆಯ ಅಕ್ರಮ ನಂಬ್ರ 56/2025 ರಂತೆ ಬಿ.ಎನ್.ಎಸ್ ಸೆಕ್ಷನ್ 75 ಪ್ರಕಾರ ಪ್ರಕರಣ ದಾಖಲಿಸಿ ಪುತ್ತೂರು ಮಹಿಳಾ ಠಾಣೆಯ ಪೋಲೀಸರು ಆರೋಪಿತನನ್ನು ಬಂದಿಸಿ ಬಂಟ್ವಾಳ ಜೆ.ಎಂ.ಎಫ್.ಸಿ ನ್ಯಾಯಲಯಕ್ಕೆ ಇಂದು ಹಾಜರು ಪಡಿಸಿದ್ದು
ನ್ಯಾಯಾಧೀಶರಾದ ರಾಜೇಂದ್ರ ಪ್ರಸಾದ್ ರವರು ಪೋಲೀಸರು ಬಂಧನ ಪೂರ್ವ ಪ್ರಕ್ರಿಯೆಗಳನ್ನು ಸರಿಯಾಗಿ ಮಾಡದ ಕಾರಣ ಆರೋಪಿತನನ್ನು ಬಿಡುಗಡೆ ಗೊಳಿಸಲು ಆದೇಶಿಸಿರುತ್ತಾರೆ. ಆರೋಪಿತನ ಪರವಾಗಿ ಯುವ ವಕೀಲರಾದ ಅಬ್ದುಲ್ ಜಲೀಲ್ ನಂದಾವರ ವಾದಿಸಿದರು.