ನೆಲ್ಯಾಡಿಯಲ್ಲಿ ಖಾಝಿ ಖುರ್ರತುಸ್ಸಾದಾತ್ ಅಸ್ಸೈಯ್ಯಿದ್ ಫಝಲ್ ಕೋಯಮ್ಮ ತಂಙ್ಙಳ್ ಕೂರತ್ 1ನೇ ಆಂಡ್ ನೇರ್ಚೆ ಹಾಗೂ ಮಾಸಿಕ ಮಹ್ಳರತುಲ್ ಬದ್ರಿಯಾ ಮಜ್ಲಿಸ್


ನೆಲ್ಯಾಡಿ: SSF ನೆಲ್ಯಾಡಿ ಶಾಖೆಯ ವತಿಯಿಂದ SYS, KMJ, KCF ಸಹಯೋಗದೊಂದಿಗೆ ನೆಲ್ಯಾಡಿ ಖಾಝಿಯಾಗಿದ್ದ ಖುರ್ರತುಸ್ಸಾದಾತ್ ಕೂರ ತಂಙ್ಙಳ್ 1ನೇ ಆಂಡ್ ನೇರ್ಚೆ ಹಾಗೂ ಶೈಖುನಾ ಸುಲ್ತಾನುಲ್ ಉಲಮಾರ ಇಜಾಝತ್ ಪ್ರಕಾರ ಮಾಸಂಪ್ರತಿ ನಡೆಸಿಕೊಂಡು ಬರುತ್ತಿರುವ ಮಾಸಿಕ ಮಹ್ಳರತುಲ್ ಬದ್ರಿಯಾ ಮಜ್ಲಿಸ್ ನೆಲ್ಯಾಡಿ ಸುನ್ನೀ ಸೆಂಟರ್ ನಲ್ಲಿ ನಡೆಯಿತು,ಕೂರತ್ ತಂಙ್ಙಲರ ಸುಪುತ್ರ ಅಸ್ಸಯ್ಯಿದ್ ಅಬ್ದುರ್ರಹ್ಮಾನ್ ಮಸ್ಊದ್ ಅಲ್ ಬುಖಾರಿ ತಂಙ್ಙಳ್ ಕೂರತ್ ವಹಿಸಿದ್ದರು.


ಅಧ್ಯಕ್ಷತೆಯನ್ನು ಎಸ್.ಎಸ್.ಎಫ್ ನೆಲ್ಯಾಡಿ ಶಾಖೆಯ ಅಧ್ಯಕ್ಷರಾದ ಜಿ.ಎಚ್ ಮುಹಮ್ಮದ್ ಸುಲ್ತಾನ್ ವಹಿಸಿದ್ದರು,ಕೆ.ಎಂ,ಜೆ ನೆಲ್ಯಾಡಿ ಶಾಖೆಯ ಅಧ್ಯಕ್ಷರಾದಂತಹ ಬಹು| ಹಸೈನಾರ್ ಉಸ್ತಾದ್ ಉದ್ಘಾಟನೆ ನೆರವೇರಿಸಿದರು.ಶಾಹುಲ್ ಹಮೀದ್ ಸಖಾಫಿ ಉಸ್ತಾದ್ ನೆಲ್ಯಾಡಿ,ಅನ್ಸೀಫ್ ಸಅದಿ, ಅಶ್ರಫ್ ಸಅದಿ, ಅಶ್ರಫ್ ಮದನಿ ಹೊಸಮಜಲು, ಇಕ್ಬಾಲ್ ನೀರಕಟ್ಟೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು, ಹೊಸಮಜಲು ಜಲಾಲಿಯ್ಯ ಜುಮಾ ಮಸೀದಿಯ ಖತೀಬರಾದ ಬಹು|ಶಂಸೀರ್ ಸಖಾಫಿ ಪರಪ್ಪು ಪ್ರಾಸ್ತಾವಿಕ ಭಾಷಣ ಮಾಡಿದರು,

 ಖ್ಯಾತ ಯುವ ವಾಗ್ಮಿಗಳಾದ ಉಸ್ಮಾನ್ ಜೌಹರಿ ಉಸ್ತಾದ್ ನೆಲ್ಯಾಡಿ ಹಾಗೂ ಅಬ್ದುಲ್ ಮಜೀದ್ ಸಖಾಫಿ ಮಲ್ಲಿ ಉಸ್ತಾದ್ ಅನುಸ್ಮರಣಾ ಪ್ರಭಾಷಣ ಮಾಡಿದರು.ದುಆ ನೇತೃತ್ವ ವಹಿಸಿದ್ದ ಅಸ್ಸಯ್ಯಿದ್ ಅಬ್ದುರ್ರಹ್ಮಾನ್ ಮಸ್ಊದ್ ಅಲ್ ಬುಖಾರಿ ತಂಙ್ಙಳರನ್ನು ಸಂಘಟಕರು ಶಾಲ್ ಹೊದಿಸಿ ಗೌರವಿಸಿದರು, 

ಅದೇ ರೀತಿ ಅನುಸ್ಮರಣಾ ಪ್ರಭಾಷಣ ಮಾಡಿದ ಉಸ್ಮಾನ್ ಜೌಹರಿ ಉಸ್ತಾದ್ ನೆಲ್ಯಾಡಿ ಹಾಗೂ ಅಬ್ದುಲ್ ಮಜೀದ್ ಸಖಾಫಿ ಮಲ್ಲಿ ಉಸ್ತಾದ್,ಉದ್ಘಾಟನೆ ನೆರವೇರಿಸಿದ ಹಸೈನಾರ್ ಉಸ್ತಾದ್ ,ಪ್ರಾಸ್ತಾವಿಕ ಭಾಷಣ ಮಾಡಿದ ಶಂಸೀರ್ ಸಖಾಫಿ ಪರಪ್ಪು ಉಸ್ತಾದ್ ಹಾಗೂ ನೆಲ್ಯಾಡಿ ಶಾಖೆ ನಡೆಸುವ ಎಲ್ಲಾ ಕಾರ್ಯಕ್ರಮಗಳ ಪೋಸ್ಟರ್ ಮಾಡುತ್ತಾ ಮಾಧ್ಯಮ ವಿಭಾಗದಲ್ಲಿ ಕಾರ್ಯಾಚರಿಸುತ್ತಿರುವ SSF ನೆಲ್ಯಾಡಿ ಶಾಖೆಯ ಮಾಜಿ ಅಧ್ಯಕ್ಷರೂ,ಕೆ.ಸಿ.ಎಫ್ ನಾಯಕರೂ ಆಗಿರುವ ರಿಯಾ ಎನ್.ಕೆ ನೆಲ್ಯಾಡಿ,SSF ದ.ಕ ಈಸ್ಟ್ ಜಿಲ್ಲಾ ಸಮಿತಿಯ ಸದಸ್ಯರಾಗಿ ಆಯ್ಕೆಯಾದ ನೆಲ್ಯಾಡಿ ಶಾಖೆಯ ಸಕ್ರೀಯ ಕಾರ್ಯಕರ್ತ ಜಿ.ಎಚ್ ಮುಹಮ್ಮದ್ ಶುಜಾಹ್ ನೆಲ್ಯಾಡಿ ಇವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.


ಅದೇ ರೀತಿ SSF ನೆಲ್ಯಾಡಿ ಶಾಖೆಯ ವತಿಯಿಂದ ಖುರ್ರತುಸ್ಸಾದಾತ್ ಕೂರತ್ ತಂಙ್ಙಳರ ಪ್ರಥಮ ಉರೂಸ್ ಮುಬಾರಕ್ ಪ್ರಚಾರಾರ್ಥವಾಗಿ ಆಯೋಜಿಸಲಾಗಿದ್ದ ಪೋಸ್ಟರ್ ಡಿಸೈನ್, ಕ್ಯಾಲಿಗ್ರಫಿ ಸ್ಪರ್ಧೆಯ ವಿಜೇತರಿಗೆ ಸಯ್ಯಿದ್ ಅಬ್ದುರ್ರಹ್ಮಾನ್ ಮಸ್ಊದ್ ತಂಙ್ಙಳರ ದಿವ್ಯ ಹಸ್ತಗಳಿಂದ ಬಹುಮಾನ ವಿತರಿಸಲಾಯಿತು.


ಕಾರ್ಯಕ್ರಮದ ಕೊನೆಯಲ್ಲಿ ದುಆ ನೇತೃತ್ವ ನೀಡಿ ಮಾತನಾಡಿದ ಸಯ್ಯಿದ್ ಅಬ್ದುರ್ರಹ್ಮಾನ್ ಮಸ್ಊದ್ ಅಲ್ ಬುಖಾರಿ ತಂಙ್ಙಳ್ ನಾನು ಸಂಘಟನೆಯ ಹಲವಾರು ಕಾರ್ಯಕ್ರಮಗಳಿಗೆ ಹೋಗಿದ್ದೇನೆ ಆದರೆ SSF ನೆಲ್ಯಾಡಿ ಶಾಖೆ ಬೇರೆ ಶಾಖೆಗಳಿಗಿಂತ ಬಲಿಷ್ಟವಾಗಿದೆ ವಿಭಿನ್ನವಾಗಿದೆ,ಇನ್ನೂ ಬಲಿಷ್ಠ ಗೊಳಿಸಬೇಕು ಎಂದು ಹೇಳುತ್ತಾ,ನೆಬಿ (ಸ
.ಅ)ರ 1500 ನೇ ಜನ್ಮ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಬೇಕು, ಮಸೀದಿಗಳಲ್ಲಿ ರಬೀಉಲ್ ಅವ್ವಲಿನ 30 ದಿವಸಗಳಲ್ಲಿ ಮೌಲಿದ್ ಪಾರಾಯಣ ಮಾಡಬೇಕೆಂದು ನಿರ್ದೇಶಿಸಿದರು.

ಕಾರ್ಯಕ್ರಮದಲ್ಲಿ BJM ಜುಮಾ ಮಸೀದಿ ನೆಲ್ಯಾಡಿ ಇದರ ಆಡಳಿತ ಸಮಿತಿಯ ಅಧ್ಯಕ್ಷರಾದಂತಹ ಎನ್.ಎಸ್ ಸುಲೈಮಾನ್ ಹಾಜಿ,SYS ಕಡಬ ಝೋನ್ ಅಧ್ಯಕ್ಷರಾದ ಹಂಝ ಕಳಾರ, ರಿಯಾ ಎನ್.ಕೆ ನೆಲ್ಯಾಡಿ,ಮಿಸ್ ಅಬ್ ಸಅದಿ, ನೌಶಾದ್ ಸಖಾಫಿ, ಹಸನಬ್ಬ ಗೌಡ್ ಸಾಗ್, ಸುಲೈಮಾನ್ ಮೊರಂಕಳ, ಅಬ್ದುಲ್ ಗಫ್ಫಾರ್,ಸಿ.ಎಂ ಅಶ್ರಫ್,ಜಬ್ಬಾರ್, ರಹಿಮಾನ್, ಆಶಿಕ್ ಇಸ್ಮಾಯಿಲ್, ಶುಜಾಹ್, ಸುಹೈಲ್, ಝಹೀಂ, ಸವಾದ್, ತುಫೈಲ್, ಹಾಗೂ SSF SYS KMJ KCF ನಹಲವಾರು ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.
ಮುಂದಿನ ಮಹ್ಳರತುಲ್ ಬದ್ರಿಯಾ ಮಜ್ಲಿಸ್ ಆಗಸ್ಟ್ 17 ಆದಿತ್ಯವಾರ ನೆಲ್ಯಾಡಿ ಸುನ್ನೀ ಸೆಂಟರ್ ನಲ್ಲಿ ನಡೆಯಲಿರುವುದು.
Next Post Previous Post