ಜುಲೈ 19ಕ್ಕೆ ಸೀರತ್ ಕಮಿಟಿಯ ಪ್ರತಿಭಾ ಪುರಸ್ಕಾರ ಮತ್ತು ಮುಸ್ಲಿಂ ವಿದ್ಯಾ ಸಂಸ್ಥೆಗಳಿಗೆ ವಿಶೇಷ ಗೌರವ ಹಾಗೂ ಉಪನ್ಯಾಸ ಕಾರ್ಯಕ್ರಮ
ಪುತ್ತೂರು: ಪುತ್ತೂರು ತಾಲೂಕು ಸೀರತ್ ಕಮಿಟಿ ಇದರ ಆಶ್ರಯದಲ್ಲಿ 2024 - 25 ನೇ ಸಾಲಿನ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿ ಯು ಸಿ ಯಲ್ಲಿ ಹೆಚ್ಚಿನ ಅಂಕ ಪಡೆದ ಮುಸ್ಲಿಂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಯಲ್ಲಿ ಶೇಕಡ 100 ಫಲಿತಾಂಶ ಗಳಿಸಿದ ಮುಸ್ಲಿಂ ವಿದ್ಯಾಸಂಸ್ಥೆಗಳಿಗೆ ವಿಶೇಷ ಗೌರವ ಅಭಿನಂದನೆ ಹಾಗೂ ಉಪನ್ಯಾಸ (ವಿಷಯ: ಶೈಕ್ಷಣಿಕ ರಂಗದಲ್ಲಿ ಪೋಷಕರ ಪಾತ್ರ ಭವಿಷ್ಯತ್ ನಿರ್ಮಾಣಕ್ಕೆ ವಿದ್ಯಾರ್ಥಿಗಳ ಆಯ್ಕೆ). ಸಮಾರಂಭವು 2025 ಜುಲೈ 19 ಶನಿವಾರ ಅಪರಾಹ್ನ 2 ಗಂಟೆಯಿಂದ ಪುತ್ತೂರು ಕೋ ಆಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ನಡೆಯಲಿದೆ.
ಅಧ್ಯಕ್ಷತೆಯನ್ನು ಪುತ್ತೂರು ತಾಲೂಕು ಸೀರತ್ ಕಮಿಟಿ ಅಧ್ಯಕ್ಷರಾದ ಅಬ್ದುಲ್ ಖಾದರ್ ಹಾಜಿ ಸುರಯ್ಯ ಕೂರ್ನಡ್ಕ ಇವರು ವಹಿಸಲಿದ್ದು , ಉದ್ಘಾಟನೆಯನ್ನು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಗಳಾದ ಲೋಕೇಶ್ ಎಸ್ ಆರ್ ಮಾಡಲಿದ್ದಾರೆ.
ಶೈಕ್ಷಣಿಕ ರಂಗದಲ್ಲಿ ಪೋಷಕರ ಪಾತ್ರ ಮತ್ತು ಭವಿಷ್ಯತ್ ನಿರ್ಮಾಣಕ್ಕೆ ವಿದ್ಯಾರ್ಥಿಗಳ ಆಯ್ಕೆ ವಿಷಯದ ಕುರಿತು ಉಪನ್ಯಾಸಕರು ತರಬೇತುದಾರರೂ ಆದ ಅಬ್ದುಲ್ ರಜಾಕ್ ಅನಂತಾಡಿ ಉಪನ್ಯಾಸ ನೀಡಲಿರುವರು ಕಾರ್ಯಕ್ರಮದಲ್ಲಿ ಪುತ್ತೂರು ತಾಲೂಕು ಸೀರತ್ ಕಮಿಟಿ ಕೋಶಾಧಿಕಾರಿ ಎಲ್ ಟಿ ಅಬ್ದುಲ್ ರಝಾಖ್ ಹಾಜಿ ಸ್ವಾಗತವನ್ನು ನೆರವೇರಿಸಲಿರುವರು.
ಪುತ್ತೂರು ತಾಲೂಕು ಸೀರತ್ ಕಮಿಟಿ ಪ್ರಧಾನ ಕಾರ್ಯದರ್ಶಿ ಡಾ.ಹಾಜಿ.ಯಸ್.ಅಬೂಬಕ್ಕರ್ ಆರ್ಲಪದವು ಪ್ರಾಸ್ತಾವಿಕ ನುಡಿಗಳನ್ನು ಆಡುವರು ಪುತ್ತೂರು ತಾಲೂಕು ಸೀರತ್ ಕಮಿಟಿ ಉಪಾಧ್ಯಕ್ಷರಾದ ಬಿಎ ಶಕೂರ್ ಹಾಜಿ ಕಲ್ಲೇಗ ಧನ್ಯವಾದ ಸಮರ್ಪಿಸಲಿದ್ದು ಪುತ್ತೂರು ತಾಲೂಕು ಸೀರತ್ ಕಮಿಟಿ ಕಾರ್ಯದರ್ಶಿ ನೋಟರಿ ನ್ಯಾಯವಾದಿ ಇಸ್ಮಾಯಿಲ್ ನೆಲ್ಯಾಡಿ ಕಾರ್ಯಕ್ರಮ ನಿರೂಪಣೆ ಮಾಡಲಿರುವರು
ಈ ಕಾರ್ಯಕ್ರಮದ ಸದುಪಯೋಗ ವನ್ನು ವಿದ್ಯಾಭಿಮಾನಿಗಳುಪಡೆದುಕೊಳ್ಳಬೇಕೆಂದೂ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.