ನೆಲ್ಯಾಡಿ: ಇಂದು ( ಜುಲೈ 19) ಖುರ್ರತುಸ್ಸಾದಾತ್ ಕೂರತ್ ತಂಙ್ಙಳ್ 1ನೇ ಆಂಡ್ ನೇರ್ಚೆ ಹಾಗೂ ಮಾಸಿಕ ಮಹ್ಳರತುಲ್ ಬದ್ರಿಯಾ ಮಜ್ಲಿಸ್
ನೆಲ್ಯಾಡಿ:-ಜುಲೈ 19 SSF ನೆಲ್ಯಾಡಿ ಶಾಖೆಯ ವತಿಯಿಂದ ನೆಲ್ಯಾಡಿ ಖಾಝಿಯಾಗಿ ನೇತೃತ್ವ ನೀಡಿದ್ದ ಖಾಝಿ ಕೂರತ್ ತಂಙ್ಙಳರ 1ನೇ ಆಂಡ್ ನೇರ್ಚೆ ಹಾಗೂ ಮಾಸಂಪ್ರತಿ ನಡೆಸಿಕೊಂಡು ಬರುತ್ತಿರುವ ಮಾಸಿಕ ಮಹ್ಳರತುಲ್ ಬದ್ರಿಯಾ ಮಜ್ಲಿಸ್ ಕಾರ್ಯಕ್ರಮವು ಇಂದು (ಶನಿವಾರ) ಸಂಜೆ 6 ಗಂಟೆಗೆ ಸರಿಯಾಗಿ ನೆಲ್ಯಾಡಿ ಸುನ್ನೀ ಸೆಂಟರ್ ನಲ್ಲಿ ವಿಜ್ರಂಭಣೆಯಿಂದ ನಡೆಯಲಿದೆ ಎಂದು ಸಂಘಟಕರು ಮಾಧ್ಯಮ ಪ್ರಕಟಣೆಗೆ ತಿಳಿಸಿದ್ದಾರೆ.
ಕಾರ್ಯಕ್ರಮದ ನೇತೃತ್ವವನ್ನು ಅಸ್ಸಯ್ಯಿದ್ ಅಬ್ದುರ್ರಹ್ಮಾನ್ ಮಸ್ಊದ್ ತಂಙ್ಙಳ್ ಕೂರತ್ ವಹಿಸಲಿದ್ದಾರೆ, ಹಸೈನಾರ್ ಉಸ್ತಾದ್ ನೆಲ್ಯಾಡಿ ಉದ್ಘಾಟನೆ ಮಾಡಲಿದ್ದಾರೆ, ಖ್ಯಾತ ವಾಗ್ಮಿಗಳಾದ ಉಸ್ಮಾನ್ ಜೌಹರಿ ಉಸ್ತಾದ್ ನೆಲ್ಯಾಡಿ ಹಾಗೂ ಅಬ್ದುಲ್ ಮಜೀದ್ ಸಖಾಫಿ ಮಲ್ಲಿ ಉಸ್ತಾದ್ ಅನುಸ್ಮರಣಾ ಪ್ರಭಾಷಣ ಮಾಡಲಿದ್ದಾರೆ,
ಶಂಸೀರ್ ಸಖಾಫಿ ಪರಪ್ಪು ಹಾಗೂ ಶಫೀಕ್ ಅಹ್ಸನಿ ಕಾಮಿಲ್ ಸಖಾಫಿ ಉದ್ಭೋದನೆ ನೀಡಲಿದ್ದಾರೆ, ಮುಖ್ಯ ಅತಿಥಿಗಳಾಗಿ ಶಾಹುಲ್ ಹಮೀದ್ ಸಖಾಫಿ ನೆಲ್ಯಾಡಿ, ಅನ್ಸೀಫ್ ಸಅದಿ, ಸುಲೈಮಾನ್ ಹಾಜಿ,ಹಂಝ ಕಳಾರ, ರಿಯಾ ನೆಲ್ಯಾಡಿ, ಇಕ್ಬಾಲ್ ನೀರಕಟ್ಟೆ,ಶುಜಾಹ್ ನೆಲ್ಯಾಡಿ ಸಹಿತ ಹಲವಾರು ಉಲಮಾ ಉಮರಾ ನಾಯಕರೂ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಕೊನೆಯಲ್ಲಿ ಅಸ್ಸಯ್ಯಿದ್ ಅಬ್ದುರ್ರಹ್ಮಾನ್ ಮಸ್ಊದ್ ತಂಙ್ಙಳ್ ದುಆ ನೇತೃತ್ವ ನೀಡಲಿದ್ದಾರೆ ಎಂದು ಪ್ರಕಟಣೆಯಲ್ಲಿ SSF ನೆಲ್ಯಾಡಿ ಶಾಖೆ ನಾಯಕರಾದ ಜಿ.ಎಚ್ ಮುಹಮ್ಮದ್ ಸುಲ್ತಾನ್, ಮುಹಮ್ಮದ್ ಝಹೀಂ ಹಾಗೂ ನಿಝಾಮುದ್ದೀನ್ ರವರು ತಿಳಿಸಿದರು.