ಜುಲೈ 12ಕ್ಕೆ ಪಾಣಾಜೆಯಲ್ಲಿ ಬಿದಿರು ಕೃಷಿಯ ಬಗ್ಗೆ ಮಾಹಿತಿ ಕಾರ್ಯಾಗಾರ
ಪುತ್ತೂರು: ಗ್ರಾಮಜನ್ಯ ರೈತ ಉತ್ಪಾದಕ ಸಂಸ್ಥೆ, ಗ್ರಾಮಜನ್ಯ ರೈತ ಸೇವಾ ಟ್ರಸ್ಟ್ , ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಇವುಗಳ ಜಂಟಿ ಆಶ್ರಯದಲ್ಲಿ ಪಾಣಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ 2025 ಜುಲೈ 12 ಶನಿವಾರ ದಂದು ಅಪರಾಹ್ನ 2.30ಕ್ಕೆ ಬಿದಿರು ಕೃಷಿಯ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಯಲಿಕ್ಕಿದೆ .
ಇದರ ಅಧ್ಯಕ್ಷತೆಯನ್ನು ಬ್ಯಾಂಬೂ ಸೊಸೈಟಿ ಆಫ್ ಇಂಡಿಯಾ ಇದರ ಎಕ್ಸ್ ಛಯರ್ಮೇನ್ ಡಾ. ಕೆ. ಸುಂದರ ನಾಯ್ಕ್ ಐ ಎಫ್ ಎಸ್ (Retd.) ವಹಿಸಲಿದ್ದಾರೆ. ಉಕ್ಕಿನಡ್ಕ ವಶಿಷ್ಟಾಶ್ರಮ ಟ್ರಸ್ಟ್ ಮತ್ತು ಶಾಲೆ ಇದರ ಅಧ್ಯಕ್ಷರಾದ ಪಿ ಜಿ ಶಂಕರ ನಾರಾಯಣ ಭಟ್ ಪಾಣಾಜೆ , ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಪದ್ಮನಾಭ ಬೋರ್ಕರ್, ಪುತ್ತೂರು ಗ್ರಾಮ ಜನ್ಯ ಅಧ್ಯಕ್ಷರಾದ ಮೂಲ ಚಂದ್ರ.ಕೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಇದರ ಜಿಲ್ಲಾಧ್ಯಕ್ಷರಾದ ಡಾ.ಹಾಜಿ. ಎಸ್. ಅಬೂಬಕ್ಕರ್ ಆರ್ಲಪದವು, ಪಾಣಾಜೆ ರೇಂಜ್ ಉಪ ವಲಯ ಅರಣ್ಯಾಧಿಕಾರಿ ಮದನ್, ಪಾಣಾಜೆ ಆರ್ಲಪದವು ಬೀಟ್ ಫಾರೆಸ್ಟ್ ಅಧಿಕಾರಿ ಸುನೀಶ್ ಗೌರವ ಉಪಸ್ಥಿತಿಯಲ್ಲಿ ಇರುವರು.
ಭಾರತೀಯ ಕಿಸಾನ್ ಸಂಘ ಮಂಗಳೂರು ವಿಭಾಗ ಇದರ ಅಧ್ಯಕ್ಷರಾದ ಎಂ ಜಿ ಸತ್ಯನಾರಾಯಣ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿಯನ್ನು ನೀಡಲಿರುವರು. 13 ರೀತಿಯ ವಾಣಿಜ್ಯ ಯೋಗ್ಯ ಮುಳ್ಳು ಇಲ್ಲದ ಬಿದಿರು ಗಿಡಗಳ ಮಾಹಿತಿಯನ್ನು ಮತ್ತು ಗುತ್ತಿಗೆ ಆಧಾರಿತ ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಿರುವರು ಈ ಕಾರ್ಯದಲ್ಲಿ ಭಾಗವಹಿಸಿ ಬಿದಿರು ಕೃಷಿಯ ಆರ್ಥಿಕ ಪರಿಸರ ಸ್ನೇಹಿ ಅವಕಾಶಗಳನ್ನು ಪಡೆದುಕೊಳ್ಳಲು ಒಂದು ಸುವರ್ಣ ಅವಕಾಶ ಬನ್ನಿ ಸರ್ವರಿಗೂ ಆತ್ಮೀಯ ಸ್ವಾಗತ ವನ್ನು ಸಂಘಟಕರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿರುತ್ತಾರೆ