ಬೆಳ್ತಂಗಡಿ ವಿವಾಹಿತ ಮಹಿಳೆ ನಾಪತ್ತೆ, ತೀವ್ರ ಹುಡುಕಾಟ


ಬೆಳ್ತಂಗಡಿ: ಕೊಲ್ಲೂರು ಮಲೆಬೆಟ್ಟು ನಿವಾಸಿಯಾಗಿರುವ ರಝೀನ(24ಪ) ಎಂಬವರು ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದು ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಬಿ.ಸಿ.ರೋಡಿನ ಕಾರಿಂಜದ ಮಹಮ್ಮದ್ ಸಲೀಂ ಎಂಬವರ ಪತ್ನಿಯಾದ ರಝೀನ ಜೂ.22ರಂದು ಸಂಜೆ 4.00 ಗಂಟೆಗೆ ತಾಯಿ ಮನೆಯಿಂದ ಗಂಡನ ಮನೆಗೆ ಹೋಗುತ್ತೇನೆಂದು ಹೇಳಿ ಮನೆಯಿಂದ ಹೋಗಿದ್ದಳು ಆದರೆ ಆಕೆ ಗಂಡನ ಮನೆಗೆ ಹೋಗದಿರುವುದರಿಂದ ಸಂಬಂಧಿಕರು,ಸ್ನೇಹಿತರ ಮನೆಯಲ್ಲಿ ಹುಡುಕಾಡಿದರೂ ಎಲ್ಲೂ ಪತ್ತೆಯಾಗಿಲ್ಲ.


 ಬಿ.ಸಿ.ರೋಡಿನ ಕಾರಿಂಜದ ಮಹಮ್ಮದ್‌ ಸಲೀಂ ಎಂಬುವವರ ಪತ್ನಿಯಾಗಿರುವ ರಝೀನ್‌ ಅವರ ಎರಡು ವರ್ಷದ ಮಗ 40 ದಿನಗಳ ಹಿಂದೆ ಸಾವಿಗೀಡಾಗಿತ್ತು.




ನಂತರ ಕೆಯ್ಯೂರಿನ ತಾಯಿ ಮನೆಯಲ್ಲಿದ್ದ ರಝೀನ್‌ 22-06-2025 ರಂದು ಸಂಜೆ 4 ಗಂಟೆಗೆ ಗಂಡನ ಮನೆಗೆ ಹೋಗುತ್ತೇನೆಂದು ಹೇಳಿ ಹೋಗಿದ್ದು, ಆದರೆ ಇತ್ತ ಗಂಡನ ಮನೆಗೂ ಹೋಗದೆ, ಸಂಬಂಧಿಕರು, ಸ್ನೇಹಿತರ ಮನೆಯಲ್ಲಿ ಹುಡುಕಾಡಿದರೂ ಎಲ್ಲೂ ಪತ್ತೆಯಾಗಿಲ್ಲ.



ರಝೀನ್‌ ಮನೆಯವರು ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಪೊಲೀಸರು ಪ್ರಕಟಣೆ ಹೊರಡಿಸಿದ್ದು, ಗುರುತು ಪತ್ತೆಯಾದರೆ ಬೆಳ್ತಂಗಡಿ ಪೊಲೀಸ್‌ ಠಾಣೆಗೆ ತಿಳಿಸಲು ಕೋರಲಾಗಿದೆ.



ಇವರು ಕಂಡು ಬಂದಲ್ಲಿ, 08256-232093, ಬೆಳ್ತಂಗಡಿ ಪೊಲೀಸ್‌ ಠಾಣೆ 9480805370, ಪಿಎಸ್‌ಐ ಬೆಳ್ತಂಗಡಿ ಪೊಲೀಸ್‌ ಠಾಣೆ 8277986367, ಕಂಟ್ರೋಲ್‌ ರೂ. ದ.ಕ.ಜಿಲ್ಲೆ 9480805300 ಈ ನಂಬರ್‌ಗೆ ಸಂಪರ್ಕ ಮಾಡಲು ಕೋರಲಾಗಿದೆ.




Next Post Previous Post