ಪ್ರತಿಭಾ ಸಾಧಕಿ ಅರ್ಚನಾ ಸಂಪ್ಯಾಡಿ. ✍️ ನಾರಾಯಣ ರೈ ಕುಕ್ಕುವಳ್ಳಿ.
ಪುತ್ತೂರು: ನಮ್ಮ ಮಕ್ಕಳು ನಮಗೆ ಭವಿಷ್ಯ.ಅವರ ಪ್ರತಿಭೆ ಸಾಧನೆಗಳೇ ಬದುಕಿಗೆ ಮುನ್ನುಡಿ.ಎಳೆಯ ಹರೆಯದಲ್ಲೇ ರಾಜ್ಯೋತ್ಸವ ಪುರಸ್ಕಾರ ಪಡೆದ ಪ್ರತಿಭಾ ಸಾಧಕಿ ಹೆಮ್ಮೆಯ ಅರ್ಚನಾ ಎಸ್ ಸಂಪ್ಯಾಡಿ.
ನೃತ್ಯವನ್ನೇ ತನ್ನ ಉಸಿರಾಗಿಸಿರುವ, ತನ್ನನ್ನು ತಾನು ನೃತ್ಯ ಲೋಕದ ಸೇವೆಗೆ ಅರ್ಪಿಸಿಕೊಂಡ ಬಹುಮುಖ ಪ್ರತಿಭೆ ಸಂಪ್ಯಾಡಿಯದು.ಈಕೆಯ ಸಾಧನೆಯ ಹಾದಿಯಲ್ಲಿ ಸದಾ ಬೆನ್ನೆಲುಬಾಗಿ ನಿಂತು ಪ್ರೋತ್ಸಾಹಿಸಿದವರು ತಂದೆ ಸುದರ್ಶನ್ ಕುಮಾರ್ ತಾಯಿ ರಮ್ಯ ಸುದರ್ಶನ್ .ಇಂದು ಹಲವು ಪ್ರಶಸ್ತಿ ಪಾರಿತೋಷಕಗಳನ್ನು ಮುಡಿಗೇರಿಸಿಕೊಂಡ ಬಾಲ ಪ್ರತಿಭೆ,ತನ್ನ ಪ್ರಾಥಮಿಕ ಶಿಕ್ಷಣವನ್ನು bishop policorposse public ಶಾಲೆ ಉದನೆ ಯಲ್ಲಿ ಪಡೆದು,ಪ್ರಕೃತ ತನ್ನ ಪ್ರೌಢ ಶಿಕ್ಷಣವನ್ನು 9ನೇ ತರಗತಿಯಿಂದ, ಜ್ಞಾನೋದಯ ಆಂಗ್ಲ ಮಾಧ್ಯಮ ಶಾಲೆ ಬೆಥನಿ ನೆಲ್ಯಾಡಿ ಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಕಲಿಕೆಯಲ್ಲೂ ಪ್ರತಿಭಾವಂತ ವಿದ್ಯಾರ್ಥಿಯಾಗಿರುವ ಈಕೆ ತನ್ನ ಶಿಕ್ಷಕರಿಗೆ, ನೃತ್ಯ ಸಂಸ್ಥೆಯ ಗುರುಗಳಿಗೆ ಅಚ್ಚುಮೆಚ್ಚಿನ ಶಿಷ್ಯೆ. ಭರತನಾಟ್ಯ ,ಪಾಶ್ಚಾತ್ಯ ನೃತ್ಯ ಯೋಗಾಭ್ಯಾಸ ,ಸಂಗೀತ, ಯಕ್ಷಗಾನ, ಮಾಡೆಲಿಂಗ್ ನಟನೆಯಲ್ಲೂ ಸೈ ಎನಿಸಿಕೊಂಡ ಈ ಸಾಧಕಿ, ವಿದ್ಯಾನ್ ದೀಪಕ್ ಕುಮಾರ್ ,ವಿದ್ವಾನ್ ಬಿ. ಗಿರೀಶ್ ಕುಮಾರ್, ವಿದುಷಿ ಶ್ರೀಮತಿ ಪ್ರೀತಿಕಲಾ ಇವರಿಂದ ಭರತನಾಟ್ಯ, ಶ್ರೀಮತಿ ಪದ್ಮಾವತಿ ಬಾಳ್ತಿಲ್ಲಾಯರಲ್ಲಿ ಸಂಗೀತ ಶಿಕ್ಷಣ ,
jc ಕುಶಾಲಪ್ಪ ಸಾರಥ್ಯದ ನಟವರ್ಯ ಡ್ಯಾನ್ಸ್ ಸ್ಟುಡಿಯೋ ನೆಲ್ಯಾಡಿ ಯಲ್ಲಿ ,ಅಕ್ಷಯ್ ಎಚ್ .ಪುತ್ತೂರು ಕಿರಣ್ ಮುರಳಿ ಇವರಿಂದ ಪಾಶ್ಚಾತ್ಯ ನೃತ್ಯ ತರಬೇತಿ , ನಾಟ್ಯ ವಿದುಷಿ ಹಿಮಾ ತಿರುಮಲೇಶ್ ಸಾಕ್ಷವರ್ಧನ್ ಇವರಿಂದ ಕಥಕ್ ನೃತ್ಯ ತರಬೇತಿ ಪಡೆಯುತ್ತಿದ್ದಾರೆ. ಈಗಾಗಲೇ 800 ಕ್ಕಿಂತಲೂ ಹೆಚ್ಚು ವೇದಿಕೆಗಳಲ್ಲಿ ಪ್ರತಿಭಾ ಪ್ರದರ್ಶನ ನೀಡಿದ ಸಾಧನೆ ಈಕೆಯದು.
ಜಗತ್ತಿನ ಶ್ರೇಷ್ಠ ಸಂಪತ್ತು ಮಾನವನ ವ್ಯಕ್ತಿತ್ವದಲ್ಲಿ ಅಡಗಿದೆ ಎಂಬ ಮಾತಿಗೆ ಈಕೆ ಮಾದರಿ. ತನ್ನ ಅವಿರತ ಪ್ರಯತ್ನದ ಮೂಲಕ ಈ ಪ್ರತಿಭೆ ತನ್ನ ಊರಿನ ಹಿರಿಮೆಯನ್ನೂ ಬೆಳಗಿಸಿದ ಈ ಬಾಲ ಪ್ರತಿಭೆ ರಾಷ್ಟ್ರೀಯ ಹಾಗೂ ರಾಜ್ಯಮಟ್ಟದಲ್ಲಿ ಸುಮಾರು ಹದಿನಾರು ಪ್ರಶಸ್ತಿಗಳ ಪಡೆದು, ವಲಯ ಮಟ್ಟದಲ್ಲಿ 50ಕ್ಕಿಂತಲೂ ಹೆಚ್ಚು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿರುತ್ತಾರೆ.
ಚೈತನ್ಯಶ್ರೀ ಕರುನಾಡ ರತ್ನ ಪುರಸ್ಕಾರ,
ಇಂಡಿಯನ್ ಎಕ್ಸಲೆಂಟ್ ಅವಾರ್ಡ್ ,
ಬೆಸ್ಟ್ ಕ್ಲಾಸಿಕಲ್ ಡ್ಯಾನ್ಸರ್ ನಟವರ್ಯ ವರ್ಷದ ಕಲಾ ಸಾಧಕಿ ಪುರಸ್ಕಾರ, ಕಲಾ ಮಾಣಿಕ್ಯ
ಶ್ರೀ ಮಂಜುನಾಥ ನ್ಯಾಷನಲ್ ಅವಾರ್ಡ್ ಪಡೆದ ಈಕೆಯ ಪ್ರತಿಭಾ ಸಾಧನೆಗಾಗಿ ,ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪುರಸ್ಕಾರ ೨೦೨೫, ಪಡೆದು ತನ್ನ ಹುಟ್ಟೂರಿಗೆ ಹೆಮ್ಮೆ ತಂದಿರುವ, ಇವರ ಶಿಕ್ಷಣ -ಕಲಾ ಜೀವನ ಇನ್ನಷ್ಟು ಉತ್ತುಂಗಕ್ಕೇರಲಿ ಎಂದು ಹಾರೈಸೋಣ.
✍️ ನಾರಾಯಣ ರೈ ಕುಕ್ಕುವಳ್ಳಿ.