ಇತಿಹಾಸ ಪ್ರಸಿದ್ಧ ಹಳೆನೇರೆಂಕಿ ಮಖಾಮ್ ಉರೂಸ್ | 7 ನೇ ಮಜ್ಲಿಸುನ್ನೂರು ವಾರ್ಷಿಕೋತ್ಸವ ಹಾಗು ದ್ವಿದಿನ ಮತಪ್ರಭಾಷಣ


ಕಡಬ: ತಾಲೂಕಿನ ಇತಿಹಾಸ ಪ್ರಸಿದ್ಧವಾದ ಹಳೆನೇರೆಂಕಿ ಆರಾಟಿಗೆ ವಲಿಯುಲ್ಲಾಹಿ ಮಖಾಂ ಉರೂಸ್ ಹಳೆನೇರೆಂಕಿ ಎಂಬಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿರುವ ಹಲವಾರು ಕಸ್ಫ್ ಕರಾಮತುಗಳಿಂದ ಹೆಸರು ಪಡೆದ ಸರ್ವಧರ್ಮಿಯರ ಕಷ್ಟ ಗಳಿಗೆ ಪರಿಹಾರ ಕೇಂದ್ರವಾಗಿ ಹೆಸರು ಪಡೆದ ಅಲ್ಲಾಹನ ಇಷ್ಟ ದಾಸರಾದ ಆರಾಟಿಗೆ ವಲಿಯುಲ್ಲಾಹಿ (ಖ. ಸಿ) ರವರ ಹೆಸರಿನಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಉರೂಸ್ ಮುಬಾರಕ್ ಹಾಗೂ ಏಳನೇ ವಾರ್ಷಿಕ ಮಜ್ಲಿಸುನ್ನೂರ್ ಕಾರ್ಯಕ್ರಮ  ದಿನಾಂಕ 20/12/2025 ಶನಿವಾರ ಅಸ್ತಮಿಸಿದ ಆದಿತ್ಯವಾರ ರಾತ್ರಿ ಬಹಳ ವಿಜೃಂಭಣೆಯಿಂದ ಆಚರಿಕೊಂಡು ಬರಲು ತೀರ್ಮಾನಿಸಲಾಗಿದೆ.



ಇದರ ಪ್ರಯುಕ್ತ 2 ದಿನಗಳ ಧಾರ್ಮಿಕ ಪ್ರವಚನ ನಡೆಯಲಿದೆ.
ಕಾರ್ಯಕ್ರಮ: ದಿನಾಂಕ 19/12/25 ಶುಕ್ರವಾರ ಅಸ್ತಮಿಸಿದ ಶನಿವಾರ ರಾತ್ರಿ ಸಮಯ 7 pm 
ಅಧ್ಯಕ್ಷತೆ: ಬಹು ಸುಲೈಮಾನ್ ನೂಜೋಲ್ ಅಧ್ಯಕ್ಷರು mjm ಹಳೆನೇರೆಂಕಿ



ಸ್ವಾಗತ ಅಬ್ದುಲ್ ರಝಾಕ್ ದಾರಿಮಿ ಹಳೆನೇರೆಂಕಿ
ಉದ್ಘಾಟನೆ ಮತ್ತು ದುವಾ: ಅಸ್ಸಯ್ಯದ್ ಮುಹಮ್ಮದ್ ಜುನೈದ್ ಜಿಫ್ರೀ ತಂಙಳ್ ಆತೂರ್.
ಪ್ರಸ್ತಾವಿಕ ಭಾಷಣ: ಬಹು ಮುಹಮ್ಮದ್ ರಫೀಕ್ ಅರ್ಶದಿ MJM ಹಳೆನೇರೆಂಕಿ.
ಮುಖ್ಯ ಪ್ರಭಾಷಣ :ಬಹು ಅಬ್ದುಲ್ ಗಫೂರ್ ಮೌಲವಿ ಕೀಚೇರಿ.

ದಿನಾಂಕ 20/12/25 ಶನಿವಾರ ಅಸರ್ ನಮಾಝಿನ ನಂತರ ರಾತಿಬ್ ನೇರ್ಚೆ
ನೇತೃತ್ವ ಬಹು ಮುಹಮ್ಮದ್ ರಫೀಕ್ ಅರ್ಶದಿ MJM ಹಳೆನೇರೆಂಕಿ
ಮಗ್ರಿಬ್ ನಮಾಝಿನ ಬಳಿಕ ಮಜ್ಲಿಸುನ್ನೂರ್ ಆಧ್ಯಾತ್ಮಿಕ ಮಜ್ಲಿಸ್
ನೇತೃತ್ವ ಬಹು ಅಸ್ಸಯ್ಯದ್ ಸರ್ಫುದ್ದೀನ್ ಅಲ್ ಹಾದಿ ತ್ವಬೀಬ್ ತಂಙಳ್ ಸಾಲ್ಮರ ಪುತ್ತೂರು.


ರಾತ್ರಿ 8 ಘಂಟೆಗೆ ಸಮಾರೋಪ ಸಮಾರಂಭ
ಅಧ್ಯಕ್ಷತೆ ಮತ್ತು ದುವಾ: ಅಸ್ಸಯ್ಯದ್ ಸರ್ಫುದ್ದೀನ್ ಅಲ್ ಹಾದಿ ತ್ವಬೀಬ್ ತಂಙಳ್ ಸಾಲ್ಮರ ಪುತ್ತೂರು.
ಸ್ವಾಗತ: ಮುಹಮ್ಮದ್ ಅಶ್ರಫ್ ಮಿಸ್ಬಾಹಿ ಅಧ್ಯಾಪಕರು N.H.M ಹಳೆನೇರೆಂಕಿ
ಉದ್ಘಾಟನೆ:ಬಹು ಮುಹಮ್ಮದ್ ರಫೀಕ್ ಅರ್ಶದಿ ಖತೀಬ್ MJM ಹಳೆನೇರೆಂಕಿ 

ಮುಖ್ಯ ಪ್ರಭಾಷಣ:ಬಹು ಸಲಾಂ ಫೈಝೀ ಎಡಪ್ಪಾಲ, ಮುದರ್ರಿಸ್ ಜುಮಾ ಮಸೀದಿ ಉಪ್ಪಿನಂಗಡಿ ನಡೆಸಲಿದ್ದಾರೆ ಎಂದು ಝೈನ್ ಆಲಂಕಾರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Post Previous Post