ಕನ್ನಡ ನಾಡಿನ ಹೆಮ್ಮೆಯ ಸಾಧಕರಿಗೆ —ನಿಮ್ಮ ವಿಶಿಷ್ಟ ಸಾಧನೆಗೆ ನಮ್ಮ ವಿಶೇಷ ಗೌರವ “ಚಿತ್ರ ಸಂತೆ ರಾಜ್ಯೋತ್ಸವ ಪುರಸ್ಕಾರ ಕ್ಕೆ ಅಶೀರ್ ಕುಂತೂರು ಆಯ್ಕೆ




ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ 22 ವರ್ಷದ ಯುವ ತರುಣರಾದ ಅಶೀರ್ ಕುಂತೂರು ಅವರು ತಮ್ಮ ವಿದ್ಯಾಭ್ಯಾಸದ ದಿನಗಳಿಂದಲೇ ಸಮಾಜಮುಖಿ ಕಾರ್ಯಗಳಲ್ಲಿ ವಿಶೇಷ ಆಸಕ್ತಿ ಮತ್ತು ಬದ್ಧತೆಯನ್ನು ತೋರಿದ್ದಾರೆ.


ಆಸ್ಪತ್ರೆಗಳಲ್ಲಿರುವ ರೋಗಿಗಳಿಗೆ ಹಣ್ಣು–ಹಂಪಲು ವಿತರಣೆ ಮಾಡುವುದು, ಆನಾಥಾಶ್ರಮದ ಮಕ್ಕಳಿಗೆ ಮತ್ತು ವೃದ್ಧಾಶ್ರಮದಲ್ಲಿರುವವರಿಗೆ ಆಹಾರದ ವ್ಯವಸ್ಥೆ ಮಾಡಿಸುವುದು, ಹಲವು ವಿದ್ಯಾರ್ಥಿಗಳಿಗೆ ಕಾಲೇಜುಗಳಲ್ಲಿ ಉಚಿತ ಸೀಟು ಒದಗಿಸುವಲ್ಲಿ ತಮ್ಮ ಮಟ್ಟಿನ ಸಹಾಯ ಮಾಡುವುದು—ಇವೆಲ್ಲವೂ ಇವರ ಸಮಾಜ ಸೇವೆಯ ಕೆಲವು ಮುಖ್ಯ ಉದಾಹರಣೆಗಳು.



ರಾಜಕೀಯ ನಾಯಕರೊಂದಿಗೆ ನಿರಂತರ ಸಂಪರ್ಕದಲ್ಲಿ ಇದ್ದು, ಸಮಾಜದ ಒಳಿತಿಗಾಗಿ ಕೆಲಸ ಮಾಡುವ ಮನೋಭಾವ ಹಾಗೂ ಸೇವಾಭಾವದಿಂದ ಅಶೀರ್ ಕುಂತೂರು ಅವರು ತಮ್ಮದೇ ಆದ ಗುರುತು ನಿರ್ಮಿಸಿಕೊಂಡಿದ್ದಾರೆ.


ಈ ಅನನ್ಯ ಕೊಡುಗೆಗಳನ್ನು ಗೌರವಿಸಿ, ಕನ್ನಡ ನಾಡಿನ ಹೆಮ್ಮೆಯ ಸಾಧಕರಿಗೆ ನೀಡಲಾಗುವ "ಚಿತ್ರಸಂತೆ ರಾಜ್ಯೋತ್ಸವ ಪುರಸ್ಕಾರ – 2025"ಕ್ಕೆ
ಅಶೀರ್ ಕುಂತೂರು ಅವರನ್ನು ಆಯ್ಕೆ ಮಾಡಲಾಗಿದೆ.


ಈ ಪ್ರಶಸ್ತಿ ಇದೇ ಬರುವ 24ನೇ ತಾರೀಖಿನಂದು,
HYDE PARK APART HOTEL, ಬೆಂಗಳೂರು ನಲ್ಲಿ ಭವ್ಯವಾಗಿ ಪ್ರದಾನ ಮಾಡಲಾಗುತ್ತದೆ..
Next Post Previous Post