ಜನ ಸಾಮಾನ್ಯರ ಹೃದಯ ಗೆದ್ದಿರುವ ಇಸಾಕ್ ರವರಿಗೆ ಅಭಿನಂದನೆಗಳು ಅಶೀರ್ ಕುಂತೂರು


ಕಡಬ ತಾಲೂಕಿನ ಕೈೂಲ–ರಾಮಕುಂಜ ವ್ಯಾಪ್ತಿಯ ಗೋಳಿತ್ತಡಿ, ಏಣಿತ್ತಡ್ಕ–ಕುದುಲೂರು ಸಂಪರ್ಕ ರಸ್ತೆಯು ಸುಮಾರು 4 ಕಿ.ಮೀ ವ್ಯಾಪ್ತಿಯಲ್ಲಿ ತೀರ ಹದಗೆಟ್ಟು, ಸಾರ್ವಜನಿಕರು ಮತ್ತು ವಾಹನ ಸವಾರರು ಸಂಕಷ್ಟ ಅನುಭವಿಸುತ್ತಿದ್ದರು.

ಈ ದುಸ್ಥಿತಿಯನ್ನು ಕಂಡು ಯಾವುದೇ ಚುನಾಯಿತ ಪ್ರತಿನಿಧಿಗಳಲ್ಲದ, ರಾಜಕೀಯ ವಲಯದಲ್ಲಿ ಹೆಸರಿಲ್ಲದ, ಆದರೂ ಮನುಷ್ಯತ್ವದ ಮೌಲ್ಯವನ್ನು ಹೃದಯದಲ್ಲೇ ಹೊತ್ತಿರುವ ಇಸಾಕ್ ಅವರು ಯಾವುದೇ ಸ್ವಾರ್ಥವಿಲ್ಲದೆ, ಸ್ವಯಂಪ್ರೇರಿತವಾಗಿ, ಏಕಾಂಗಿಯಾಗಿ ಎರಡು ದಿನಗಳ ಕಾಲ ಮಣ್ಣು ಹಾಕಿ ಹೊಂಡಗಳನ್ನು ಮುಚ್ಚುವ ಮೂಲಕ ಜನರಿಗೆ ದೊಡ್ಡ ಅನುಕಂಪದ ಸೇವೆಯನ್ನು ಸಲ್ಲಿಸಿದ್ದಾರೆ.

ಇವರು ಆಡಿಕೆ ಸುಳಿಯುವ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರೂ, ಸಮಾಜದ ಬಗ್ಗೆ ಇರುವ ಬದ್ಧತೆ, ನಿಷ್ಠೆ ಮತ್ತು ಹಿತಚಿಂತನೆಯ ಮನೋಭಾವ ಇವರ ಕಾರ್ಯದಲ್ಲಿ ಸ್ಪಷ್ಟವಾಗಿ ಗೋಚರಿಸಿದೆ.
ಇವರು ಮಾಡಿದ ಈ ಸೇವೆಯಿಂದ ದಿನನಿತ್ಯ ಈ ರಸ್ತೆಯಲ್ಲಿ ಸಂಚಾರ ಮಾಡುವ ನೂರಾರು ಜನರು, ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ ಮಹತ್ತರವಾದ ಉಪಕಾರ ಆಗಿದೆ.

ಇಸಾಕ್ ರವರಂತಹ ವ್ಯಕ್ತಿಗಳೇ ಸಮಾಜದ ನಿಜವಾದ ಶ್ರೇಷ್ಠತೆ.
ಅವರ ಈ ನಿಸ್ವಾರ್ಥ ಸೇವೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಎಲ್ಲೆಡೆ ಮೆಚ್ಚುಗೆ ಗಳಿಸುತ್ತಿದೆ.

ಇಂತಹ ನಿಜವಾದ ಮಾನವೀಯತೆ ಮತ್ತು ಪ್ರಾಮಾಣಿಕತೆಗೆ ನಮ್ಮ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಗೌರವ.
Next Post Previous Post