ಸಂಚಾರ ನಿಯಮ ಉಲ್ಲಂಘನೆ: ದಂಡ ಪಾವತಿಗೆ ಶೇ 50 ಡಿಸ್ಕೌಂಟ್! ವಾಹನ ಸವಾರರಿಗೆ ರಾಜ್ಯ ಸರ್ಕಾರದಿಂದ ಬಿಗ್ ಆಫರ್ (50% discount on traffic fines)
- ವಾಹನ ಸವಾರರಿಗೆ ಗುಡ್ ನ್ಯೂಸ್ (50% discount on traffic fines) ನೀಡಿದ ಸರ್ಕಾರ
- ನವೆಂಬರ್ 21ರಿಂದ ಡಿಸೆಂಬರ್ 12ರೊಳಗೆ ಬಾಕಿ ದಂಡ ಪಾವತಿಸಿದರೆ ಅರ್ಧ ಮೊತ್ತ ಮಾತ್ರ
- ಬೆಂಗಳೂರು ಒನ್ ಮತ್ತು ಕರ್ನಾಟಕ ಒನ್ ಮೂಲಕ ಪಾವತಿ ಮಾಡಲು ಸೂಚನೆ
ಬೆಂಗಳೂರು: ಈ ಹಿಂದೆ ರಾಜ್ಯ ಸರ್ಕಾರ ಜಾರಿಗೆ ತಂದಿದ್ದ ಶೇ.50ರಷ್ಟು ಟ್ರಾಫಿಕ್ ದಂಡ ರಿಯಾಯಿತಿ ಇದೀಗ ಮತ್ತೆ ಜಾರಿಗೆ ತರುವ ಕುರಿತು ರಾಜ್ಯದ ಕಾಂಗ್ರೆಸ್ ಸರ್ಕಾರ ಮಹತ್ತರ ಘೋಷಣೆ ಮಾಡಿದೆ.
ಸಂಚಾರಿ ದಂಡ ಪಾವತಿಯನ್ನು ಸುಲಭಗೊಳಿಸಲು ಮತ್ತೆ 50% ರಿಯಾಯಿತಿ ಯೋಜನೆನ್ನು ಘೋಷಿಸಿದೆ.
ಇತ್ತೀಚೆಗೆ ಸಹ ಇದೇ ರೀತಿಯ ರಿಯಾಯಿತಿ ನೀಡಿದ್ದ ವೇಳೆ ಲಕ್ಷಾಂತರ ರೂಪಾಯಿ ದಂಡ ಸಂಗ್ರಹಣೆ ಸರ್ಕಾರಕ್ಕೆ ಲಭಿಸಿತ್ತು.
ಈಗ ಮತ್ತೊಮ್ಮೆ ವಾಹನ ಚಾಲಕರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಸಾರಿಗೆ ಇಲಾಖೆ ಪ್ರಸ್ತಾಪಿಸಲಾದ ಯೋಜನೆಗೆ ಸರ್ಕಾರ ಅಧಿಕೃತ ಅನುಮೋದನೆ ನೀಡಿದೆ.

ಸಾರಿಗೆ ಇಲಾಖೆಯ ಅಧೀನ ಕಾರ್ಯದರ್ಶಿ ರಂಗಪ್ಪ ಕರಿಗಾರ ಅವರು ಈ ಕುರಿತು (50% discount on traffic fines) ಅಧಿಕೃತ ಆದೇಶ ಹೊರಡಿಸಿದ್ದು, ಯಾವುದೇ ತೊಂದರೆ ಇಲ್ಲದೆ ಜನರು ದಂಡ ಪಾವತಿಸಲು ಈ ಯೋಜನೆ ನೆರವಾಗಲಿದೆ.
ಇನ್ನು ಹೊಸ ಆದೇಶದ ಪ್ರಕಾರ, ನವೆಂಬರ್ 21ರಿಂದ ದಂಡ ರಿಯಾಯಿತಿ ಯೋಜನೆ ರಾಜ್ಯದಾದ್ಯಂತ ಜಾರಿಗೆ ಬಂದಿದೆ.
ಸಂಚಾರ ನಿಯಮ ಉಲ್ಲಂಘನೆಗಾಗಿ ಬಾಕಿಯಾಗಿರುವ ದಂಡಗಳನ್ನು ವಾಹನ ಮಾಲೀಕರು ಕೇವಲ ಅರ್ಧ ಮೊತ್ತ ಪಾವತಿಸಿ ತೆರವುಗೊಳಿಸಬಹುದಾಗಿದೆ. ಆದರೆ ಈ ಅವಕಾಶ ಡಿಸೆಂಬರ್ 12 ರವರೆಗೆ ಮಾತ್ರ ಲಭ್ಯವಿದೆ.
ಸಂಚಾರ ಪೊಲೀಸ್ ಠಾಣೆಗಳು, ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸೆಂಟರ್, ಕರ್ನಾಟಕ ಒನ್, ಬೆಂಗಳೂರು ಒನ್ ವೆಬ್‌ಸೈಟ್‌ಗಳಲ್ಲಿ ದಂಡದ ವಿವರ ಪಡೆದು ಆನ್‌ಲೈನ್ ಅಥವಾ ಕೌಂಟರ್‌ನಲ್ಲಿ ಪಾವತಿಸಬಹುದು.
ಹಳೆಯ ದಂಡಗಳನ್ನು ಪಾವತಿಸದೆ ಇರುವಂತಹ ಚಾಲಕರು ಈ ಬಾರಿ ಅವಕಾಶ ಬಳಸಿಕೊಂಡು ದಂಡವನ್ನು ಪಾವತಿ ಮಾಡಿಕೊಳ್ಳುವಂತೆ ಸರ್ಕಾರ ಸೂಚಿಸಿದೆ.
ಸಾರಿಗೆ ಇಲಾಖೆಯ ಪ್ರಕಾರ, ಬಹಳಷ್ಟು ವಾಹನ ಸವಾರರು ಹಲವು ತಿಂಗಳು ಮತ್ತು ವರ್ಷಗಳಿಂದ ದಂಡ ಪಾವತಿಸದೆ ಬಾಕಿ ಇಟ್ಟಿದ್ದಾರೆ.
ಇದರ ಪರಿಣಾಮವಾಗಿ ದಂಡ ಸಂಗ್ರಹಣೆಯಲ್ಲಿ ವಿಳಂಬವಾಗಿದ್ದು, ವಾಹನ ದಾಖಲಾತಿ, ವಿಮೆ ನವೀಕರಣ, RC ವರ್ಗಾವಣೆ ಮುಂತಾದ ಸೇವೆಗಳಲ್ಲಿ ಅಡಚಣೆ ಉಂಟಾಗುತ್ತಿದೆ.
ಈ ಸಮಸ್ಯೆಗೆ ಪರಿಹಾರವಾಗಿ, ಸರ್ಕಾರ 50% ರಿಯಾಯಿತಿ ಮೂಲಕ ಬಾಕಿ ದಂಡಗಳನ್ನು ತೆರವುಗೊಳಿಸಲು ಅನುಕೂಲ ಮಾಡಿಕೊಡುತ್ತಿದೆ.
ಕಳೆದ ಬಾರಿ ನೀಡಿದ ಈ ರಿಯಾಯಿತಿಗೆ ಜನರಿಂದ ಭರ್ಜರಿ ಪ್ರತಿಕ್ರಿಯೆ ದೊರಕಿತ್ತು, ಮತ್ತು ಲಕ್ಷಾಂತರ ಪ್ರಕರಣಗಳು ನಿವಾರಣೆಯಾದವು.
ಈ ಬಾರಿ ಸಹ ಇದೇ ರೀತಿಯ ಹೆಚ್ಚಿನ ದಂಡಗಳ ಪಾವತಿ ನಡೆಯುವ ನಿರೀಕ್ಷೆ ಇದೆ.ಸಚಿವರು ಹಾಗೂ ಸಾರಿಗೆ ಅಧಿಕಾರಿಗಳ ಅಭಿಪ್ರಾಯದ ಪ್ರಕಾರ, ಈ ರಿಯಾಯಿತಿ ವಾಹನ ಸವಾರರಿಗೆ ಮಾತ್ರವಲ್ಲದೆ, ಸರ್ಕಾರಕ್ಕೂ ಸಹ ಲಾಭಕಾರಿಯಾಗಿದೆ.
ಜನರು ಬಾಕಿ ಪಾವತಿಯನ್ನು ತೆರವುಪಡಿಸಿದರೆ, ಟ್ರಾಫಿಕ್ ದಾಖಲೆಗಳು ಸುಗಮವಾಗಿ ನವೀಕರಣವಾಗುತ್ತವೆ.
ಜೊತೆಗೆ ರಸ್ತೆ ಸುರಕ್ಷತೆ, ನಿಯಮ ಪಾಲನೆ ಹಾಗೂ ಟ್ರಾಫಿಕ್ ನಿರ್ವಹಣೆಯಲ್ಲಿಯೂ ಇದು ಸಹಕಾರಿ.
ವಾಹನ ಮಾಲೀಕರು ಸಮಯ ಮೀರದೆ ಡಿಸೆಂಬರ್ 12ರೊಳಗೆ ಈ ಅವಕಾಶವನ್ನು ಬಳಸಿಕೊಳ್ಳಬೇಕು.
ಇಲ್ಲವಾದರೆ ನಂತರ ಸಂಪೂರ್ಣ ದಂಡ ಮೊತ್ತ ಪಾವತಿಸಬೇಕಾಗುತ್ತದೆ ಎಂದು ಸಾರಿಗೆ ಇಲಾಖೆಯ ಅಧೀನ ಕಾರ್ಯದರ್ಶಿ ರಂಗಪ್ಪ ಕರಿಗಾರ ಅವರು ಹೇಳಿದ್ದಾರೆ.