ಅಶೋಕ ಜನ - ಮನ 2025 ರ ಮಹಾ ಸಮ್ಮೇಳನ ಯಶಸ್ವಿಗೆ ಪಾಣಾಜೆಯಲ್ಲಿ ಜನ ಸಂಪರ್ಕ ಸಭೆ


ಪುತ್ತೂರು: ರೈ ಎಸ್ಟೇಟ್ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ದೀಪಾವಳಿ ಪ್ರಯುಕ್ತ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಅಶೋಕ್ ಕುಮಾರ್ ರೈ ಇವರ ಸಾರಥ್ಯದಲ್ಲಿ ಅಕ್ಟೋಬರ್ 20 ರಂದು ಪುತ್ತೂರು ತಾಲೂಕು ಕ್ರೀಡಾಂಗಣ ಕೊಂಬೆಟ್ಟು ವಿನಲ್ಲಿ ನಡೆಸಲ್ಪಡುವ ಅಶೋಕ ಜನ - ಮನ 2025 ರ ಮಹಾ ಸಮ್ಮೇಳನಕ್ಕೆ ತಾಲೂಕಿನಾದ್ಯಂತ ಆಹ್ವಾನ ನೀಡುವ ಜನ ಸಂಪರ್ಕ ಸಭೆಯು ಪಾಣಾಜೆ ಗ್ರಾಮದ ಭರಣ್ಯ ಮತ್ತು ಪಾರ್ಪಳ ದಲ್ಲಿ ಜರಗಿತು. 


ಭರಣ್ಯ ಕಾರ್ತಿಕೇಯ ಜನರಲ್ ಸ್ಟೋರ್ ವಠಾರದಲ್ಲಿ ನಡೆದ ಸಭೆಯು ಪಾಣಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ ಸದಾನಂದ ನಾಯ್ಕ ಭರಣ್ಯ ಇವರ ಅಧ್ಯಕ್ಷತೆಯಲ್ಲಿ ಜರಗಿತು.ಟ್ರಸ್ಟಿನ ಸದಸ್ಯರಾದ ಬಾಲಕೃಷ್ಣ ಪೂಜಾರಿ ಸಮ್ಮೇಳನದ ರೂಪು ರೇಷೆಗಳನ್ನು ತಿಳಿಸಿದರು.ಪುತ್ತೂರು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಡಾ.ಹಾಜಿ.ಯಸ್.ಅಬೂಬಕ್ಕರ್ ಆರ್ಲಪದವು ಪ್ರಾಸ್ತಾವಿಕವಾಗಿ ಮಾತನಾಡಿ ಅಶೋಕ ಜನ - ಮನ ಮಹಾ ಸಮ್ಮೇಳನ ಯಶಸ್ವಿಗೆ ಸಹಕರಿಸಲು ಕರೆ ನೀಡಿದರು. ಜನ ಸಂಪರ್ಕ ಸಭೆಗಳ ಉಸ್ತುವಾರಿಗಳಾಗಿ ಆಗಮಿಸಿದ ಟ್ರಸ್ಟಿನ ಸದಸ್ಯರುಗಳಾದ ಯೋಗೀಶ ಸಾಮಾನಿ, ಪ್ರವೀಣ, ಆರ್ಯಾಪು ವಲಯ ಕಾಂಗ್ರೇಸ್ ಅಧ್ಯಕ್ಷರಾದ ಗಿರೀಶ ರೈ ಕೈಕಾರ. 


ಪಾಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮೈಮೂನತುಲ್ ಮೆಹ್ರಾ, ಸದಸ್ಯರುಗಳಾದ ನಾರಾಯಣ ನಾಯಕ್, ವಿಮಲ, ಹಿರಿಯ ಮುಖಂಡರಾದ ವಿಶ್ವನಾಥ ರೈ ಕಡಮಾಜೆ, ಪಾಣಾಜೆ ಸಿ ಎ ಬ್ಯಾಂಕ್ ನಿರ್ದೇಶಕರಾದ ಸದಾಶಿವ ರೈ ಸೂರಂಬೈಲು, ಬಾಲಕೃಷ್ಣ ರೈ ಸೂರಂಬೈಲು, ಕಾಂಗ್ರೇಸ್ ಬೂತ್ ಅಧ್ಯಕ್ಷರುಗಳಾದ ಸೆಲೀಂ ತೋಡುಬಳಿ ಮತ್ತು ಶ್ರೀನಿವಾಸ ಭರಣ್ಯ, ಅದ್ರು ಯಾನೆ ಅಬ್ದುಲ್ ಅಝೀಝ್ ಬೊಳ್ಳಿಂಬಲ, ಪಾಣಾಜೆ ಸಿ ಎ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಜಾಣು ನಾಯ್ಕ, ಸುರೇಶ ರೈ ಗಿಳಿಯಾಲು, ಸುಜಾತ ರೈ ಸೂರಂಬೈಲು, ನಾರಾಯಣ ನಾಯ್ಕ ನಡುಮನೆ, ಸಂತೋಷ್ ರೈ ಗಿಳಿಯಾಲು,


 ರಮೇಶ ಗುರಿಕ್ಕೇಲು, ತಾರಾ ಗಿಳಿಯಾಲು, ಗೀತಾ ಸೂರಂಬೈಲು,ಜಯಲಕ್ಷ್ಮಿ ರೈ ಸೂರಂಬೈಲು, ಅಂಬಿಕಾ ಭರಣ್ಯ, ರಾಜೀವಿ ರೈ ಸೂರಂಬೈಲು, ನೋಣಯ್ಯ ಭರಣ್ಯ, ಸಂತೋಷ ರೈ ಗಿಳಿಯಾಲು, ಸುಂದರ ಭರಣ್ಯ, ಜಯಶ್ರೀ ರೈ ಗಿಳಿಯಾಲು, ಕೃಷ್ಣ ನಾಯ್ಕ ಕಲ್ಲಪದವು, ಶಿವಪ್ಪ ನಾಯ್ಕ, ಸವಿತಾ ಭರಣ್ಯ ಹಾಗೂ ಶಾಸಕರ ಅಭಿಮಾನಿಗಳು, ಹಿತೈಷಿಗಳು ಉಪಸ್ಥಿತರಿದ್ದರು.


 ಟ್ರಸ್ಟಿನ ಸದಸ್ಯರೂ ಮೆಸ್ಕಾಂ ಸಲಹಾಸಮಿತಿ ಸದಸ್ಯರೂ ಆದ ಬಾಬು ರೈ ಕೋಟೆ ಸ್ವಾಗತಿಸಿ, ರಾಜ್ಯ ಯುವ ಕಾಂಗ್ರೇಸ್ ಕಾರ್ಯದರ್ಶಿ ಶ್ರೀಪ್ರಸಾದ್ ಪಾಣಾಜೆ ವಂದಿಸಿದರು.
Next Post Previous Post