ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಉಸ್ತಾದರಿಗೆ ಶ್ರೀನಾರಾಯಣ ಗುರು ಸಹೋದರ್ಯ ಪ್ರಶಸ್ತಿ.
ತಿರುವನಂತಪುರಂ: ಸ್ವಾಮಿ ಶಾಶ್ವತೀಕಾನಂದ ಸಾಂಸ್ಕೃತಿಕ ಕೇಂದ್ರ ಏರ್ಪಡಿಸಿದ ಪ್ರಥಮ ಶ್ರೀನಾರಾಯಣ ಗುರು ಸಹೋದರ್ಯ ಪ್ರಶಸ್ತಿಗೆ ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಅವರನ್ನು ಆಯ್ಕೆ ಮಾಡಲಾಗಿದೆ. ಎಸ್‌ಎನ್‌ಡಿಪಿ ಸಂಘದ ಮಾಜಿ ಅಧ್ಯಕ್ಷ ಅಡ್ವ. ಸಿ.ಕೆ. ವಿದ್ಯಾಸಾಗರ್ (ಅಧ್ಯಕ್ಷ), ಮಾಜಿ ರಾಜ್ಯಸಭಾ ಸಂಸದ ಸಿ. ಹರಿದಾಸ್, ಎಂ.ಜಿ. ವಿಶ್ವವಿದ್ಯಾಲಯದ ಸಾಮಾಜಿಕ ವಿಜ್ಞಾನ ಶಾಲೆಯ ಪ್ರೊ. ಡಾ. ರಾಜೇಶ್ ಕೋಮತ್ ಅವರನ್ನು ಸದಸ್ಯರನ್ನಾಗಿಟ್ಟ ಜೂರಿಯೇ ಪ್ರಶಸ್ತಿ ನಿರ್ಣಯ ಕೈಗೊಂಡಿತು. ಈ ಪ್ರಶಸ್ತಿಯೂ ಒಂದು ಲಕ್ಷ ರೂಪಾಯಿ, ಪ್ರಶಸ್ತಿ ಪತ್ರ ಹಾಗೂ ಫಲಕವನ್ನು ಒಳಗೊಂಡಿರುತ್ತದೆ.
ಕಳೆದ ಏಳು ದಶಕಗಳಿಂದಲೂ, ಕೇರಳದ ಸಾಮಾಜಿಕ ವಲಯದಲ್ಲಿ ಸಕ್ರಿಯ ಸಾನಿಧ್ಯವಾಗಿದ್ದವರು ಶ್ರೀ ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್. ಸ್ವಾತಂತ್ರ್ಯ ಪೂರ್ವ ಕಾಲದ ಮಲಬಾರಿನ ಅತಿ ಸಾಮಾನ್ಯ ಕೃಷಿಕ ಕುಟುಂಬದಲ್ಲಿ ಜನಿಸಿ, ಜಾಗತಿಕ ಮಾನ್ಯತೆ ಪಡೆದ ಮುಸ್ಲಿಂ ಪಂಡಿತನಾಗುವ ಮಟ್ಟಿಗೆ ಅವರ ಏರಿಕೆಯನ್ನು ಅದ್ಭುತಕರವೆಂದು ಘೋಷಿಸಲಾಗುತ್ತದೆ. ಮುಸ್ಲಿಂ ಧಾರ್ಮಿಕ ಪಂಡಿತನಾಗಿಯೂ ಸಮುದಾಯ ನಾಯಕರಾಗಿಯೂ ಅವರ ಕಾರ್ಯಗಳು ಸ್ವಾತಂತ್ರ್ಯಾನಂತರ ಕೇರಳದ ಮುಸ್ಲಿಂ ಸಮಾಜದ ಸ್ವಭಾವವನ್ನು ನಿರ್ಧರಿಸುವಲ್ಲಿ ಮಹತ್ವದ ಪಾತ್ರ ವಹಿಸಿವೆ.
ಆಧುನಿಕ ಕೇರಳದ ನಿರ್ಮಾಣದಲ್ಲಿ ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಹಾಗೂ ಅವರ ನೇತೃತ್ವದಲ್ಲಿ ನಡೆದ ಸಾಮಾಜಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳು ಮಹತ್ವದ ಪ್ರಭಾವ ಬೀರಿವೆ. ಹಿಂದುಳಿದ ವರ್ಗಗಳ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಪ್ರಗತಿಗಾಗಿ ಅವರು ನಡೆಸಿದ ಹೋರಾಟಗಳು ಇತಿಹಾಸದ ಭಾಗವಾಗಿದೆ. ಪಾರಂಪರ್ಯವನ್ನೂ ಆಧುನಿಕತೆಯನ್ನೂ ಸಂಯೋಜಿಸಿ ಅವರು ರೂಪಿಸಿದ ವಿಶಿಷ್ಟ ಕೇರಳ ಮುಸ್ಲಿಂ ಅಭಿವೃದ್ಧಿ ಮಾದರಿಯನ್ನು ಇಂದಿಗೆ ಭಾರತದ ಅನೇಕ ರಾಜ್ಯಗಳು ಅನುಸರಿಸುತ್ತಿವೆ.
ಇಸ್ಲಾಂ ಧರ್ಮಶಾಸ್ತ್ರದ ಬೋಧನೆಗಳಿಂದಲೇ ಇತರ ಸಮಾಜಗಳೊಂದಿಗೆ ಸಹೋದರತ್ವಪೂರ್ಣ ಸಹವಾಸವನ್ನು ಸಾಧ್ಯಮಾಡಿ, ಕೇರಳದ ಸ್ವಾಭಾವಿಕ ಸೌಹಾರ್ದ ಪರಂಪರೆಯನ್ನು ಅವರು ಬಲಪಡಿಸಿದ್ದಾರೆ. ತಮ್ಮ ಸಮುದಾಯದ ಹಕ್ಕುಗಳನ್ನು ಒತ್ತಾಯಿಸುವಾಗಲೂ ಇತರರ ಹಕ್ಕುಗಳಿಗೆ ಧಕ್ಕೆಯುಂಟಾಗದಂತೆ ನೋಡಿಕೊಂಡು, ಯಾರನ್ನೂ ನೋಯಿಸದಂತೆ ಎಚ್ಚರಿಕೆ ವಹಿಸುವ ಅವರ ಶೈಲಿ ಸಮುದಾಯ ನಾಯಕರಿಗೆ ಆದರ್ಶವಾಗಿದೆ.
ಸಮುದಾಯದ ಶಾಕ್ತೀಕರಣಕ್ಕಾಗಿ ಮಾಡಿದ ಸಾಧನೆಗಳ ಲಾಭವನ್ನು ಎಲ್ಲ ವರ್ಗಗಳ ಜನತೆಗೆ ತಲುಪುವಂತೆ ಹಂಚುವ ಅವರ ಮನೋಭಾವವು ಸಾಮುದಾಯಿಕತೆ ಎಂಬ ಪರಿಕಲ್ಪನೆಗೆ ಹೊಸ ಅರ್ಥ ನೀಡಿದೆ. ಇಂದಿನ ದಿನಗಳಲ್ಲಿ ಸಾಮುದಾಯಿಕತೆ ಮತ್ತು ವರ್ಣಭೇದಗಳ ನಡುವಿನ ಗಡಿ ಅಸ್ಪಷ್ಟವಾಗುತ್ತಿರುವ ಸಂದರ್ಭದಲ್ಲಿ, ಅವುಗಳ ನಡುವಿನ ವ್ಯತ್ಯಾಸವನ್ನು ನೆನಪಿಸುವ ಭರವಸೆಯ ಸಾನಿಧ್ಯವೇ ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಅವರದು.
ಮಾನವೀಯತೆ, ಸಹೋದರ್ಯ ಇವುಗಳ ಮೇಲೆ ನಿಂತು, ಸಾಮುದಾಯಿಕ ಶಕ್ತೀಕರಣ ಮತ್ತು ಸಾಮಾಜಿಕ ಅಭಿವೃದ್ಧಿ ಎಂಬ ಎರಡು ಅಂಶಗಳನ್ನು ಜೋಡಿಸಿ, ಶ್ರೀನಾರಾಯಣ ಗುರು ಮುಂದಿಟ್ಟ ಸಾಮಾಜಿಕ ಬದಲಾವಣೆಯ ಬೇರೆ ಸ್ವರೂಪವನ್ನೇ ಅವರು ಮುಂದಿಟ್ಟಿದ್ದಾರೆ ಎಂದು ಜೂರಿ ಅಭಿಪ್ರಾಯಪಟ್ಟಿದೆ.
ಶ್ರೀನಾರಾಯಣ ಗುರು ಅವರ ಆಶಯಗಳನ್ನು ಹಾಗೂ ಸಂಸ್ಥೆಗಳನ್ನೂ ಸಂಕುಚಿತ ವರ್ಣ ಹಿತಾಸಕ್ತಿಗಳಿಂದ ರಕ್ಷಿಸಲು ಸ್ವಜೀವನವನ್ನೇ ಅರ್ಪಿಸಿದ ಶಾಶ್ವತೀಕಾನಂದ ಸ್ವಾಮಿ ಅವರ ಹೆಸರಿನಲ್ಲಿ ಏರ್ಪಡಿಸಿರುವ ಈ ಪ್ರಶಸ್ತಿಯನ್ನು ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಅವರಿಗೆ ನೀಡುವ ಮೂಲಕ, ಗುರು ಮಾಡಿದ ಸಾಂಸ್ಕೃತಿಕ ದೌತ್ಯವನ್ನು ಸಮಕಾಲೀನ ಸಂದರ್ಭಗಳಲ್ಲಿ ಆವಿಷ್ಕರಿಸುತ್ತಿದ್ದೇವೆ ಎಂದು ಜೂರಿ ತಿಳಿಸಿದೆ. ಪ್ರಶಸ್ತಿ ಪ್ರದಾನ ಸಮಾರಂಭದ ದಿನಾಂಕ, ಸ್ಥಳವೂ ನಂತರ ಪ್ರಕಟಿಸಲಾಗುವುದೆಂದು ಸ್ವಾಮಿ ಶಾಶ್ವತೀಕಾನಂದ ಸಾಂಸ್ಕೃತಿಕ ಕೇಂದ್ರದ ನಿರ್ದೇಶಕ ಅಡ್ವ. ಅನೂಪ್ ವಿ.ಆರ್. ತಿಳಿಸಿದ್ದಾರೆ.