ಪುತ್ತೂರು: ಕಾಲೇಜಿನ ನೃತ್ಯ ಕಾರ್ಯಕ್ರಮವನ್ನು Instagram ನಲ್ಲಿ ಅವಾಚ್ಯ ಬರಹ ಮೂಲಕ ಪೋಸ್ಟ್: ಪ್ರಕರಣ ದಾಖಲು..!!


ಪುತ್ತೂರು: ಖಾಸಗಿ ಕಾಲೇಜಿನ ನೃತ್ಯ ಕಾರ್ಯಕ್ರಮದ ಸಂಬಂಧ ಇನ್‌ಸ್ಟಾಗ್ರಾಂನಲ್ಲಿ ಧಾರ್ಮಿಕ ವೈಮನಸ್ಸು ಉಂಟುಮಾಡುವ ರೀತಿಯ ಸುಳ್ಳು ಸಂದೇಶ ಹಾಕಿದ ಹಿನ್ನೆಲೆಯಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಪನ್ಯಾಸಕರಾದ ಜೋನ್ಸನ್ ಡೇವಿಡ್ ಸೀಕ್ವೆರ ಅವರ ದೂರಿನ ಮೇರೆಗೆ, @tm_bad_karma_990 ಎಂಬ instagram ಖಾತೆಯಲ್ಲಿ ಆಗಸ್ಟ್ 19ರಂದು , ನಡೆದ ನೃತ್ಯ ಕಾರ್ಯಕ್ರಮದಲ್ಲಿ ಒಂದು ಸಮುದಾಯದ ವಿದ್ಯಾರ್ಥಿನಿಯರು ಭಾಗವಹಿಸಿದ್ದನ್ನು ಟೀಕಿಸಿ, ಧರ್ಮದ ಆಧಾರದ ಮೇಲೆ ವಿಭಜನೆ ಉಂಟುಮಾಡುವಂತಹ ಮತ್ತು ಸುಳ್ಳು ಮಾಹಿತಿ ಒಳಗೊಂಡ ಪೋಸ್ಟ್ ಮಾಡಿದ್ದಾನೆ. ಅಲ್ಲದೆ, ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಅವಾಚ್ಯ ಶಬ್ದಗಳನ್ನು ಬಳಸಿ ಬೆದರಿಕೆ ಹಾಕಿರುವುದು ದೂರಿನಲ್ಲಿ ತಿಳಿಸಲಾಗಿದೆ.

ಈ ಸಂಬಂಧಿಸಿದಂತೆ 77/2025, 500 196(1)(a)(b), 351(2), 352 BNS 2023 ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
Next Post Previous Post