ಪಾಣಾಜೆ ಗ್ರಾಮ ಪಂಚಾಯತ್ ಅರಿವು ಕೇಂದ್ರದಲ್ಲಿ ಬೇಸಿಗೆ ಶಿಬಿರ ಉದ್ಘಾಟನೆ


ಪುತ್ತೂರು: ಪಾಣಾಜೆ ಗ್ರಾಮ ಪಂಚಾಯತಿಯ ಅರಿವು ಕೇಂದ್ರದಲ್ಲಿ ಸರಕಾರದ ಆದೇಶದಂತೆ ನಡೆಯುವ ಗ್ರಾಮೀಣ ಮಕ್ಕಳಿಗಾಗಿ ವಿಶೇಷ ಬೇಸಿಗೆ ಶಿಬಿರವನ್ನು ಪಾಣಾಜೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಅರಿವು ಕೇಂದ್ರದ ಸಲಹಾ ಸಮಿತಿ ಸದಸ್ಯರಾದ ಡಾ.ಹಾಜಿ.ಎಸ್ ಅಬೂಬಕ್ಕರ್ ಆರ್ಲಪದವು ದೀಪ ಬೆಳಗಿಸಿ ಉದ್ಘಾಟಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ಅವರು ಶಿಬಿರದಲ್ಲಿ ಮಕ್ಕಳಿಗೆ ಉಪಯುಕ್ತ ಮಾಹಿತಿಗಳನ್ನು ನೀಡಿ ಮಕ್ಕಳಲ್ಲಿ ಸೃಜನಶೀಲತೆ ಹೊಸ ಕೌಶಲ್ಯಗಳನ್ನು ಬೆಳೆಸುವ ರೀತಿಯಲ್ಲಿ ಮಾಹಿತಿಯನ್ನು ನೀಡಬೇಕು ಪಂಚಾಯತ್ ಪಿಡಿಒಗಳು ಆಡಳಿತಾತ್ಮಕವಾದ ಸಂಪೂರ್ಣ ಬೆಂಬಲ ನೀಡಿ ಕಾರ್ಯಕ್ರಮ ಯಶಸ್ಸಿಗೊಳಿಸಿ ಕೊಡಬೇಕು ಹಾಗೂ ಎಲ್ಲಾ ವಿದ್ಯಾರ್ಥಿಗಳು ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.



 ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆಶಾ ಬಿ ಪ್ರಾಥಮಿಕ ಶಾಲಾ ಟಿಜಿಟಿ ಶಿಕ್ಷಕರಾದ ವೆಂಕಟೇಶ್ ಸಿ ಆರ್ ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. 







ವೇದಿಕೆಯಲ್ಲಿ ಆಶಾ ಕಾರ್ಯಕರ್ತೆ ರತ್ನಕುಮಾರಿ ವಿಆರ್ ಡಬ್ಲ್ಯೂ ಎಸ್ ಅಬ್ದುಲ್ ಅಜೀಝ್ ಉಪಸ್ಥಿತರಿದ್ದರು ವಿದ್ಯಾರ್ಥಿನಿ ರಿಫಾನ ಪ್ರಾರ್ಥನೆ ಹಾಡಿದರು . ಅರಿವು ಕೇಂದ್ರದ ಮೇಲ್ವಿಚಾರಕಿ ಭಾಗೀರಥಿ ಸ್ವಾಗತಿಸಿ ವಂದಿಸಿದರು.
Next Post Previous Post