ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಯವರಿಗೆ ಸಚಿವ ಸ್ಥಾನ ಲಭಿಸಲೆಂದು ಕರವಡ್ತ ವಲಿಯುಲ್ಲಾಹಿ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ
ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಅಶೋಕ್ ಕುಮಾರ್ ರೈ ಅವರು ರಾಜ್ಯದ ನೂತನ ಸಚಿವ ಸಂಪುಟದಲ್ಲಿ ಮಂತ್ರಿಯಾಗಿ ಸ್ಥಾನ ಪಡೆಯಲಿ ಎಂದು ಹಾರೈಸಿ ಪುತ್ತೂರಿನ ಪ್ರಸಿದ್ಧ ಝಿಯಾರತ್ ಕೇಂದ್ರವಾದ ಕರವಡ್ತ ವಲಿಯುಲ್ಲಾಹಿ ದರ್ಗಾ ಸನ್ನಿಧಿಯಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೇಸ್ ಅಲ್ಪಸಂಖ್ಯಾತ ಘಟಕದ ನೇತೃತ್ವದಲ್ಲಿ ಮುಖಂಡರು ಹಾಗೂ ಅಭಿಮಾನಿಗಳಿಂದ ವಿಶೇಷ ಪ್ರಾರ್ಥನೆ (ದುವಾ) ಸಲ್ಲಿಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ಹಾಜಿ ಆಜಾದ್ ಅವರು ವಹಿಸಿದ್ದರು. ಇಸ್ಮಾಯಿಲ್ ಮುಸ್ಲಿಯಾರ್ ಅವರು ಪ್ರಾರ್ಥನೆಗೆ (ದುವಾ) ನೇತೃತ್ವ ವಹಿಸಿ, ಶಾಸಕರಿಗೆ ಸಚಿವ ಸ್ಥಾನ ಒಲಿಯಲಿ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಇನ್ನಷ್ಟು ಬಲ ಸಿಗಲಿ ಎಂದು ಹಾರೈಸಿದರು.
ಅಶೋಕ್ ಕುಮಾರ್ ರೈ ಅವರಿಗೆ ಸಚಿವ ಸ್ಥಾನ ನೀಡಿದರೆ ಪುತ್ತೂರು ಹಾಗೂ ಕರಾವಳಿ ಭಾಗದ ಅಭಿವೃದ್ಧಿಗೆ ಇನ್ನಷ್ಟು ವೇಗ ದೊರೆಯಲಿದೆ ಎಂದು ಪ್ರಾರ್ಥನೆಯಲ್ಲಿ ಪಾಲ್ಗೊಂಡ ಮುಖಂಡರು ಆಶಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಡಾ. ಹಾಜಿ ಎಸ್. ಅಬೂಬಕ್ಕರ್ ಆರ್ಲಪದವು, ಪ್ರಮುಖ ಮುಖಂಡರುಗಳಾದ ಇಬ್ರಾಹಿಂ ಗೋಳಿಕಟ್ಟೆ, ನೌಷಾದ್ ಹಾಜಿ ಬೊಳ್ವಾರು, ಯಾಕೂಬ್ ಮುಲಾರ್ ,ಉಮ್ಮರ್ ದಾರಿಮಿ ಸಾಲ್ಮರ, ಬಶೀರ್ ಪರ್ಲಡ್ಕ, ಶಾಹುಲ್ ಹಮೀದ್ ಕಟ್ಲೇರಿ, ಶರೀಫ್ ಬಲ್ನಾಡು, ಮೊಯಿದು ಕುಂಞಿ ಕೋನಡ್ಕ , ಹಸನ್ ಸಾಲ್ಮರ, ಇಮ್ರಾನ್ ಪುರುಷರಕಟ್ಟೆ, ಎಂ ಬಿ ಇಸ್ಮಾಯಿಲ್ ಬಲ್ನಾಡು, ಇಸ್ಮಾಯಿಲ್ ಯಮಾನಿ, ಯು ಪಿ ಮಜೀದ್ ಬಲ್ನಾಡು, ಸತ್ತಾರ್ ಬಲ್ನಾಡು, ಯು ಪಿ ಉಮ್ಮರ್ ಬಲ್ನಾಡು, ರಝಾಕ್ ಹಾಜಿ ಕೂಟತ್ತಾನ, ಅಬ್ದುಲ್ ಖಾದ್ರಿ ಸಾಲ್ಮರ, ಸಿಂಸಾರುಲ್ ಹಖ್ ಆರ್ಲಪದವು ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಅಲ್ಪಸಂಖ್ಯಾತ ಘಟಕದ ಪ್ರ.ಕಾರ್ಯದರ್ಶಿ ಶೆರೀಫ್ ಕೊಯಿಲಾ ಅವರು ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು. ಪುತ್ತೂರು ಕ್ಷೇತ್ರದ ಜನತೆಯ ಆಶಯದಂತೆ ಶಾಸಕರಿಗೆ ನೂತನ ಸಚಿವ ಸಂಪುಟದಲ್ಲಿ ಉನ್ನತ ಸ್ಥಾನಮಾನ ದೊರೆತು, ಕ್ಷೇತ್ರದ ಕೀರ್ತಿ ಹೆಚ್ಚಲಿ ಎಂದು ನೆರೆದಿದ್ದವರು ಶುಭ ಹಾರೈಸಿದರು.