ಸಾಮರಸ್ಯಕ್ಕೆ ಮಾದರಿ ಪಾಣಾಜೆ ಗ್ರಾಮ – ಡಾ. ಹಾಜಿ ಎಸ್. ಅಬೂಬಕ್ಕರ್, ಆರ್ಲಪದವು

ಪುತ್ತೂರು: ಏ05.ಪಾಣಾಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆರ್ಲಪದವಿನಲ್ಲಿ, ದಿನಾಂಕ ಏಪ್ರಿಲ್ 04 ರಿಂದ 10 ರವರೆಗೆ ಡಾಕ್ಟರ್ ಎಂ.ವಿ. ಶೆಟ್ಟಿ ಇನ್ಸ್ಟಿಟ್ಯೂಟ್ ಆಫ್ ಪ್ರೊಫೆಷನಲ್ ಸೈನ್ಸ್ ಅಂಡ್ ಮ್ಯಾನೇಜ್ಮೆಂಟ್, ಮಂಗಳೂರು ವತಿಯಿಂದ ಆಯೋಜಿಸಲಾದ ಗ್ರಾಮೀಣ ಶಿಬಿರ 2026ರ ಅಂಗವಾಗಿ ಪಾಣಜೆ ಗ್ರಾಮದ ಪರಿಚಯದ ಕುರಿತಾಗಿ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಭಾರತ ಸೇವಾ ರತ್ನ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಡಾ. ಹಾಜಿ ಎಸ್. ಅಬೂಬಕ್ಕರ್ ಆರ್ಲಪದವು, ಪಾಣಾಜೆ ಗ್ರಾಮದ ಇತಿಹಾಸ, ಪ್ರವಾಸಿ ತಾಣಗಳು, ದೈವಸ್ಥಾನಗಳು, ಧಾರ್ಮಿಕ ಕೇಂದ್ರಗಳು ಹಾಗೂ ಗ್ರಾಮದಲ್ಲಿನ ಸಾಮರಸ್ಯದ ವಿಶೇಷತೆಯ ಕುರಿತು ವಿವರವಾಗಿ ತಿಳಿಸಿದರು. ವಿವಿಧ ಧರ್ಮ ಮತ್ತು ಸಂಸ್ಕೃತಿಗಳ ಜನರು ಸಹಬಾಳ್ವೆಯಿಂದ ಜೀವನ ನಡೆಸುತ್ತಿರುವುದು ಈ ಗ್ರಾಮದ ಪ್ರಮುಖ ವೈಶಿಷ್ಟ್ಯವೆಂದು ಅವರು ಹೇಳಿದರು.


ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಣಾಜೆಯ ಪದವಿಧರ ಶಿಕ್ಷಕರಾದ ವೆಂಕಟೇಶ್ ಸಿ.ಆರ್ ರವರು ಗ್ರಾಮೀಣ ಶಿಬಿರದಲ್ಲಿ ವಿದ್ಯಾರ್ಥಿಗಳು ಕೈಗೊಳ್ಳಬೇಕಾದ ಕಾರ್ಯಗಳು, ಸಾಮಾಜಿಕ ಜವಾಬ್ದಾರಿಗಳು ಹಾಗೂ ಗ್ರಾಮಾಭಿವೃದ್ಧಿಗೆ ಸಂಬಂಧಿಸಿದ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಉಮರ್ ಜನಪ್ರಿಯ, ದೈಹಿಕ ಶಿಕ್ಷಕರಾದ ಸುಧಾಕರ ಗಿಳಿಯಾಲು, ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ರಕ್ಷಾ ಸಮಿತಿ ಸದಸ್ಯರು ವಿಶ್ವನಾಥ ರೈ ಕಡಮಾಜೆ, ಶಿಬಿರದ ಸಂಯೋಜಕರಾದ ಶ್ರೀಮತಿ ಸ್ವಾತಿ ಜೈನ್ ಹಾಗೂ ಶ್ರೀಮತಿ ವಿನುತಾ ಕೆ, ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಈ ಶಿಬಿರವು ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಅರಿವು ಹೆಚ್ಚಿಸುವುದರ ಜೊತೆಗೆ ಗ್ರಾಮೀಣ ಅಭಿವೃದ್ಧಿಗೆ ಪ್ರೇರಣೆ ನೀಡುವಲ್ಲಿ ಪ್ರಮುಖ ಪಾತ್ರವಹಿಸಲಿದೆ ಎಂಬ ವಿಶ್ವಾಸ ವ್ಯಕ್ತವಾಯಿತು. ಸಮಾಜ ಕಾರ್ಯದ ವಿದ್ಯಾರ್ಥಿನಿ ಲಿಖಿತ ಕಾರ್ಯಕ್ರಮ ನಿರೂಪಿಸಿದರು



Next Post Previous Post